• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾದಿಂದ ಆಮದು ಸ್ಥಗಿತ: ಎಲ್‌ಇಡಿ ದೀಪಗಳ ಬೆಲೆ ಗಗನಕ್ಕೆ

|
Google Oneindia Kannada News

ನವದೆಹಲಿ, ಏಪ್ರಿಲ್ 3: ಕೊರೊನಾ ಹಾವಳಿಯಿಂದ ಇಡೀ ಜಗತ್ತೇ ತತ್ತರಿಸುತ್ತಿದೆ. ಇದರಿಂದ ವ್ಯಾಪಾರೋದ್ಯಮದ ಮೇಲೆ ಕರಿನೆರಳು ಚೆಲ್ಲಿದೆ. ಅವಶ್ಯಕ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ.

ಕಳೆದ ನಾಲ್ಕು ತಿಂಗಳಿನಿಂದ ಚೀನಾದಲ್ಲಿ ಕೊರೊನಾ ಹಾವಳಿ ಇದ್ದಿದ್ದರಿಂದ ಭಾರತದಲ್ಲಿ ಎಲ್‌ಇಡಿ ವಿದ್ಯುತ್ ದೀಪಗಳ ಬೆಲೆ ಹೆಚ್ಚಳ ಕಾಣುತ್ತಿದೆ.

ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ ಏ.5ರಂದು ದೀಪ ಹಚ್ಚಿ ಲಕ್ಷ್ಮಣ ರೇಖೆ ದಾಟಬೇಡಿ, ಇದೇ ರಾಮಬಾಣ: ಮೋದಿ

ಈ ಕುರಿತು ಆತಂಕ ವ್ಯಕ್ತಪಡಿಸಿರುವ ಭಾರತದ ಇಲೆಕ್ಟ್ರಿಕಲ್ ದೀಪದ ಉತ್ಪಾದಕ ಸಂಘಟನೆ (Electric Lamp and Component Manufacturers Association (ELCOMA), ಚೀನದಿಂದ ಎಲ್‌ಇಡಿ ದೀಪಗಳು ಹಾಗೂ ಎಲ್‌ಇಡಿಗೆ ಬಳಸಬಹುದಾದ ಬಿಡಿಬಾಗಳ ಪೂರೈಕೆ ನಿಂತಿರುವುದರಿಂದ ಭಾರತದಲ್ಲಿ ಎಲ್‌ಇಡಿ ಬಲ್ಬ್‌ಗಳ ಬೆಲೆಯಲ್ಲಿ ಶೇ 30 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.

ಮಾರಾಟ ಕ್ಷೇತ್ರದ ಮೇಲೆ ತೀವ್ರ ಹೊಡೆತ

ಮಾರಾಟ ಕ್ಷೇತ್ರದ ಮೇಲೆ ತೀವ್ರ ಹೊಡೆತ

ಅಲ್ಲದೇ ಭಾರತದ ಆಂತರಿಕ ಇಲೆಕ್ಟ್ರಾನಿಕ್ ಕ್ಷೇತ್ರದ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ. ಇದರಿಂದ ಮೊಬೈಲ್ ತಯಾರಿಕೆ ಹಾಗೂ ಮಾರಾಟ ಕ್ಷೇತ್ರದ ಮೇಲೆ ತೀವ್ರ ಹೊಡೆತ ಬಿದ್ದಿದೆ ಎಂದು ಸಂಘಟನೆಯ ಉಪಾಧ್ಯಕ್ಷ ಪದ್ಮಾಕರ ಜೋಶಿ ತಿಳಿಸಿದ್ದಾರೆ.

ಚೀನಾದಿಂದ ಪೂರೈಕೆ ಸಂಪೂರ್ಣ ಸ್ಥಗಿತ

ಚೀನಾದಿಂದ ಪೂರೈಕೆ ಸಂಪೂರ್ಣ ಸ್ಥಗಿತ

ಈಗ ಕೊರೊನಾ ಜಗತ್ತಿನಾದ್ಯಂತ ವಿಸ್ತರಿಸುವುದರಿಂದ ರಪ್ತು ವಹಿವಾಟು ಸಹ ಸ್ಥಗಿತಗೊಂಡಿದೆ. ಹಾಗಾಗಿ ಇಲೆಕ್ಟ್ರಾನಿಕ್ ಉಪಕರಣಗಳು ಇನ್ನೇನು ಭಾರೀ ಪ್ರಮಾಣದಲ್ಲಿ ಏರಿಕೆ ಕಾಣಲಿವೆ. ಇದಕ್ಕೆ ಮುಖ್ಯ ಕಾರಣವೇ ಚೀನಾ. ಚೀನಾದಿಂದ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದು ಈ ಎಲ್ಲ ಬೆಳವಣಿಗೆಗಳಿಗೆ ಕಾರಣ ಎಂದು ಹೇಳಿದ್ದಾರೆ.

ಶೇ 30 ಚೀನಾ ಒಂದರಿಂದಲೇ ಭಾರತಕ್ಕೆ

ಶೇ 30 ಚೀನಾ ಒಂದರಿಂದಲೇ ಭಾರತಕ್ಕೆ

ಭಾರತದಲ್ಲಿ ಆಂತರಿಕವಾಗಿ ಶೇ 60 ರಷ್ಟನ್ನು ಮಾತ್ರ ಇಲೆಕ್ಟ್ರಾನಿಕ್ ಉಪಕರಣಗಳು ಉತ್ಪಾದನೆಯಾಗುತ್ತವೆ. ಶೇ 30 ರಷ್ಟು ಚೀನಾ ಒಂದರಿಂದಲೇ ಭಾರತಕ್ಕೆ ಬರುತ್ತವೆ. ಉಳಿದದ್ದು ಜಪಾನ್, ಕೊರಿಯಾ, ತೈವಾನ್ ದೇಶಗಳಿಂದ ಬರುತ್ತೆ. ಈಗ ಎಲ್ಲ ದೇಶಗಳ ಬಾಗಿಲು ಬಂದ್ ಆಗಿರವುದರಿಂದ ಇಲೆಕ್ಟ್ರಾನಿಕ್ ಉಪಕರಣ ಉತ್ಪಾದನೆ ಹಾಗೂ ಮಾರಾಟದ ಮೇಲೆ ತೀವ್ರ ಹೊಡೆತ ಬಿಳ್ಳಲಿದೆ ಎಂದು ಜೋಶಿ ಹೇಳಿದ್ದಾರೆ.

ಎಲ್‌ಇಡಿ ಬಿಟ್ಟು ದೀಪ ಹಚ್ಚಲು ಹೇಳಿದ ಮೋದಿ

ಎಲ್‌ಇಡಿ ಬಿಟ್ಟು ದೀಪ ಹಚ್ಚಲು ಹೇಳಿದ ಮೋದಿ

ಲಾಕ್‌ಡೌನ್ ಪರಿಸ್ಥಿತಿಯಲ್ಲಿ ದೇಶದ ಜನರ ಮನೋಬಲವನ್ನು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಬೆಳಿಗ್ಗ ದೇಶದ ಜನರ ಮುಂದೆ ಮಾತನಾಡಿರುವ ಮೋದಿ ಅವರು, ಬರುವ ಭಾನುವಾರ ಅಂದರೆ ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಪ್ರತಿಯೊಬ್ಬರೂ ತಮ್ಮ ಮನೆಯ ವಿದ್ಯುತ್ ದೀಪ ಆರಿಸಿ ಮೊಂಬತ್ತಿ, ದೀಪ ಅಥವಾ ಮೊಬೈಲ್ ಟಾರ್ಚ್‌ನ್ನು ಹಚ್ಚಬೇಕು ಎಂದು ಕರೆ ಕೊಟ್ಟಿದ್ದಾರೆ. ಮೋದಿ ಹೀಗೆ ಹೇಳಿರುವುದರಲ್ಲಿ ಜನರ ಮನೋಬಲ ಹೆಚ್ಚಿಸುವ ಉದ್ದೇಶ ಇದೆ ಎಂದು ಮನಶಾಸ್ತ್ರೀಯ ವಿಶ್ಲೇಷಣೆ ನಡೆಯುತ್ತಿದೆ. ಕೆಲ ಟೀಕೆಗಳೂ ಕೂಡ ಕೇಳಿ ಬಂದಿವೆ.

English summary
LED Bulbs And Electronics Good Rates Jumps Due To Coronavirus. more than 30 per cent Electronics Goods import from china. LED Bulbs jumps rate 30% high.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X