• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಜೆಇಇ, ನೀಟ್ ಪರೀಕ್ಷೆ ಬಗ್ಗೆ ಮಾತನಾಡಲಿಲ್ಲವೇಕೆ ಪ್ರಧಾನಿ ಮೋದಿ?"

|

ನವದೆಹಲಿ, ಆಗಸ್ಟ್.30: ಪ್ರಧಾನಮಂತ್ರಿ ನರೇಂದ್ರ ಮೋದಿಯವರು "ಪರೀಕ್ಷಾ ಪೇ ಚರ್ಚಾ"(ಪರೀಕ್ಷೆಗಳ ಬಗ್ಗೆ ಮಾತು) ನಡೆಸುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದರು. ಆದರೆ ಪ್ರಧಾನಿಯವರು "ಖಿಲೋನೇ ಪೇ ಚರ್ಚಾ"(ಆಟಿಕೆಗಳ ಬಗ್ಗೆ ಮಾತು)ಕ್ಕೆ ತಮ್ಮ 68ನೇ ಮನ್ ಕೀ ಬಾತ್ ನ್ನು ಸೀಮಿತರಾಗಿದ್ದಾರೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಬಗ್ಗೆ ಸಂಸದ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ. ದೇಶವನ್ನು ಆಡಿಕೆಗಳ ಉತ್ಪಾದನೆ ಕೇಂದ್ರವನ್ನಾಗಿಸುವ ಮಾತುಗಳಿಗಷ್ಟೇ ಮನ್ ಕೀ ಬಾತ್ ಸೀಮಿತವಾಗಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ನಡುವೆ 2020ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(NEET) ಮತ್ತು ಜಂಟಿ ಪ್ರವೇಶ ಪರೀಕ್ಷೆ(JEE)ಗಳ ಬಗ್ಗೆ ಪ್ರಧಾನ ಮೋದಿಯವರು ಏಕೆ ಪ್ರಸ್ತಾಪಿಸಲಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ ಮಾತು

ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಹೇಳಿದ ಮಾತು

ಕರ್ನಾಟಕ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್ ನಲ್ಲಿ ಪ್ರಸ್ತಾಪಿಸಿದರು. ಆಟಿಕೆಗಳ ಉತ್ಪಾದನೆ ವಲಯವು ಅವನತಿಯತ್ತ ಸಾಗುತ್ತಿದೆ. ಆಟಿಕೆಗಳನ್ನು ಸಿದ್ಧಪಡಿಸುವ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ. ದೇಶೀಯ ಆಟಿಕೆಗಳನ್ನು ಬಳಸುವುದನ್ನು ಕಲಿಯಬೇಕಿದೆ. ದೇಶೀ ಆಟಿಕೆಗಳ ಉತ್ಪಾದನಾ ಕೈಗಾರಿಕೆಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ದೇಶವೇ ಒಂದಾಗಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ನರೇಂದ್ರ ಮೋದಿ ಮನ್ ಕೀ ಬಾತ್; ಮುಖ್ಯಾಂಶಗಳು

ನೀಟ್, ಜೆಇಇ ಪರೀಕ್ಷೆ ಬಗ್ಗೆ ಪ್ರಧಾನಿ ನಿರ್ಲಕ್ಷ್ಯ

ನೀಟ್, ಜೆಇಇ ಪರೀಕ್ಷೆ ಬಗ್ಗೆ ಪ್ರಧಾನಿ ನಿರ್ಲಕ್ಷ್ಯ

ಆಟಿಕೆಗಳ ಉತ್ಪಾದನೆಗೂ ಮುಖ್ಯವಾಗಿ ವಾಸ್ತವದಲ್ಲಿ ಚರ್ಚೆ ಆಗುತ್ತಿದ್ದ ಜೆಇಇ ಮತ್ತು ನೀಟ್ ಪರೀಕ್ಷೆಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಒಂದು ಶಬ್ಧವೂ ಮಾತನಾಡಲಿಲ್ಲವೇಕೆ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯೇತರ ರಾಜ್ಯಗಳಿಂದ ಮರುಪರಿಶೀಲನಾ ಅರ್ಜಿ

ಬಿಜೆಪಿಯೇತರ ರಾಜ್ಯಗಳಿಂದ ಮರುಪರಿಶೀಲನಾ ಅರ್ಜಿ

ಸಪ್ಟೆಂಬರ್ ತಿಂಗಳಿನಲ್ಲೇ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಬಾರದು. ಬದಲಿಗೆ ಈ ದಿನಾಂಕವನ್ನು ಮುಂದೂಡುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರೇತರ ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಗಳು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.

ನೀಟ್, ಜಿಇಇ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಮಾಹಿತಿ

ನೀಟ್, ಜಿಇಇ ಪರೀಕ್ಷೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಮಾಹಿತಿ

ಜೆಇಇ ಮುಖ್ಯ ಪರೀಕ್ಷಗಳನ್ನು ಸಪ್ಟೆಂಬರ್ 1 ರಿಂದ 6ರವರೆಗೆ ನಡೆಯಲಿದ್ದು, 9.53 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಸಪ್ಟೆಂಬರ್.13ರಂದು ನೀಟ್ ಪರೀಕ್ಷೆಗಾಗಿ 15.97 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. 8.58 ಲಕ್ಷ ಅಭ್ಯರ್ಥಿಗಳ ಪೈಕಿ 7.5 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದ್ದಾರೆ. ನೀಟ್‌ನಲ್ಲಿ 24 ಗಂಟೆಗಳಲ್ಲಿ 15.97 ಲಕ್ಷ ಅಭ್ಯರ್ಥಿಗಳ ಪೈಕಿ 10 ಲಕ್ಷ ಮಂದಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿದ್ದಾರೆ. ಇದರ ನಡುವೆ ಜೆಇಇ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 570ರಿಂದ 660ಕ್ಕೆ ಏರಿಕೆ ಮಾಡಲಾಗಿದೆ. 3842 ನೀಟ್ ಪರೀಕ್ಷಾ ಕೇಂದ್ರಗಳಿವೆ.

English summary
NEET, JEE 2020: Students Expect ‘Pariksha Pe Charcha’ But PM Did ‘Khilone Pe Charcha’: Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X