ವೈಮಾನಿಕ ದಾಳಿ ಭೀತಿಯಿಂದ ಬಂದ್ ಆಗಿದ್ದ ವಿಮಾನ ನಿಲ್ದಾಣ ಪುನನರಾರಂಭ
ನವದೆಹಲಿ, ಫೆಬ್ರವರಿ 27: ದಾಳಿ ಭೀತಿಯಿಂದ ಮುಚ್ಚಲಾಗಿದ್ದ 09 ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆಯನ್ನು ಮುಂದುವರೆಸಲಾಗಿದೆ.
ಪಂಜಾಬ್ ಸೇರಿದಂತೆ ಗಡಿಗೆ ಹತ್ತಿರವಿರುವ 09 ವಿಮಾನ ನಿಲ್ದಾಣಗಳಲ್ಲಿ ಹಾರಾಟ ಬಂದ್ ಮಾಡಲಾಗಿತ್ತು. ಆದರೆ ಅದನ್ನು ಈಗ ಪುನಃ ಪ್ರಾರಂಭ ಮಾಡಲಾಗಿದ್ದು, ವಿಮಾನ ಹಾರಾಟ ಮಾಮೂಲಿನಂತೆ ನಡೆಯಲಿದೆ.
ಭಾರತದ ಪಠಾಣ್‌ಕೋಟ್, ದೆಹಲಿ, ಪಂಜಾಬ್, ಜಮ್ಮು, ಶಿಮ್ಲಾಡೆಹ್ರಾಡೂನ್, ಶ್ರೀನಗರ, ಲೇಹ್ ಇನ್ನೂ ಕೆಲವೆಡೆ ವಿಮಾನ ಹಾರಾಟ ಬಂದ್ ಮಾಡಲಾಗಿತ್ತು. ವೈಮಾನಿಕ ದಾಳಿಯ ಭೀತಿ ಇರುವ ಕಾರಣ ವಿಮಾನ ಹಾರಾಟಕ್ಕೆ ತಡೆ ನೀಡಲಾಗಿತ್ತು.

ಭಾರತವು ವಿಮಾನ ಹಾರಾಟದ ಮೇಲೆ ಹೇರಿದ್ದ ತಡೆಯನ್ನು ತೆಗೆದಿದೆ ಆದರೆ ಪಾಕಿಸ್ತಾನದಲ್ಲಿ ತಡೆ ಮುಂದುವರೆದಿದೆ. ಪಾಕಿಸ್ತಾನದ ಹಲವು ವಿಮಾನ ನಿಲ್ದಾಣಗಳು ಬಂದ್ ಆಗಿವೆ.












Click it and Unblock the Notifications