ಪಿಒಕೆ ಕುರಿತ ಕೇಂದ್ರದ ಯಾವುದೇ ನಿರ್ಧಾರಕ್ಕೂ ನಾವು ಬದ್ಧ: ಬಿಪಿನ್ ರಾವತ್

ನವದೆಹಲಿ, ಸೆಪ್ಟೆಂಬರ್ 12: ಪಾಕ್ ಆಕ್ರಮಿತ ಪ್ರದೇಶ(ಪಿಒಕೆ) ಪ್ರದೇಶದ ಕುರಿತು ಕೇಂದ್ರ ಸರ್ಕಾರವು ಏನೇ ತೀರ್ಮಾನ ತೆಗೆದುಕೊಂಡರೂ ನಾವು ಬದ್ಧ ಎಂದು ಭಾರತೀಯ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿರುವ ಬಿಪಿನ್ ಅವರು, ಪಾಕ್ ಆಕ್ರಮಿತ ಪ್ರದೇಶ ಕುರಿತು ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ಸೇನೆಯು ತಯಾರಿದೆ ಎಂದು ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಕುರಿತು ಮಾತನಾಡಿರುವ ಅವರು, ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲೆಸುವುದು ಮುಖ್ಯ ಅದಕ್ಕಾಗಿ ನಾವು ಸಿದ್ಧರಿದ್ದೇವೆ. ಇಷ್ಟು ದಿನ ಭಯೋತ್ಪಾದನೆ ವಿರುದ್ಧ ಸೇನೆ ಹೋರಾಡಿದೆ. ಈಗ ಸರ್ಕಾರವು ಕೆಲವು ನಿರ್ಧಾರವನ್ನು ತೆಗೆದುಕೊಳ್ಳುತ್ತಿದೆ.ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

Government Has To Decide On POK We Are Ready Always

ಭಾರತವು ಜಮ್ಮು ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದುಗೊಳಿಸಿದ ಬಳಿಕ ಇದೀಗ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ,ಇನ್ನು ಪಾಕಿಸ್ತಾನದ ಜೊತೆ ನಾವು ಮಾತನಾಡುವುದಾದರೆ ಅದು ಪಿಒಕೆ ಬಗ್ಗೆ ಮಾತ್ರ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+