ರಾಪಿಡ್ ಟೆಸ್ಟ್ ಕಿಟ್ ತರಲು ಚೀನಾಕ್ಕೆ ಒಂದೇ ಒಂದು ರುಪಾಯಿ ಕೊಟ್ಟಿಲ್ಲ; ಕೇಂದ್ರ
ನವದೆಹಲಿ, ಏಪ್ರಿಲ್ 27 : ಗುಣಮಟ್ಟದ ಸಮಸ್ಯೆ ಕಂಡು ಬಂದಿದ್ದ ಕೊರೊನಾ ವೈರಸ್‌ನ ರಾಪಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸುವ ಆದೇಶವನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
Recommended Video
ಚೀನಾದ ಎರಡು ಕಂಪನಿಗಳಿಂದ ದುಪ್ಪಟ್ಟು ಹಣ ನೀಡಿ ಕೇಂದ್ರ ಸರ್ಕಾರ ರಾಪಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಿತ್ತು ಎಂದು ಆರೋಪಿಸಲಾಗಿತ್ತು. ಇದು ತೀವ್ರ ವಿವಾದ ಹುಟ್ಟಿಹಾಕಿತ್ತು. ಈ ಬಗ್ಗೆ ಸೋಮವಾರ ಸ್ಪಷ್ಟನೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ( ICMR), ಕಿಟ್‌ಗಳ ಖರೀದಿಗೆ ಇದುವರೆಗೆ ಚೀನಾದ ಕಂಪೆನಿಗಳಿಗೆ ಒಂದೇ ಒಂದು ರುಪಾಯಿ ಪಾವತಿಸಿಲ್ಲ ಎಂದು ಹೇಳಿದೆ.
ರಾಪಿಡ್ ಟೆಸ್ಟ್ ಕಿಟ್‌ಗಳ ಖರೀದಿ ಅವ್ಯವಹಾರ ಆಗಿದೆ ಎಂದು ವಕೀಲರೊಬ್ಬರ ಅರ್ಜಿ ಪರಿಗಣಿಸಿ ದೆಹಲಿ ಹೈಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ಕಿಟ್‌ಗಳ ಖರೀದಿಗೆ ಯಾವುದೇ ಮುಂಗಡ ಹಣ ನೀಡಿಲ್ಲ. ಖರೀದಿ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ICMR ತಿಳಿಸಿದೆ. ಈ ಮೂಲಕ ICMR ವಿವಾದಕ್ಕೆ ತೆರೆ ಎಳೆಯಲು ನೋಡಿದೆ.

ಈಗಾಗಲೇ ದೋಷಪೂರಿತ ಪರೀಕ್ಷಾ ಕಿಟ್‌ಗಳ ಬಳಕೆಯನ್ನು ನಿಲ್ಲಿಸುವಂತೆ ಐಎಂಆರ್‌ಸಿ ವೈದ್ಯಕೀಯ ಸಂಸ್ಥೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.












Click it and Unblock the Notifications