ಆಮ್ ಆದ್ಮಿಗೆ ಅನುಭವವಿಲ್ಲ; ನರೇಂದ್ರ ಮೋದಿಯೇ ಸರಿ'

'ನರೇಂದ್ರ ಮೋದಿ ಉತ್ತಮ ಮನುಷ್ಯ' ಎಂದ ಶ್ರೀ ರವಿಶಂಕರ್ ಅವರನ್ನು 'ಹಾಗಾದರೆ ರಾಹುಲ್ ಗಾಂಧಿ ಹೆಂಗೆ?' ಎಂದು ಕೇಳಿದ್ದಕ್ಕೆ 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಹೆಚ್ಚಾಗಿ ಸಂಪರ್ಕವಿಲ್ಲ. ಹಾಗಾಗಿ ಅವರ ಬಗ್ಗೆ ಹಾಗೆ ಹೇಳಲಾಗದು' ಎಂದಿದ್ದಾರೆ.
ಇಲ್ಲಿನ 'ಕ್ಲಬ್ ಹೌಸ್ ಗ್ರೌಂಡ್ಸ್'ನಲ್ಲಿ ದಿವ್ಯ ಉತ್ಸವ ಮತ್ತು ಮಹಾಸತ್ಸಂಗ ಎಂಬ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀ ರವಿಶಂಕರ್ ಸುದ್ದಿಗಾರರ ಜತೆ ಮಾತನಾಡುತ್ತಾ ತಮ್ಮ ಅನಿಸಿಕೆ ಹಂಚಿಕೊಂಡರು.
'ನರೇಂದ್ರ ಮೋದಿ ಅವರನ್ನು ಕೆಲ ಬಾರಿ ಭೇಟಿ ಮಾಡಿರುವೆ. ಅವರು ಒಳ್ಳೆಯ ಮನುಷ್ಯ ಅನಿಸಿದೆ' ಎಂದಿರುವ ಶ್ರೀ ರವಿಶಂಕರ್ 'ಸಮ್ಮಿಶ್ರ ಸರಕಾರಗಳು ದೊಡ್ಡ ವೈಫಲ್ಯಗಳು ಎಂಬುದು ಸಾಬೀತಾಗಿದೆ. ಹಾಗಾಗಿ ಬಹುಮತವಿರುವ ಏಕ ಪಕ್ಷದ ಸರಕಾರ ಇಂದಿನ ತುರ್ತುಅಗತ್ಯವಾಗಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಈಗಿರುವ ಸ್ಥಾಫಿತ ಪಕ್ಷಗಳಿಗೆ ಪರ್ಯಾಯವಾಗಿ ಆಮ್ ಆದ್ಮಿ ಪಕ್ಷ ಅಸ್ತಿತ್ವಕ್ಕೆ ಬಂದಿರುವುದರ ಬಗ್ಗೆ ಏನನ್ನಿಸುತ್ತದೆ ಎಂಬ ಪ್ರಶ್ನೆಗೆ ಭ್ರಷ್ಟಾಚಾರ ರಹಿತ ಸರಕಾರ ಅನ್ನಿಸುತ್ತಿದೆ. ಆದರೆ ಅನುಭವ ಸಾಲದು ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ.
'ಚಾಲಕನಿಗೆ ಕಲಿಕೆ ಪರವಾನಗಿ ಪತ್ರ ನೀಡಿ (ಎಲ್ಎಲ್) ದುರ್ಗಮ ಹಾದಿಯಲ್ಲಿ ವಾಹನ ಚಲಾಯಿಸುವಂತೆ ಹೇಳಿದಂತಿದೆ. ಆದ್ದರಿಂದ ಮತ್ತಷ್ಟು ಕಾಲ ಅವರ ಆಡಳಿತವನ್ನು ಕಾದುನೋಡಬೇಕಿದೆ. ಅಷ್ಟಕ್ಕೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾಲ ಪಕ್ವವಾಗಿಲ್ಲ' ಎಂದು ಶ್ರೀ ರವಿಶಂಕರ್ ಹೇಳಿದ್ದಾರೆ.
Vote For Better India
ಈ ಮಧ್ಯೆ, ಮತದಾರರನ್ನು ಜಾಗೃತಗೊಳಿಸುವ ಸಲುವಾಗಿ ಬೆಂಗಳೂರಿನ Art of Living Foundation ವತಿಯಿಂದ 'ಉತ್ತಮ ಭಾರತಕ್ಕಾಗಿ ಮತ ಹಾಕಿ' ಎಂಬ ಅಭಿಯಾನ ನಡೆಸುತ್ತಿದ್ದೇವೆ. ದೇಶದಲ್ಲಿ 12 ಕೋಟಿ ಮತದಾರರಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ಮತದಾನಕ್ಕೆ ನೋಂದಾಯಿಸಿಕೊಂಡು ತಮ್ಮಾಯ್ಕೆಯ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರನ್ನು ಪ್ರೇರೇಪಿಸಲಾಗುವುದು ಎಂದು ಶ್ರೀ ರವಿಶಂಕರ್ ತಿಳಿಸಿದ್ದಾರೆ.
ಶೇ. 100ರಷ್ಟು ಮತದಾನವಾಗಬೇಕು. ಆಗ ನಿಜವಾದ ಜನಪ್ರತಿನಿಧಿಗಳನ್ನು ಆರಿಸಲು ಸಾಧ್ಯವಾಗುತ್ತದೆ ಎಂದು ಈ ನಿಟ್ಟನಲ್ಲಿ voters' listsಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ನೆರವಾಗುವಂತೆ ನಮ್ಮ AOLನ ಸಾವಿರಾರು ಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಶ್ರೀ ರವಿಶಂಕರ್ ಹೇಳಿದ್ದಾರೆ.












Click it and Unblock the Notifications