ಕೇಂದ್ರ ಸಚಿವರ ಊಟದ ಆಹ್ವಾನ ತಿರಸ್ಕರಿಸದ ರೈತ ಮುಖಂಡರು: ನೀವು ನಿಮ್ಮ ಆಹಾರ ಸೇವಿಸಿ, ನಾವು ನಮ್ಮ ಆಹಾರ ತಿನ್ನುತ್ತೇವೆ!
ನವದೆಹಲಿ, ಜನವರಿ 04: ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಹೋರಾಟವು 40ಕ್ಕೆ ದಿನಕ್ಕೆ ಕಾಲಿಟ್ಟಿದ್ದು, ಏಳನೇ ಸುತ್ತಿನ ಸಭೆಯು ಈಗಾಗಲೇ ವಿಫಲಗೊಂಡಿದೆ. ಜನವರಿ 8ರಂದು ಎಂಟನೇ ಸುತ್ತಿನ ಸಭೆ ಸೇರಲು ಒಮ್ಮತ ಅಭಿಪ್ರಾಯಕ್ಕೆ ಬರಲಾಗಿದೆ.
ಇಂದು ನಡೆದ ಸಭೆಯ ನಡುವೆ ಕೇಂದ್ರ ಸಚಿವರ ಊಟದ ಆಹ್ವಾನವನ್ನು ರೈತ ಮುಖಂಡರು ನಿರಾಕರಿಸಿದ್ದಾರೆ. ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ರೈತರಿಗೆ 2 ನಿಮಿಷಗಳ ಮೌನಾಚರಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಭೆಯ ನಡುವೆ ವಿರಾಮದಲ್ಲಿ ಊಟದ ವಿರಾಮವಿತ್ತು. ಕೇಂದ್ರ ಸಚಿವರು ರೈತ ಮುಖಂಡರಿಗೆ ಊಟಕ್ಕೆ ಆಹ್ವಾನಿಸಿದರು. ಆದರೆ ಮಾಹಿತಿಯ ಪ್ರಕಾರ, ಈ ಬಾರಿ ರೈತರು ಸರ್ಕಾರವು ಏರ್ಪಡಿಸಿದ್ದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿದ್ದಾರೆ.

ರೈತ ಸಂಘಟನೆಗಳ ಪ್ರತಿನಿಧಿಗಳು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರಿಗೆ ಇಂದು ನಿಮ್ಮೊಂದಿಗೆ ಊಟ ಮಾಡುವುದಿಲ್ಲ ಎಂದು ತಿಳಿಸಿದರು. ನೀವು ನಿಮ್ಮ ಆಹಾರ ಸೇವಿಸಿ ಮತ್ತು ನಾವು ನಮ್ಮ ಆಹಾರವನ್ನು ತಿನ್ನುತ್ತೇವೆ ಎಂದಿದ್ದಾರೆ.












Click it and Unblock the Notifications