ಸ್ನೂಪ್ ಗೇಟ್ ತನಿಖೆ ರದ್ದುಗೊಳಿಸಿ: ಯುವತಿಯ ತಂದೆ ಮೊರೆ
ನವದೆಹಲಿ, ಮೇ 6: ಯುವತಿಯೊಬ್ಬಳ ಮೇಲೆ ಗುಜರಾತ್ ಸರಕಾರ ನಡೆಸಿದೆಯೆನ್ನಲಾದ ಕಣ್ಗಾವಲು ಪ್ರಕರಣದ (ಅಕ್ರಮ ಬೇಹುಗಾರಿಕೆ) ವಿಚಾರಣೆಗೆ ಸಂಬಂಧ ನ್ಯಾಯಾಧೀಶರ ನೇಮಕಾತಿ ವಿಷಯದಲ್ಲಿ ಇಂಗುತಿಂದ ಮಂಗನಂತಾದ ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರಕಾರಕ್ಕೆ ಇಲ್ಲೊಂದು ಆಘಾತಕಾರಿ ಸುದ್ದಿಯಿದೆ.
ಇದೀಗ ಸ್ವತಃ ಆ ಯುವತಿಯ ತಂದೆಯೇ ಗುಜರಾತ್ ಸರಕಾರದ ಪರವಾಗಿ ನಿಂತಿದ್ದು, Snoopgate ಪ್ರಕರಣದ ಸಂಬಂಧ ಎಲ್ಲಾ ತನಿಖೆಗಳನ್ನು ರದ್ದುಪಡಿಸಿ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. (ಮೋದಿ ವಿಚಾರಣೆಗೆ ಅಲಹಾಬಾದ್ ಜಡ್ಜ್ ನೇಮಕ)

ಇದಕ್ಕೆ ಸ್ಪಂದಿಸಿರುವ ಸುಪ್ರೀಂಕೋರ್ಟ್, ಕೇಂದ್ರ ಸರಕಾರ ಮತ್ತು ಗುಜರಾತ್ ಸರಕಾರಕ್ಕೆ ನೋಟಿಸ್ ನೀಡಿದ್ದು, ಪ್ರತ್ಯುತ್ತರ ದಾಖಲಿಸುವಂತೆ ಸೂಚಿಸಿದೆ. ಈ ಹಿಂದೆಯೂ ಬೆಂಗಳೂರು ಮೂಲದ ಯುವತಿಯ ತಂದೆ ಮೋದಿ ಸರಕಾರದ ಪರ ನಿಂತಿದ್ದರು ಎಂಬುದು ಗಮನಾರ್ಹ. (ಕಣ್ಗಾವಲು: ಜಡ್ಜ್ ನೇಮಕಕ್ಕೆ ಚುನಾವಣೆವರೆಗೂ ಕಾಯಬೇಕಿತ್ತು)
ಚುನಾವಣೆ ಸಮಯದಲ್ಲಿ Snoopgate ಪ್ರಕರಣದ ತನಿಖೆಗೆ ಇನ್ನಿಲ್ಲದ ಉತ್ಸಾಹ ತೋರಿದ ಯುಪಿಎ ಸರಕಾರವು ಕೊನೆಗೆ ಮಿತ್ರ ಪಕ್ಷಗಳಿಂದಲೇ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 'ಮುಂದಿನ ಸರಕಾರವೇ ಪ್ರಕರಣದ ತನಿಖೆ ನಡೆಸಲಿ' ಎಂದು ಕೈತೊಳೆದುಕೊಂಡಿತ್ತು.












Click it and Unblock the Notifications