ಫೆಬ್ರವರಿ 28ಕ್ಕೆ ದೇಶದ ಮೊಟ್ಟಮೊದಲ ಹೆಲಿಪೋರ್ಟ್ ಕಾರ್ಯಾರಂಭ!

ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಫೆಬ್ರವರಿ 28ರಂದು ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ಈ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳಲಿದೆ.

ನವದೆಹಲಿ, ಫೆಬ್ರವರಿ 23: ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಫೆಬ್ರವರಿ 28ರಂದು ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಪವನ್ ಹಂಸ್ ಹೆಲಿಕಾಪ್ಟರ್ ಸಂಸ್ಥೆ ಈ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳಲಿದೆ.

ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಉತ್ತರ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಹೆಲಿಪೋರ್ಟ್ ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ
ಏಕಕಾಲದಲ್ಲಿ 16 ಹೆಲಿಕಾಪ್ಟರ್ ಗಳು ಇಳಿಯುವ ಮತ್ತು ಮೇಲಕ್ಕೇರುವ ಸ್ಥಳವಾಕಾಶವಿದೆ. ಒಟ್ಟು ಒಂಭತ್ತು ಪಾರ್ಕಿಂಗ್ ಬೇ (ನಿಲ್ದಾಣ ಮಾರ್ಗ) ಸೌಲಭ್ಯ ನೀಡಲಾಗಿದೆ. ಹೆಲಿಪೋರ್ಟಿನ ಟರ್ಮಿನಲ್ ಕಟ್ಟಡವು 150ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೌಕರ್ಯ ಒದಗಿಸಲು ಸಜ್ಜಾಗಿದೆ.

India's first heliport is opening on Feb 28 in Delhi

ಕಳೆದ ವರ್ಷ ಫೆಬ್ರವರಿಯಿಂದ ಪ್ರಾಯೋಗಿಕ ಹಾರಾಟಗಳನ್ನು ನಡೆಸಲಾಗಿತ್ತು. 2017ರ ಮೇ ತಿಂಗಳಿನಿಂದ ಹೆಲಿಪೋರ್ಟ್ ಪೂರ್ಣಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಪವನ್ ಹಂಸ್ ಸಂಸ್ಥೆಯ ಅಧ್ಯಕ್ಷ ಬಿ.ಪಿ.ಶರ್ಮ ತಿಳಿಸಿದ್ದಾರೆ.

ಹೆಲಿಕಾಪ್ಟರ್ ಗಳ ಮೂಲಕ ಉತ್ತರ ಪ್ರಾಂತ್ಯದಲ್ಲಿ ವಾಯುಮಾರ್ಗ ಸಂಪರ್ಕಕ್ಕೆ ಈ ನಿಲ್ದಾಣ ಉತ್ತೇಜನ ನೀಡಲಿದೆ. ದೆಹಲಿಯಿಂದ ಶಿಮ್ಲಾ, ಹರಿದ್ವಾರ, ಡೆಹ್ರಡೂನ್, ಆಗ್ರಾ,ಮೀರತ್, ಮನೇಸಾರ್ ಮುಂತಾದ ಭಾಗಗಳಿಗೆ ಹೆಲಿಕಾಪ್ಟರ್ ಸೇವೆ ಸದ್ಯಕ್ಕೆ ಒದಗಿಸಲಾಗುತ್ತಿದೆ.

ಹೆಲಿಪೋರ್ಟ್ ನಿರ್ವಹಣೆ ಜೊತೆಗೆ ಇಲ್ಲಿಗೆ ಆಗಮಿಸುವ ಮತ್ತು ಇಲ್ಲಿಂದ ಹೊರಡುವ ಹೆಲಿಕಾಪ್ಟರ್ ಗಳ ಕಾರ್ಯನಿರ್ವಹಣೆ, ದುರಸ್ತಿ ಇತ್ಯಾದಿ ಹೊಣೆಗಳನ್ನು ಪವನ್‍ಹಂಸ್ ವಹಿಸಿಕೊಂಡಿದೆ. ಹೆಲಿಕಾಪ್ಟರ್ ಗಳ ಮೂಲಕ ಉತ್ತರ ಪ್ರಾಂತ್ಯದಲ್ಲಿ ವಾಯುಮಾರ್ಗ ಸಂಪರ್ಕಕ್ಕೆ ಈ ನಿಲ್ದಾಣ ಉತ್ತೇಜನ ನೀಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+