ಆಧಾರ್ ಜೊತೆ ವೋಟರ್ ಐಡಿ ಲಿಂಕ್, ಕಾನೂನು ಸಚಿವಾಲಯಕ್ಕೆ EC ಮನವಿ

ನವದೆಹಲಿ, ಆಗಸ್ಟ್ 16: ಸಾರ್ವತ್ರಿಕ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೊತೆ ಮತದಾರರ ಚೀಟಿಯನ್ನು ಜೋಡಿಸುವ ಕುರಿತಂತೆ ಕಾನೂನು ಸಚಿವಾಲಯಕ್ಕೆ ಚುನಾವಣಾ ಆಯೋಗ ಪತ್ರ ಮುಖೇನ ಮನವಿ ಮಾಡಿದೆ.

ನಕಲಿ ಮತದಾನವನ್ನು ತಪ್ಪಿಸಲು ಇದರಿಂದ ಸಾಕಷ್ಟು ಸಹಾಯವಾಗುತ್ತದೆ ಎಂದಿರುವ ಚುನಾವಣಾ ಆಯೋಗ, ಒಬ್ಬ ವ್ಯಕ್ತಿ ಒಂದೇ ವೋಟರ್ ಐಡಿಯನ್ನು ಹೊಂದುವಂತೆ ಇದು ಮಾಡುತ್ತದೆ ಎಂದು ಪತ್ರದಲ್ಲಿ ಹೇಳಿದೆ.

ಹನ್ನೆರಡು ಅಂಕಿಯ ಆಧಾರ್ ಸಂಖ್ಯೆಯನ್ನು ವೋಟರ್ ಐಡಿಗೆ ಲಿಂಕ್ ಮಾಡುವುದು ಇಷ್ಟು ದಿನ ಕಡ್ಡಾಯವಾಗಿರಲಿಲ್ಲ. ಆದರೆ ಇನ್ನು ಮುಂದೆ ಅದನ್ನು ಕಡ್ಡಾಯಗೊಳಿಸಿದರೆ, ನಕಲಿ ಮತದಾರರ ಚೀಟಿಯ ಸಮಸ್ಯೆ ಉದ್ಭವವಾಗದಂತೆ ನೋಡಿಕೊಳ್ಳಬಹುದು ಎಂದು ಅದು ಹೇಳಿದೆ.

EC Writes Letter To Law Ministry On Linking Voter ID with Aadhaar

ಇದುವರೆಗೂ 32 ಕೋಟಿ ಆಧಾರ್ ಸಂಖ್ಯೆಗಳು ವೋಟರ್ ಐಡಿಗೆ ಜೋಡಣೆಯಾಗಿವೆ. 2015 ರಲ್ಲೆ ಚುನಾವಣಾ ಆಯೋಗ ತನ್ನ ಮಾರ್ಗದರ್ಶಿ ಸೂತ್ರಗಳ ಪೈಕಿ ಆಧಾರ್-ವೋಟರ್ ಐಡಿ ಜೋಡಣೆಯನ್ನೂ ಸೇರಿಸಿತ್ತು. ಆದರೆ ಈ ನಡೆಗೆ ಸುಪ್ರೀಂ ಕೋರ್ಟ್ ತಡೆಯೊಡ್ಡಿತ್ತು.

ಕಳೆದ ಆಗಸ್ಟ್ ನಲ್ಲಿ ಆಧಾರ್ ಸಿಂಧುತ್ವದ ಕುರಿತಂತೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಆಧಾರ್ ಸಾಂವಿಧಾನಿಕ, ಅದು ಎಲ್ಲಾ ಸರ್ಕಾರಿ ಸೌಲಭ್ಯಗಳಿಗೆ ಕಡ್ಡಾಯ, ಆದರೆ ಎಲ್ಲ ವೈಯಕ್ತಿಕ ದಾಖಲಾತಿಗಳಿಗೂ ಅದನ್ನು ಕಡ್ಡಾಯಗೊಳಿಸುವ ಅಗತ್ಯವಿಲ್ಲ ಎಂಬ ತೀರ್ಪು ನೀಡಿತ್ತು. 'ಖಾಸಗೀತನವನ್ನೂ ಮೂಲಭೂತ ಹಕ್ಕು' ಎಂದು ಸುಪ್ರೀಂ ಕೋರ್ಟೇ ತೀರ್ಪು ನೀಡಿದ್ದ ಕಾರಣ, ಆಧಾರ್ ಅನ್ನು ಎಲ್ಲಾ ವೈಯಕ್ತಿಕ ದಾಖಲೆಗಳಿಗೂ ಜೋಡಿಸುವುದರಿಂದ ದತ್ತಾಂಶ ಸೋರಿಕೆಯಾಗುತ್ತದೆ, ಖಾಸಗೀ ಮಾಹಿತಿಗಳು ಸೋರಿಕೆಯಾಗುತ್ತವೆ, ಇದರಿಂದ ಖಾಸಗೀತನಕ್ಕೆ ಧಕ್ಕೆಯಾದಂತಾಗುತ್ತದೆ' ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಧಾರ ಕಡ್ಡಾಯವಲ್ಲ ಎಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+