ಬಾರ್ ಮುಂದೆ ಕ್ಯೂ ನಿಂತವರಿಗೆ ಹೂ ಮಳೆ ಸುರಿಸಿದ ವ್ಯಕ್ತಿ

ನವದೆಹಲಿ, ಮೇ: ಕೊರೊನಾ ವಾರಿಯರ್ಸ್‌ಗೆ ಹೂ ಮಳೆ ಸುರಿಸಿದ ಘಟನೆ ಅನೇಕ ಕಡೆ ನಡೆದಿದೆ. ಆದರೆ, ದೆಹಲಿಯಲ್ಲಿ ವ್ಯಕ್ತಿಯೊಬ್ಬ ಮದ್ಯದ ಅಂಗಡಿ ಮುಂದೆ ನಿಂತ ಜನರಿಗೆ ಹೂ ಮಳೆ ಸುರಿಸಿದ್ದಾನೆ. ದೇಶದ ಆರ್ಥಿಕತೆಯನ್ನು ಕುಡುಕರು ಉಳಿಸಿದ್ದಾರೆ ಎಂದಿದ್ದಾನೆ.

ನಿನ್ನೆಯಿಂದ ದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮೊದಲ ದಿನ ದೇಶದ ಬಹುತೇಕ ಬಾರ್‌ಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ದೆಹಲಿಯಲ್ಲಿಯೂ ಒಂದು ಮದ್ಯದ ಅಂಗಡಿ ಮುಂದೆ ಇದೇ ದೃಶ್ಯ ಕಂಡು ಬಂತು. ಇದನ್ನು ನೋಡಿದ ವ್ಯಕ್ತಿಯೊಬ್ಬ ಗ್ರಾಹಕರಿಗೆ ಹೂ ಹಾಕಿದ್ದಾನೆ.

Man Showers Petals On Tipplers Says You Are My Economy

''ನೀವು ನಮ್ಮ ಆರ್ಥಿಕತೆ.. ಸರ್ಕಾರಕ್ಕೆ ಯಾವುದೇ ಹಣ ಇರಲಿಲ್ಲ...'' ಎಂದು ಕುಡುಕರಿಗೆ ಜೈಕಾರ ಹಾಕಿ ಅಂಗಡಿ ಮುಂದೆ ಕ್ಯೂ ನಿಂತಿದ್ದ ಜನರಿಗೆ ಧನ್ಯವಾದ ತಿಳಿಸಿದ್ದಾನೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಂದಹಾಗೆ, ನಿನ್ನೆ ದೇಶದ ಬಹುತೇಕ ಎಲ್ಲ ರಾಜ್ಯಗಳ ಬಾರ್‌ ತೆರೆದಿತ್ತು. ಆದರೆ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಆಂಧ್ರಪ್ರದೇಶದ ಕೆಲವು ಅಂಗಡಿಗಳನ್ನು ತೆರೆದ ಸ್ವಲ್ಪ ನಿಮಿಷದಲ್ಲಿಯೇ ಮುಚ್ಚಲಾಯಿತು. ಸಾಕಷ್ಟು ಜನರು ಅಂಗಡಿ ಮುಂದೆ ಕ್ಯೂ ನಿಂತಿದ್ದು, ಸಾಮಾಜಿಕ ಅಂತರ ಹಾಗೂ ಕೊರೊನಾ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಈ ರೀತಿ ಮಾಡಲಾಯಿತು.

ಮದ್ಯ ಮಾರಾಟ ಅವಕಾಶ ನೀಡಿದ್ದ ನಿನ್ನೆ ಒಂದೇ ದಿನದಲ್ಲಿ, ಕರ್ನಾಟಕದಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+