ದೇಣಿಗೆ ನಿಲ್ಲಿಸಿ ಎಂದ ಕೇಜ್ರಿವಾಲ್ ರಿಂದ, ಆಸ್ತಿ ಘೋಷಣೆ
ನವದೆಹಲಿ, ನ.17: ಭ್ರಷ್ಟಾಚಾರದ ವಿರುದ್ಧ ಏಕಾಂಗಿ ಹೋರಾಟಕ್ಕೆ ಹೊರಟಿರುವ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಮುಖಂಡ ಕೇಜ್ರಿವಾಲ್ ಅವರು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಭಾನುವಾರ ನಾಮಪತ್ರ ಸಲ್ಲಿಸಿದರು. ಜತೆಗೆ ಪಕ್ಷದ ನಿಧಿ ಟಾರ್ಗೆಟ್ ತಲುಪಿರುವುದರಿಂದ ದೇಣಿಗೆ ನೀಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಯ ವೇಳೆ ತಮ್ಮ ವೈಯಕ್ತಿಕ ಆಸ್ತಿ ಘೋಷಣೆ ಮಾಡಿರುವ ಕೇಜ್ರಿವಾಲ್, ಘಾಜಿಯಾಬಾದ್‌ನಲ್ಲಿ ತನ್ನ ಹೆಸರಿನಲ್ಲಿರುವ ಭೂಮಿ ಹಾಗೂ ಪತ್ನಿಯ ಹೆಸರಿನಲ್ಲಿ ಗುರ್‌ಗಾಂವ್‌ನಲ್ಲಿರುವ ಒಂದು ಫ್ಲಾಟ್ ಸೇರಿದಂತೆ ತಮ್ಮ ಸ್ವಂತ ಆಸ್ತಿಯ ಒಟ್ಟು ಮೌಲ್ಯ 2 ಕೋಟಿ ರೂ.ಗಳು ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹಾಗೂ ಅವರ ಆಪ್ತ ಸಹಾಯಕ ಪವನ್ ಖೇರಾ ಇಬ್ಬರೂ ನನ್ನ ವಿರುದ್ಧ 2 ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ದೂರುಗಳಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ ಎಂದು ಕೇಜ್ರಿವಾಲ್ ಇದೇ ವೇಳೆ ಆಸ್ತಿ ಘೋಷಿಸಿಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವತಃ ಮುಖ್ಯಮಂತ್ರಿ ಶೀಲಾದೀಕ್ಷಿತ್ ಹಾಗೂ ಬಿಜೆಪಿಯ ವಿಜೇಂದರ್ ಗುಪ್ತ ಅವರೂ ಈ ಕ್ಷೇತ್ರ ಅಭ್ಯರ್ಥಿಗಳಾಗಿದ್ದು ಈ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.

ಕೇಜ್ರಿವಾಲ್ ಆಸ್ತಿ: ಘೋಷಿತ ಆಸ್ತಿ 93 ಲಕ್ಷ ರು ನಗದು, 23,550 ಬಾಕಿ ಮೊತ್ತ(ವಿದ್ಯುತ್ ಬಿಲ್). 2012-13ರಲ್ಲಿ ಕೇಜ್ರಿವಾಲ್ ಬಳೀ 2.05 ಲಕ್ಷ ರು ಇತ್ತು. ಇವರ ಪತ್ನಿ ಸುನೀತಾ ಅವರ ಬಳಿ 9.8 ಲಕ್ಷ ರು ಇತ್ತು. ಗುರ್ ಗಾಂವ್ ಫ್ಲಾಟ್ ಬೆಲೆ 1ಕೋಟಿ ರು.ಗೂ ಅಧಿಕವಾಗಿದ್ದು ಇದು ಪತ್ನಿ ಸುನೀತಾ ಹೆಸರಿನಲ್ಲಿದೆ. ಚರಾಸ್ತಿ 16.8 ಲಕ್ಷ ಹೊಂದಿದ್ದಾರೆ. ಸುನೀತಾ ಮನೆ ಸಾಲ 30 ಲಕ್ಷ ರು ಹಾಗೂ ಸಂಬಂಧಿಕರಿಂದ ಪಡೆದ ಸಾಲ 11 ಲಕ್ಷ ರು ನಷ್ಟಿದೆ.
ಕೇಜ್ರಿವಾಲ ಅವರಂತೆ ಅವರ ಪಕ್ಷದ ಸ್ಪರ್ಧಿ ಮನೀಶ್ ಸಿಸೊಡಿಯಾ ಅವರು ಕೂಡಾ 17,000 ರು.ಗೂ ಅಧಿಕ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ.
Ur party needed Rs 20 crores to fight Delhi elections. We have met that target. We don't need any more money for Delhi elections..
— Arvind Kejriwal (@ArvindKejriwal) November 17, 2013
ದೇಣಿಗೆ ವಿಚಾರ: ದೆಹಲಿ ಅಸೆಂಬ್ಲಿ ಚುನಾವಣೆಗೆ ಬೇಕಾಗಿದ್ದ ಖರ್ಚುವೆಚ್ಚ ಸರಿದೂಗಿಸಲು ಅಗತ್ಯ ಹಣ(20 ಕೊಟಿ ರು) ಸಿಕ್ಕಿದೆ. ದಯವಿಟ್ಟು ದೇಣಿಗೆ ನೀಡುವುದನ್ನು ನಿಲ್ಲಿಸಿ ಎಂದು ಟ್ವಿಟ್ಟರ್ ನಲ್ಲಿ ಅರವಿಂದ್ ಮನವಿ ಸಲ್ಲಿಸಿದ್ದಾರೆ. ದೆಹಲಿಯಲ್ಲಿ 70 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸುತ್ತಿದೆ.ಪಕ್ಷಕ್ಕೆ ಬರುತ್ತಿರುವ ದೇಣಿಗೆ ಬಗ್ಗೆ ಯಾವುದೇ ಮಟ್ಟದ ತನಿಖೆಗೂ ಸಿದ್ಧ ಎಂದು ಅರವಿಂದ್ ಪುನರುಚ್ಚರಿಸಿದ್ದಾರೆ.(ಪಿಟಿಐ)












Click it and Unblock the Notifications