ಉತ್ತರ ಭಾರತದ ಕೆಲವೆಡೆ ಲಘು ಭೂಕಂಪನದ ಅನುಭವ
ನವದೆಹಲಿ, ಫೆಬ್ರವರಿ 02: ಉತ್ತರ ಭಾರತದ ಕೆಲವೆಡೆ ಭೂಕಂಪನದ ಅನುಭವ ಆಗಿದೆ. ಲಘು ಭೂಕಂಪನ ಆಗಿರುವ ಕಾರಣ ಯಾವುದೇ ಆಸ್ತಿ ಹಾನಿ, ಪ್ರಾಣ ಹಾನಿ ಆಗಿಲ್ಲ.
ಭೂಕಂಪನದ ಮೂಲ ಪಾಕಿಸ್ತಾನ-ಅಫ್ಗಾನಿಸ್ತಾನ ದ ಗಡಿ ಭಾಗ ಎನ್ನಲಾಗಿದೆ. ಅಫ್ಗಾನಿಸ್ತಾನ-ಪಾಕಿಸ್ತಾನದ ಗಡಿಯಲ್ಲಿ 5.2 ರಿಕ್ಟರ್ ತೀವ್ರತೆಯಲ್ಲಿ ಭೂಕಂಪನ ಆಗಿದೆ.
ದೆಹಲಿಯ ಹೊರವಲಯ ಸೇರಿ ಇನ್ನೂ ಕೆಲವು ಕಡೆ ಕಂಪನದ ಅನುಭವ ಆಗಿದೆ. ಭೂಕಂಪನದ ಕೇಂದ್ರವು ಅಫ್ಗಾನಿಸ್ತಾನದ ಜರ್ಮ್ ಎನ್ನಲಾಗಿದ್ದು, ಭೂಮಿಯ 211 ಕಿ.ಮೀ ಒಳಗೆ ಘರ್ಷಣೆ ಸಂಭವಿಸಿದೆ.

ದೆಹಲಿಯಲ್ಲಿ ದೂರದಲ್ಲಿ ಭೂಕಂಪನ ಆದ ಭಾರತದಲ್ಲಿ ಕಂಪನದ ಅನುಭವ ಅಷ್ಟಾಗಿ ಆಗಿಲ್ಲ.
#earthquake Delhi/NCR pic.twitter.com/OSjETeoI5S
— Praveen Gurjar (@praideal) February 2, 2019
ಇಂಡೋನೇಷ್ಯಾದಲ್ಲಿ ಸಹ ಇಂದು 6.5 ರಿಕ್ಟರ್ ತೀವ್ರತೆಯ ಭೂಕಂಪನ ಆಗಿದ್ದು, ಅಲ್ಪ ಪ್ರಮಾಣದ ಆಸ್ತಿ ಪಾಸ್ತಿ ಮತ್ತು ಪ್ರಾಣ ಹಾನಿ ಸಹ ಸಂಭವಿಸಿದೆ.












Click it and Unblock the Notifications