ನಿನ್ನೆ ಕಿರಣ್ ಬೇಡಿ, ಇಂದು ಶಾಜಿಯಾ ಇಲ್ಮಿ ಬಿಜೆಪಿಗೆ ಭರ್ತಿ

ನವದೆಹಲಿ, ಜ,16: ದೇಶದ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ಬಿಜೆಪಿ ಸೇರಿದ ಬೆನ್ನಲ್ಲೇ ಆಮ್ ಅದ್ಮಿ ಪಕ್ಷದ ಸಂಸ್ಥಾಪಕ ಸದಸ್ಯೆಯಾಗಿದ್ದ ಶಾಜಿಯಾ ಇಲ್ಮಿ ಅವರು ಶುಕ್ರವಾರ ಅಧಿಕೃತವಾಗಿ ಕಮಲ ಕೈಯಲ್ಲಿ ಹಿಡಿದಿದ್ದಾರೆ. ಕಿರಣ್ ಬೇಡಿ ನೇತೃತ್ವದಲ್ಲಿ ದೆಹಲಿ ಉತ್ತಮ ಅಭಿವೃದ್ಧಿ ಕಾಣಬಹುದು ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಶಾಜಿಯಾ ಇಲ್ಮಿ ಭೇಟಿ ಮಾಡುತ್ತ್ತಿದ್ದಂತೆ ಬಿಜೆಪಿ ಸೇರುವುದು ಖಚಿತವಾಯಿತು. ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧಿಕೃತವಾಗಿ ಪಕ್ಷ ಸೇರಿದರು.

ದೇಶದಲ್ಲಿ ನರೇಂದ್ರ ಮೋದಿ ನಾಯಕತ್ವದಲ್ಲಿ ಹೊಸ ರಾಜಕೀಯ ಕ್ರಾಂತಿಯೇ ಆಗುತ್ತಿದೆ. ನಾವು ಅದರಲ್ಲಿ ಪಾಲುದಾರರಾಗಬೇಕಾಗಿದೆ. ನಾನು ದೆಹಲಿ ಚುನಾವಣಯಷ್ಟೇ ಅಲ್ಲ ಯಾವ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುತ್ತಿಲ್ಲ. ಪಕ್ಷ ನೀಡುವ ಜವಾಬ್ದಾರಿಯನ್ನು ಹೊತ್ತು ಕಾರ್ಯ ನಿರ್ವಹಿಸುವೆ ಎಂದು ಶಾಜಿಯಾ ಅವರು ಪಕ್ಷ ಸೇರಿದ ಮೇಲೆ ಹೇಳಿದರು.

Former AAP leader Shazia Ilmi joins BJP

ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಜನಪರ ಹೋರಾಟಗಳನ್ನು ಮೆಚ್ಚಿ ಆಮ್ ಆದ್ಮಿ ಪಕ್ಷ ಸೇರಿದ್ದ ಶಾಜಿಯಾ ಇಲ್ಮಿ ಅವರು ಕಳೆದ ವರ್ಷ ಮೇ 24ರಂದು ಪಕ್ಷ ತೊರೆದಿದ್ದರು. ಪಕ್ಷದಲ್ಲಿ ಯಾವುದೇ ರೀತಿ ಪ್ರಜಾಪ್ರಭುತ್ವ ತತ್ವಗಳನ್ನು ಪಾಲಿಸುತ್ತಿಲ್ಲ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೇಡಿ vs ಕೇಜ್ರಿವಾಲ್ : ಎಎಪಿ ಸ್ಥಾಪಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಯಾರು ಸ್ಪರ್ಧಿಸಲಿದ್ದಾರೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾರು ಎಂಬುದರ ಬಗ್ಗೆ ಇನ್ನೂ ಕುತೂಹಲ ಕಾಯ್ದುಕೊಳ್ಳಲಾಗಿದೆ.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕಿರಣ್ ಬೇಡಿ ಅವರು ಪಕ್ಷ ಬಯಸಿದರೆ ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವೆ ಎಂದು ಶುಕ್ರವಾರ ಹೇಳಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಸಂಸದೀಯ ಮಂಡಳಿ ನಿರ್ಧರಿಸಲಿದೆ ಎಂದರು. (ಐಎಎನ್ಎಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+