ಕೆಂಪು ಕೋಟೆಯ ಮೇಲೆ ಸಿಂಗ್ ಕಡೆಯ ಭಾಷಣ!
ನವದೆಹಲಿ, ಜ.25 : 65ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ಸಿದ್ಧವಾಗಿ ನಿಂತಿದೆ. ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಗಣರಾಜ್ಯೋತ್ಸವ ತಯಾರಿ ಅಂತಿಮಗೊಂಡಿದೆ. ಭಯೋತ್ಪಾದರ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಭಾರೀ ಬಂದೋಬಸ್ತ್ ಕೈಗೊಳ್ಳಲಾಗಿದೆ.
ನವದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಬಂದೋಬಸ್ತ್ ಜೊತೆಗೆ ಮಾನವ ರಹಿತ ದ್ರೋಣ್ ವಿಮಾನ ಗಸ್ತು ತಿರುಗಲಿದೆ. ಗಣರಾಜ್ಯೋತ್ಸವ ಸಮಾರಂಭ ನಡೆಯುವ ಕೆಂಪುಕೋಟೆ ಸುತ್ತಮುತ್ತಾ 50 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. [ಬೆಂಗಳೂರಿನಲ್ಲೂ ಗಣರಾಜ್ಯೋತ್ಸವಕ್ಕೆ ಸಿದ್ಧತೆ]
ಗಣರಾಜ್ಯೋತ್ಸವದ ಪ್ರಧಾನ ಆಕರ್ಷಣೆಯಾದ ಪರೇಡ್ ನಡೆಯುವ ವಿಜಯ್ ಚೌಕ್ ನಿಂದ ಕೆಂಪುಕೋಟೆವರೆಗೆ 35 ಸಾವಿರ ಭದ್ರತಾ ಸಿಬ್ಬಂದಿ ನೇಮಿಸಲಾಗಿದೆ. ಇವರಲ್ಲಿ ಸಿಆರ್ ಪಿಎಫ್, ಎನ್ಎಸ್ ಜಿ ಕಮಾಂಡೋ, ಶಾರ್ಟ್ ಶೂಟರ್ ಗಳು ಸೇರಿದ್ದಾರೆ. ಕೆಂಪುಕೋಟೆ ಸುತ್ತಮುತ್ತಾ ಬೆಳಗ್ಗೆ 6 ಹೆಲಿಕಾಪ್ಟರ್ ಹಾರಾಟವನ್ನು ರದ್ದುಗೊಳಿಸಲಾಗಿದೆ. [ಗಣರಾಜ್ಯೋತ್ಸವ ಪರೇಡ್ ನಲ್ಲಿ ಘರ್ಜಿಸಲಿದ್ದಾನೆ ಟಿಪ್ಪು]
65ನೇ ಗಣರಾಜ್ಯೋತ್ಸವಕ್ಕೆ ಜಪಾನ್ ಪ್ರಧಾನಿ ಸಿಂಗ್ ಜೋ ಅಬೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಭಾನುವಾರ ನಡೆಯವ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಜೊತೆ ಅವರು ಪಾಲ್ಗೊಳ್ಳಲಿದ್ದಾರೆ. ದೇಶದ ವಿವಿಧ ರಾಜ್ಯಗಳು ಗಣರಾಜ್ಯೋತ್ಸವದ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಗಣರಾಜ್ಯೋತ್ಸವಕ್ಕೆ ದೆಹಲಿ ಸಜ್ಜು
65ನೇ ಗಣರಾಜ್ಯೋತ್ಸವಕ್ಕೆ ನವದೆಹಲಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಭದ್ರತಾ ದೃಷ್ಟಿಯಿಂದ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಕರ್ತವ್ಯ ನಿರತ ಭದ್ರತಾ ಸಿಬ್ಬಂದಿ
65ನೇ ಗಣರಾಜ್ಯೋತ್ಸವದ ಪರೇಡ್ ನಡೆಯವು ರಸ್ತೆಯಲ್ಲಿ ಭದ್ರತಾ ಸಿಬ್ಬಂದಿ ಕರ್ತವ್ಯ ನಿರತನಾಗಿದ್ದಾನೆ.

ಮಕ್ಕಳಿಗೆ ಸಂತಸ
ಪಶ್ಚಿಮ ಬಂಗಾಳದಲ್ಲೂ ಗಣರಾಜ್ಯೋತ್ಸವದ ತಯಾರಿ ನಡೆದಿದ್ದು, ಮಕ್ಕಳು ರಾಷ್ಟ್ರಧ್ವಜ ಹಿಡಿದು ಆಚರಣೆಗೆ ಸಿದ್ಧರಾಗಿದ್ದಾರೆ.

ಜಾನಪದ ನೃತ್ಯ
ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಗಣರಾಜ್ಯೋತ್ಸವದ ತಯಾರಿ ನಡೆದಿದ್ದು, ಜಾನಪದ ನೃತ್ಯದ ತಾಲೀಮು ನಡೆದಿದೆ.

ಜಮ್ಮವಿನಲ್ಲಿ ಯೋಧನ ತಾಲೀಮು
ಶ್ರೀನಗರದಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸುವ ಸಿಆರ್ ಪಿಎಫ್ ಯೋಧರು ತಾಲೀಮಿನಲ್ಲಿ ತೊಡಗಿದ್ದರು.

ನಾವು ಯಾರಿಗೇನು ಕಡಿಮೆ ಇಲ್ಲ
ಶ್ರೀನಗರದಲ್ಲಿ ಜಮ್ಮು ಮತ್ತು ಕಾಶ್ಮೀರದ ಮಹಿಳಾ ಪೊಲೀಸ್ ಬೆಟಾಲಿಯನ್ ಗಣರಾಜ್ಯೋತ್ಸವ ತಯಾರಿಯಲ್ಲಿ ತೊಡಗಿರುವುದು.

ಪಾಟ್ನಾದಲ್ಲಿ ಕೊನೆ ಕ್ಷಣದ ಸಿದ್ಧತೆ
ಬಿಹಾರ ರಾಜಧಾನಿ ಪಾಟ್ನಾದಲ್ಲಿಯ ಮಹಾತ್ಮ ಗಾಂಧಿ ಮೈದಾನದಲ್ಲಿ ಮಹಿಳೆಯರು ಪರೇಡ್ ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದಾರೆ.

ಬಿಎಸ್ಎಫ್ ಯೋಧರ ಕಸರತ್ತು
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದ ಪಥ ಸಂಚಲನ ಕಾರ್ಯಕ್ರಮಕ್ಕಾಗಿ ಬಿಎಸ್ ಎಫ್ ಡೇರ್ ಡೇವಿಲ್ಸ್ ಗಳು

ಕೋಲ್ಕತ್ತಾದಲ್ಲಿ ಅಂತಿಮ ಸಿದ್ಧತೆ
ಕೋಲ್ಕತ್ತಾದಲ್ಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕಲಾತಂಡಗಳು ಶನಿವಾರ ಅಂತಿಮ ಹಂತದ ತಯಾರಿ ನಡೆಸಿದವು.

ಪಥ ಸಂಚಲನದಲ್ಲಿ ಪಾಲ್ಗೊಂಡಿರುವ ಟ್ಯಾಂಕರ್
65ನೇ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸುವ ಭಾರತೀಯ ಸೇನೆಯ ಟ್ಯಾಂಕರ್ ಗಳಿಂದ ಅಂತಿಮ ತಯಾರಿ.

ವಿದ್ಯಾರ್ಥಿಗಳ ಅಂತಿಮ ಕಸರತ್ತು
ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮಕ್ಕಳು ಶನಿವಾರ ದೆಹಲಿಯಲ್ಲಿ ನೃತ್ಯಾಭ್ಯಾಸ ನಡೆಸಿದರು.

ಪಟಿಯಾಲಾದಲ್ಲಿ ಮಕ್ಕಳು ಮಾಡಿದ ಭಾರತ
ಪಟಿಯಾಲಾದಲ್ಲಿಯೂ ಗಣರಾಜ್ಯೋತ್ಸವದ ಅಂತಿಮ ಸಿದ್ಧತೆ ನಡೆಸಿದ್ದು, ಮಕ್ಕಳು ಬಣ್ಣಬಣ್ಣದ ಬಟ್ಟೆ ತೊಟ್ಟು ಭಾರತ ನಿರ್ಮಿಸಿದ್ದಾರೆ.

ಕಾಶ್ಮೀರದಲ್ಲಿ ಬಿಗಿ ಭದ್ರತೆ
ಶ್ರೀನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ಭಕ್ಷಿ ಮೈದಾನದಲ್ಲಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ.

ಗಣರಾಜ್ಯೋವಕ್ಕೆ ಮಕ್ಕಳು ಸಿದ್ಧ
ದೆಹಲಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ನೀಡುವ ಶಾಲಾ ಮಕ್ಕಳು ಶನಿವಾರ ಅಂತಿಮ ತಾಲೀಮು ನಡೆಸಿದರು.












Click it and Unblock the Notifications