ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಜಾರಿಯಾಗುತ್ತಿದ್ದಂತೆಯೇ ನೆಲಕ್ಕುರುಳಿದ ಚೆಕ್ ಪೋಸ್ಟ್ ಗಳು!

|
Google Oneindia Kannada News

ನವದೆಹಲಿ, ಜುಲೈ 03: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ)ಯ ಸದ್ದು ಇನ್ನೂ ಆರಿಲ್ಲ. ಜುಲೈ 1 ರಂದು ದೇಶದಾದ್ಯಂತ ಜಾರಿಯಾದ ಜಿಎಸ್ ಟಿಯ ಕುರಿತು ಶ್ರೀಸಾಮಾನ್ಯರಲ್ಲಿ ಚರ್ಚೆ ನಡೆಯುತ್ತಲೇ ಇದೆ. ಹೀಗಿರುವಾಗ, ಜಿಎಸ್ ಟಿ ಜಾರಿಗೆ ಬರುತ್ತಿದ್ದಂತೆಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ತಮ್ಮ ಗಡಿಯಲ್ಲಿ ವಾಣಿಜ್ಯ ತೆರಿಗೆ ಪಡೆಯುವುದಕ್ಕಾಗಿ ಸ್ಥಾಪಿಸಲಾಗಿದ್ದ ಚೆಕ್ ಪೋಸ್ಟ್ ಗಳನ್ನೆಲ್ಲ ನೆಲಸಮ ಮಾಡಿವೆ!

ಜಿಎಸ್ ಟಿ ಎಫೆಕ್ಟ್: ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆಜಿಎಸ್ ಟಿ ಎಫೆಕ್ಟ್: ಲವಲವಿಕೆ ಕಳೆದುಕೊಂಡ ಷೇರು ಮಾರುಕಟ್ಟೆ

ಒಂದು ದೇಶ, ಒಂದು ತೆರಿಗೆ, ಒಂದು ಮಾರುಕಟ್ಟೆ ಎಂಬ ಘೋಷವಾಕ್ಯದೊಂದಿಗೆ ಜಾರಿಗೆ ಬಂದ ಜಿಎಸ್ ಟಿಯಿಂದಾಗಿ ಸರಕು ಮತ್ತು ಸೇವೆಗೆ ಒಂದೇ ತೆರಿಗೆ ನೀಡಿದರೆ ಸಾಕಾದ್ದರಿಂದ ರಾಜ್ಯಗಳ ಗಡಿಗಳಲ್ಲಿ ತೆರಿಗೆ ಕಟ್ಟುವುದಕ್ಕಾಗಿ ಸಾಲು ಸಾಲಾಗಿ ಟ್ರಕ್ಕುಗಳು ನಿಲ್ಲುವ ದೃಶ್ಯ ಇನ್ನು ಮುಂದೆ ಮರೆಯಾಗಬಹುದು! ಈಗಾಗಲೇ ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮುಂತಾದ ದಕ್ಷಿಣದ ರಾಜ್ಯಗಳು ತಮ್ಮ ಗಡಿಯಲ್ಲಿರುವ ವಾಣಿಜ್ಯ ತೆರಿಗೆ ಚೆಕ್ ಪೋಸ್ಟ್ ಗಳನ್ನು ತೆರವುಗೊಳಿಸಿದ್ದು, ಉತ್ತರ ಕೆಲವು ರಾಜ್ಯಗಳು ತಾವೂ ಸದ್ಯದಲ್ಲೇ ಚೆಕ್ ಪೋಸ್ಟ್ ಗಳನ್ನು ತೆರವುಗೊಳಿಸುವುದಾಗಿ ಹೇಳಿವೆ.

GST impact: checkposts have dismantled in south india!

ಅಸ್ಸಾಂ ಮತ್ತು ಉತ್ತರ ಪ್ರದೇಶಗಳಲ್ಲಿ, ವಾಹನಗಳಲ್ಲಿನ ಸರಕಿನ ಪಟ್ಟಿ, ದಾಖಲೆಯ ಸಂಖ್ಯೆಯ ಜೊತೆಗೆ ಎಲ್ಲಕ್ಕಿಂತ ಮುಖ್ಯವಾಗಿ ಜಿಎಸ್ ಟಿ ಗುರುತಿನ ಸಂಖ್ಯೆಯನ್ನು ತಪಾಸಣೆ ಮಾಡುವಂತೆ ತನ್ನ ಅಧಿಕಾರಿಗಳಿಗೆ ಅಲ್ಲಿನ ಸರ್ಕಾರಗಳು ಹೇಳಿವೆ.
ಮಧ್ಯಪ್ರದೇಶದಲ್ಲಿ ಜು.5 ರವರೆಗೂ ಚೆಕ್ ಪೋಸ್ಟ್ ಗಳನ್ನು ನೆಲಸಮ ಮಾಡದಿರಲು ಅಲ್ಲಿನ ಸರ್ಕಾರ ಹೇಳಿದೆ.

GST ಕಾನೂನಿನಲ್ಲಿ ಹೆಂಡತಿಗೆ 28 ಪರ್ಸೆಂಟ್ ತೆರಿಗೆಯಂತೇ!!

ಒಟ್ಟಿನಲ್ಲಿ ಯಾರಿಗೆ ಎಷ್ಟು ನಷ್ಟವೋ, ಲಾಭವೋ ಟ್ರಕ್ಕುಗಳಂತು ಇನ್ನು ಮೇಲೆ ಯಾವ ಅಡೆತಡೆಯಿಲ್ಲದೆ ಪ್ರಯಾಣ ಬೆಳೆಸಲಿವೆ.

English summary
After GST has implemented in the country, the truck movements will be more easier now. Because they need not to stop to pay taxes in the checkposts. For this reason many checkposts in the border of south Indian states like Karnataka, Andra Pradesh and Tamil Nadu have dismantled on July 03rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X