ತೀರ್ಪು ಸ್ವಾಗತಾರ್ಹ, ಮಸೀದಿ ಕಟ್ಟಲು ಹಿಂದುಗಳೂ ನೆರವಾಗಲಿ: ರಾಮದೇವ್
ನವದೆಹಲಿ, ನವೆಂಬರ್ 09: ಅಯೋಧ್ಯೆ ಕುರಿತು ಸುಪ್ರೀಂ ಕೋರ್ಟಿನಲ್ಲಿ ಪ್ರಕಟವಾದ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿರುವ ಯೋಗಗುರು ಬಾಬಾ ರಾಮದೇವ್, "ಅದ್ಧೂರಿಯಾಗಿ ರಾಮಮಂದಿರ ನಿರ್ಮಿಸುತ್ತೇವೆ" ಎಂದಿದ್ದಾರೆ.
ಅಷ್ಟೇ ಅಲ್ಲ, "ಮುಸ್ಲಿಮರಿಗೆ 5 ಎಕರೆ ಜಮೀನು ನೀಡುವ ನಡೆಯನ್ನೂ ನಾವು ಸ್ವಾಗತಿಸುತ್ತೇವೆ. ಹಿಂದು ಸಹೋದರರು ಮಸೀದಿ ಕಟ್ಟುವುದಕ್ಕೂ ನೆರವಾಗುತ್ತಾರೆ ಎಂಬ ನಂಬಿಕೆ ನನಗಿದೆ" ಎಂದು ರಾಮದೇವ್ ಹೇಳಿದರು.
ಹಲವು ದಶಕಗಳಿಂದ ವಿವಾದದಲ್ಲಿದ್ದ ಅಯೋಧ್ಯೆ ವಿವಾದದ ಅಂತಿಮ ತೀರ್ಪು ಇಂದು ಹೊರಬಿದ್ದಿದ್ದು, ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಪ್ರಕರಣದ ಕುರಿತು 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಹದಿನಾಲ್ಕಕ್ಕೂ ಹೆಚ್ಚು ಮೇಲ್ಮನವಿ ಸಲ್ಲಿಸಲಾಗಿತ್ತು.












Click it and Unblock the Notifications