ಅನರ್ಹ ಶಾಸಕರ ಪ್ರಕರಣ: 24 ಗಂಟೆಯಲ್ಲಿ ಮೂರು ಬಾರಿ ನಿರ್ಣಯ ಬದಲು

ನವದೆಹಲಿ, ಅಕ್ಟೋಬರ್ 22: ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತೆ ಮುಂದೂಡಿದೆ. 24 ಗಂಟೆಯಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮೂರು ಬಾರಿ ನಿರ್ಣಯಗಳನ್ನು ಬದಲಾಯಿಸಿದೆ.

ಪೂರ್ವ ನಿಗದಿಯಂತೆ ಮಂಗಳವಾರ ಅಕ್ಟೋಬರ್ 22 ರಂದು ಅನರ್ಹ ಶಾಸಕರ ಪ್ರಕರಣದ ವಿಚಾರಣೆ ನಡೆಯಬೇಕಿತ್ತು. ಆದರೆ ನಿನ್ನೆ ವಕೀಲ ಕಪಿಲ್ ಸಿಬಲ್ ಮನವಿ ಮೇರೆಗೆ ಪ್ರಕರಣವನ್ನು ಒಂದು ದಿನ ಮುಂದಕ್ಕೆ ಹಾಕಲಾಯಿತು.

Recommended Video

      ಡ್ಯಾನ್ಸ್ ಮೂಡ್ ನಲ್ಲಿದ್ದಾರೆ ಅನರ್ಹ ಶಾಸಕರು..! | Rebel MLA's | Oneindia Kannada

      ಆದರೆ ನಿನ್ನೆ ಸಂಜೆ ಚುನಾವಣಾ ಆಯೋಗ ಮನವಿ ಮಾಡಿ ಮಂಗಳವಾರವೇ ಪ್ರಕರಣದ ವಿಚಾರಣೆ ನಡೆಸುವಂತೆ ಕೋರಿತು. ಅದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿ ಮಂಗಳವಾರವೇ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತು.

      Disqualified MLAs Case Hearing Postponed To October 23

      ಮಂಗಳವಾರ ವಿಚಾರಣೆ ಪ್ರಾರಂಭವಾದಾಗ ಮತ್ತೆ ಕಪಿಲ್ ಸಿಬಲ್ ಜೊತೆಗಾರ ವಕೀಲರ ಮನವಿ ಮೇರೆಗೆ ಪ್ರಕರಣವನ್ನು ನಾಳೆ (ಅಕ್ಟೋಬರ್ 23) ಕ್ಕೆ ಮುಂದೂಡಲಾಗಿದೆ. 24 ಗಂಟೆ ಅವಧಿಯಲ್ಲಿ ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಸಂಬಂಧ ಮೂರು ಬಾರಿ ಸುಪ್ರೀಂಕೋರ್ಟ್ ತನ್ನ ನಿರ್ಣಯವನ್ನು ಬದಲಾಯಿಸಿದೆ.

      ಕಳೆದ ಸೆಪ್ಟೆಂಬರ್ 17 ರಂದು ಇದೇ ಪ್ರಕರಣದ ಮೊದಲ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಘೋಷಣೆಯಾಗಿದ್ದ ಕರ್ನಾಟಕ ಉಪಚುನಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಿತು. ನಾಳೆಯ ವಿಚಾರಣೆ ಮತ್ತು ಆದೇಶದ ಮೇಲೆ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

      ಹದಿನೇಳು ಅನರ್ಹ ಶಾಸಕರು ತಮ್ಮ ಅರ್ನಹತೆ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+