ಪೋಷಕರ ದೂರ ಮಾಡುವ ಹೆಂಡತಿಗೆ ಡೈವೋರ್ಸ್ ನೀಡಬಹುದು: ಸುಪ್ರೀಂ

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 7: ತಂದೆ-ತಾಯಿಯನ್ನು ಸಾಕುವ ಜವಾಬ್ದಾರಿಯಿಂದ ಗಂಡನನ್ನು ದೂರ ಮಾಡಲು ಹೆಂಡತಿ ಯತ್ನಿಸಿದರೆ, ವಯಸ್ಸಾದ ತಂದೆ-ತಾಯಿಯೊಂದಿಗೆ ಇರಲು, ಅವರಿಗೆ ಆಶ್ರಯ ನೀಡಲು ಅಡ್ಡಿ ಪಡಿಸುತ್ತಿದರೆ ಅಕೆಗೆ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದು ಹಿಂದೂ ವ್ಯಕ್ತಿಯೊಬ್ಬರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿದ ತೀರ್ಪು. ಮಹಿಳೆಯು ಆಕೆಯ ಪತಿ ಕುಟುಂಬದ ಭಾಗವಾಗಿರುತ್ತಾಳೆ. ಆತನ ಎಲ್ಲ ಆದಾಯವನ್ನು ಅನುಭವಿಸಬೇಕು ಎಂಬ ಕಾರಣಕ್ಕೆ ಪೋಷಕರಿಂದ ಬೇರೆ ಮಾಡಬಾರದು ಎಂದು ನ್ಯಾಯಮೂರ್ತಿಗಳಾದ ಅನಿಲ್ ಆರ್. ದವೆ ಹಾಗೂ ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠವು ತೀರ್ಪು ನೀಡಿದೆ.[11 ವರ್ಷಗಳಲ್ಲಿ ಇದೇ ಮೊದಲು, ಸುಪ್ರೀಂಕೋರ್ಟಿನಲ್ಲಿ ಮುಸ್ಲಿಂ ಜಡ್ಜ್ ಗಳಿಲ್ಲ!]

Hindu son can divorce wife, if tries to separte parents

ಪೋಷಕರಿಂದ ದೂರ ಇರುವುದು ಪಾಶ್ಚಾತ್ಯರ ಆಲೋಚನೆ. ನಮ್ಮ ಸಂಸ್ಕೃತಿ ಹಾಗೂ ತತ್ವಗಳಿಗೆ ವಿರುದ್ಧವಾದದ್ದು. ಹೆಂಡತಿ ಹೇಳಿದಳು ಅನ್ನೋ ಕಾರಣಕ್ಕೆ ಮದುವೆಯಾದ ತಕ್ಷಣ ಪೋಷಕರಿಂದ ಬೇರೆಯಾಗುವುದು ಭಾರತದ ಹಿಂದೂ ಮಗನಿಂದ ನಿರೀಕ್ಷಿಸುವ ಸಂಸ್ಕೃತಿ ಅಲ್ಲ. ಇದು ರೂಢಿಯಲ್ಲೂ ಇಲ್ಲ. ಅದರಲ್ಲೂ ಮಗನೊಬ್ಬನೇ ಸಂಪಾದನೆಗೆ ದಿಕ್ಕಾಗಿರುವಾಗ ಹೀಗೆ ಮಾಡುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.[ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಸುಪ್ರೀಂನಿಂದ ನಿರಾಳ]

ಮಗನನ್ನು ಸಾಕಿ-ಸಲುಹಿರುತ್ತಾರೆ. ಶಿಕ್ಷಣ ಕೊಡಿಸಿರುತ್ತಾರೆ. ಆದ್ದರಿಂದ ವಯಸ್ಸಾದ ತಂದೆ-ತಾಯಿಗೆ ಯಾವುದೇ ಆದಾಯ ಇಲ್ಲದಿದ್ದಾಗ ಅಥವಾ ಕಡಿಮೆ ಆದಾಯ ಇದ್ದಾಗ ಅವರನ್ನು ಪೋಷಣೆ ಮಾಡುವುದು ನೈತಿಕವಾಗಿ ಹಾಗೂ ಕಾನೂನಿನ ಪ್ರಕಾರವೂ ಮಗನ ಜವಾಬ್ದಾರಿ ಎಂದು ದವೆ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Hindu son can divorce his wife if she tries to separate him from his aged parents. It is a 'obligation' to live with his aged parents and provide shelter for them, the Supreme Court held.
Please Wait while comments are loading...