• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿನಿಂದ ದೆಹಲಿ ಪೊಲೀಸ್ ಅಧಿಕಾರಿ ಸಾವು

|

ದೆಹಲಿ, ಜೂನ್ 10: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್‌ ಅಟ್ಟಹಾಸಕ್ಕೆ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. 59 ವರ್ಷದ ಸಬ್‌ ಇನ್ಸ್‌ಪೆಕ್ಟರ್ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

   ಕೊರೊನಾದಿಂದ ಪ್ರಾಣಕಳೆದುಕೊಂಡ ಶಾಸಕ | DMK MLA | J Anbazhagan | Oneindia Kannada

   ಈ ಮೂಲಕ ದೆಹಲಿ ಪೊಲೀಸ್ ಇಲಾಖೆಯಲ್ಲಿ ನಾಲ್ಕನೇ ಪೊಲೀಸ್ ಅಧಿಕಾರಿಗೆ ಮಹಾಮಾರಿ ಕೊವಿಡ್ ಗೆ ಬಲಿಯಾಗಿದ್ದಾರೆ.

   ಕರಂಬೀರ್ ಸಿಂಗ್ ಅವರನ್ನು ಈಶಾನ್ಯ ಜಿಲ್ಲೆಯ ಸೀಲಾಂಪುರದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸೌರಭ್ ಚಂದ್ರ ಅವರಿಗೆ ಚಾಲಕರಾಗಿ ನೇಮಿಸಲಾಗಿತ್ತು. ಮೇ ಕೊನೆಯ ವಾರದಲ್ಲಿ ಕರಂಬೀರ್ ಸಿಂಗ್‌ಗೆ ರೋಗಲಕ್ಷಣಗಳು ಕಾಣಿಸಿಕೊಂಡಿದೆ.

   ದೆಹಲಿ ಮುಖ್ಯಮಂತ್ರಿ ಅರವಿಂದ್ ಕಜ್ರಿವಾಲ್‌ಗೆ ಕೊರೊನಾ ಸೋಂಕಿಲ್ಲ

   ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಮೂರರಿಂದ ನಾಲ್ಕು ದಿನಗಳವರೆಗೆ ಕ್ವಾರಂಟೈನ್ ಮಾಡಲಾಯಿತು ಎಂದು ಉಪ ಪೊಲೀಸ್ ಆಯುಕ್ತ (ಈಶಾನ್ಯ) ವೇದ ಪ್ರಕಾಶ್ ಸೂರ್ಯ ಹೇಳಿದ್ದಾರೆ.

   ಜೂನ್ 1 ರಂದು ಕರಂಬೀರ್ ಸಿಂಗ್ ಅವರ ಕೊರೊನಾ ಪರೀಕ್ಷೆ ವರದಿ ಬಂದಿದ್ದು, ಪಾಸಿಟಿವ್ ಆಗಿತ್ತು. ನಂತರ ಅವರನ್ನು ಆರ್ಮಿ ಬೇಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಯ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೂರ್ಯ ತಿಳಿಸಿದ್ದಾರೆ.

   ಇನ್ನು ಕರಂಬೀರ್ ಸಿಂಗ್ ಜೊತೆ ಸಂಪರ್ಕದಲ್ಲಿದ್ದ ಎಸಿಪಿ ಸೌರವ್ ಚಂದ್ರ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಯಿತು. ಆದರೆ, ಅವರಿಗೆ ಕೊರೊನಾ ನೆಗಿಟಿವ್ ಬಂದಿದೆ ಎಂದು ಮಾಹಿತಿ ಲಭ್ಯವಾಗಿದೆ.

   ಕರಂಬೀರ್ ಸಿಂಗ್ ನಿಧನಕ್ಕೂ ಮೊದಲು, ದೆಹಲಿಯಲ್ಲಿ ಇಬ್ಬರು ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳು (ಎಎಸ್‌ಐ), ಶೇಶ್ ಮಣಿ ಪಾಂಡೆ ಮತ್ತು ವಿಕ್ರಮ್ ಕೊರೊನಾಗೆ ಬಲಿಯಾಗಿದ್ದರು. ಜೊತೆಗೆ ಹೆಡ್ ಕಾನ್‌ಸ್ಟೆಬಲ್ ಅಮಿತ್ ಕುಮಾರ್ ಸಹ ಸಾವನ್ನಪ್ಪಿದ್ದರು.

   English summary
   Fourth Delhi police Officer dies from coronavirus pandemic.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X