ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ ಮುದ್ರಿಸದೇ ಸರ್ಕಾರ ಒಳ್ಳೆ ಕೆಲಸ ಮಾಡಿತು; ಚಿದಂಬರಂ ಟೀಕೆ

|
Google Oneindia Kannada News

ನವದೆಹಲಿ, ಜನವರಿ 30: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೂರನೇ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗಲಿದ್ದು, ಶುಕ್ರವಾರ ಆರಂಭವಾದ ಬಜೆಟ್ ಅಧಿವೇಶನದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಸ್ತುತಪಡಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಿದ್ದು, ಸಮೀಕ್ಷೆ ಕುರಿತು ಕಾಂಗ್ರೆಸ್ ನಾಯಕ, ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟೀಕಿಸಿದ್ದಾರೆ.

ಕೇಂದ್ರ ಸರ್ಕಾರ ಮಂಡಿಸಿದ ಆರ್ಥಿಕ ಸಮೀಕ್ಷೆಗೆ ಉದ್ದೇಶ ಎಂಬುದೇ ಇಲ್ಲ. ಆರ್ಥಿಕ ಚೇತರಿಕೆಗೆ ದೂರದೃಷ್ಟಿ ನೀತಿ ಜಾರಿ ಎಂಬ ಸ್ವಅಭಿನಂದನೆ ಬಿಟ್ಟರೆ ಅಲ್ಲಿ ಬೇರೆ ಉದ್ದೇಶಗಳೇ ಕಾಣಿಸಿಲ್ಲ ಎಂದು ಟೀಕಿಸಿದ್ದಾರೆ.

Former Union Finance Minister P Chidambaram Critisized Economic Survey Of Budget 2021

ಆದರೆ ಈ ಬಾರಿ ಸರ್ಕಾರದ ಒಂದು ಉತ್ತಮ ನಿರ್ಧಾರವೆಂದರೆ, ಆರ್ಥಿಕ ಸಮೀಕ್ಷೆಯನ್ನು ಮುದ್ರಣ ಮಾಡದೇ ಇರುವುದು ಎಂದು ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಆರ್ಥಿಕ ಸಮೀಕ್ಷೆಯು ಭಾರತೀಯ ಆರ್ಥಿಕತೆಯ ಪ್ರಗತಿ ಪರಿಶೀಲನೆ, ಸರ್ಕಾರ ಜಾರಿಗೆ ತಂದ ಯೋಜನೆ, ನೀತಿಗಳ ವಿವರ ಹಾಗೂ ಅದರ ಫಲಿತಾಂಶವನ್ನು ಒಳಗೊಂಡಿರುತ್ತಿತ್ತು. ಮುಂದಿನ ಹಣಕಾಸು ವರ್ಷದ ಆರ್ಥಿಕ ಬೆಳವಣಿಗೆಯ ಪೀಠಿಕೆಯಂತಿದ್ದು, ಜನರಿಗೆ ಸರಳ ಭಾಷೆಯಲ್ಲಿ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅರ್ಥೈಸುವ ಮಾಧ್ಯಮವಾಗಿತ್ತು. ಆದರೆ ಈಗ ಸಮೀಕ್ಷೆಯ ಉದ್ದೇಶವೇ ಬೇರೆಯಾಗಿದೆ. ಆ ಉದ್ದೇಶವೂ ಸ್ಪಷ್ಟವಾಗಿಲ್ಲ ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿನ ಕಾರಣದಿಂದಾಗಿ ಈ ಬಾರಿ ಕೇಂದ್ರ ಸರ್ಕಾರ, ಕಾಗದ ರಹಿತ ಬಜೆಟ್ ಘೋಷಣೆ ಮಾಡಿದ್ದು, ಶುಕ್ರವಾರ ಆರ್ಥಿಕ ಸಮೀಕ್ಷೆಯ ಪ್ರತಿಗಳನ್ನು ಡಿಜಿಟಲ್ ಆವೃತ್ತಿಯಲ್ಲಿ ನೀಡಲಾಯಿತು. ಬಜೆಟ್ ಅಧಿವೇಶನದ ಮೊದಲ ಭಾಗ ಜನವರಿ 29 ರಿಂದ ಫೆಬ್ರವರಿ 15 ರವರೆಗೆ ಮತ್ತು ಎರಡನೇ ಭಾಗವು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ.

English summary
Congress leader and former union finance minister P Chidambaram on Friday critisized economic survey of budget 2021,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X