ಅಕ್ರಮ ಸಂಬಂಧ ಒಪ್ಪದ ಯುವತಿಗೆ ಇರಿದ ಆರೋಪಿ ತಾನೂ ಕತ್ತು ಕುಯ್ದುಕೊಂಡ

ನವದೆಹಲಿ, ನವೆಂಬರ್ 27: ಮಾಜಿ ಪ್ರೇಯಸಿಯನ್ನು ಚಾಕುವಿನಿಂದ ಇರಿದ ವ್ಯಕ್ತಿಯೊಬ್ಬ ಆ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಸಂಬಂಧ ಮುಂದುವರಿಸಲು ನಿರಾಕರಿಸಿ, ಮತ್ತೊಬ್ಬ ವ್ಯಕ್ತಿಯೊಬ್ಬನನ್ನು ಮದುವೆ ಆಗಿದ್ದಕ್ಕೆ ಹೀಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಯುವತಿಯ ಸ್ಥಿತಿ ಗಂಭೀರವಾಗಿದ್ದರಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಆಕೆಗೆ ಚಾಕುವಿನಿಂದ ಇರಿದಿದ್ದವನನ್ನು ಬಂಧಿಸಲಾಗಿದೆ. ಯುವತಿಯು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದು, ಆರೋಪಿಯ ಬಳಿ ಪಾಠ ಹೇಳಿಸಿಕೊಳ್ಳಲು ಬರುವಾಗ ಆತ್ಮೀಯ ಸಂಬಂಧ ಬೆಳೆದಿತ್ತು.

ಅವರಿಬ್ಬರು ಮದುವೆ ಆಗಲು ಬಯಸಿದ್ದರು. ಆದರೆ ಅದಕ್ಕೆ ಆ ವ್ಯಕ್ತಿಯ ಪೋಷಕರು ಆಕ್ಷೇಪಿಸಿದ್ದರು. ಆತನಿಗೆ ಮತ್ತೊಬ್ಬ ಮಹಿಳೆ ಜತೆಗೆ ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ಆ ನಂತರವೂ ಸಂಬಂಧ ಮುಂದುವರಿಸುವಂತೆ ಆಕೆಯನ್ನು ಆರೋಪಿ ಒತ್ತಾಯಿಸುತ್ತಿದ್ದ. ಭಾನುವಾರ ರಾತ್ರಿ ಯುವತಿ ಜತೆಗೆ ಮಾತನಾಡಲು ಆಕೆ ಮನೆಗೆ ತೆರಳಿ, ಮಾತನಾಡುವಾಗಲೇ ಆರೋಪಿಯು ಸ್ಕ್ರೂ ಡ್ರೈವರ್ ಹಾಗೂ ಚಾಕುವಿನಿಂದ ಹಲವು ಸಲ ತಿವಿದಿದ್ದಾನೆ.

Married man stabs student for ending relationship, after slits his own throat

ಯುವತಿಯು ಜೋರಾಗಿ ಕೂಗಿಕೊಂಡಿದ್ದು ಕೇಳಿಸಿಕೊಂಡು, ಆಕೆಯ ತಾಯಿ ಬಂದು ನೋಡುವ ಹೊತ್ತಿಗೆ ಆರೋಪಿಯು ತಾನೂ ಕುತ್ತಿಗೆ ಕುಯ್ದುಕೊಂಡಿದ್ದ. ಆ ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಖಾಸಗಿ ಆಸ್ಪತ್ರೆಗೆ ಇಬ್ಬರನ್ನೂ ದಾಖಲಿಸಲಾಯಿತು. ಸದ್ಯಕ್ಕೆ ಆರೋಪಿಯು ಪೊಲೀಸ್ ಬಂಧನದಲ್ಲಿ ಇದ್ದು, ಚಿಕಿತ್ಸೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+