ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ಅಪರಾಧಿ ಹೊಸ ತಂತ್ರ
ನವದೆಹಲಿ, ಫೆಬ್ರವರಿ 20: ಗಲ್ಲು ಶಿಕ್ಷೆಗೆ ಗುರಿಯಾಗಿ ನೇಣೂಗಂಬಕ್ಕೆ ಏರಲಿರುವ ನಿರ್ಭಯಾ ಅತ್ಯಾಚಾರ ಅಪರಾಧಿಗಳು ನೇಣು ಶಿಕ್ಷೆ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ನಿರ್ಭಯಾ ಅತ್ಯಾಚಾರ ಅಪರಾಧಿ ವಿನಯ್ ಶರ್ಮಾ ಎಂಬಾತ ನಿನ್ನೆ ಗೋಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಗೊಂಡವರನ್ನು, ಅನಾರೋಗ್ಯಕ್ಕೆ ತುತ್ತಾದವರನ್ನು ಅವರು ಆರೋಗ್ಯವಂತರಾಗುವ ವರೆಗೂ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ. ಈ ಕಾನೂನಿನ ಲಾಭ ಪಡೆಯಲೆಂದು ಆರೋಪಿ ವಿನಯ್ ಶರ್ಮಾ ಗೋಡೆಗೆ ತಲೆ ಚಚ್ಚಿಕೊಂಡನೆ ಎಂಬ ಅನುಮಾನ ವ್ಯಕ್ತವಾಗಿದೆ.

ಫೆಬ್ರವರಿ 16 ರಂದು ಆತ ತನ್ನ ಜೈಲು ಕೋಣೆಯ ಗೋಡೆಗೆ ತಲೆಚಚ್ಚಿಕೊಂಡಿದ್ದಾನೆ. ಕೋಣೆಯ ಭದ್ರತಾ ಸಿಬ್ಬಂದಿ ಆತನನ್ನು ತಡೆದರಾದರೂ, ವಿನಯ್ ಶರ್ಮಾ ತಲೆಗೆ ಬಲವಾದ ಗಾಯವಾಗಿದೆ.
ಈ ಹಿಂದೆ ವಿನಯ್ ಶರ್ಮಾ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದಂತೆ, 'ವಿನಯ್ ಶರ್ಮಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾನೆ. ಆತನ ಮೇಲೆ ಜೈಲಿನಲ್ಲಿ ಹಲ್ಲೆ ಆಗಿದೆ' ಎಂದಿದ್ದರು. ವಿನಯ್ ಶರ್ಮಾ ನನ್ನು ಸೂಕ್ತವಾಗಿ ನೋಡಿಕೊಳ್ಳುವಂತೆ ನ್ಯಾಯಾಲಯವು ಹೇಳಿತ್ತು.
ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಹೊಸ ಡೆತ್ ವಾರೆಂಟ್ ಹೊರಡಿಸಿ ಮಾರ್ಚ್ ಮೂರರಂದು ಗಲ್ಲು ಶಿಕ್ಷೆ ವಿಧಿಸಬೇಕಾಗಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.












Click it and Unblock the Notifications