ದೆಹಲಿ ವಿವಿ ವಿದ್ಯಾರ್ಥಿ ಅಧ್ಯಕ್ಷನ ಸಂಘಟನೆಯಿಂದ ವಜಾ ಮಾಡಿದ ಎಬಿವಿಪಿ

ನವದೆಹಲಿ, ನವೆಂಬರ್ 15: ನಕಲಿ ಪದವಿ ಅಂಕಪಟ್ಟಿ ಕೊಟ್ಟಿರುವ ಆರೋಪಕ್ಕೆ ಗುರಿ ಆಗಿರುವ ದೆಹಲಿ ವಿವಿಯ ವಿದ್ಯಾರ್ಥಿ ಪರಿಷತ್‌ನ ಅಧ್ಯಕ್ಷ ಅಂಕಿವ್ ಬೈಸೋಯಾ ಅವರನ್ನು ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಎಬಿವಿಯು ಹೇಳಿದೆ.

ಎಬಿವಿಪಿಯಿಂದ ದೆಹಲಿಯ ವಿದ್ಯಾರ್ಥಿ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದ್ದ ಅಂಕಿವ್ ಬೈಸೋಯಾ ಅವರು ವಿವಿಯ ವಿದ್ಯಾರ್ಥಿ ಪರಿಷತ್ ನಾಯಕಾರಿ ಆಯ್ಕೆ ಆಗಿದ್ದರು. ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಅವರು ನಕಲಿ ಅಂಕಪಟ್ಟಿ ಕೊಟ್ಟಿರುವ ಆರೋಪ ಕೇಳಿಬಂದಿತ್ತು.

ಇದೀಗ ಅವರನ್ನು ಹುದ್ದೆ ತೆರವು ಮಾಡುವಂತೆ ಸೂಚಿಸಿರುವ ಎಬಿವಿಪಿ, ತನಿಖೆ ಮುಗಿಯುವವರೆಗೆ ಎಬಿವಿಪಿಯ ಎಲ್ಲ ರೀತಿಯ ಜವಾಬ್ದಾರಿಗಳಿಂದ ಹಾಗೂ ಸದಸ್ಯತ್ವದಿಂದಲೂ ವಜಾ ಮಾಡಲಾಗಿದೆ ಎಂದು ಎಬಿವಿಪಿ ತಿಳಿಸಿದೆ.

Delhi university student president expelled from ABVP

ಅಂಕಿವ್ ಭೈಸೋಯಾ ನಕಲಿ ಅಂಕಪಟ್ಟಿ ನೀಡಿ ವಿವಿ ಸೇರಿರುವುದ್ದಾಗಿ ಕೆಲವು ವಿದ್ಯಾರ್ಥಿಗಳು ವಿವಿಯ ಗಮನಕ್ಕೆ ತಂದಿದ್ದರು. ಆ ನಂತರ ಈ ವಿಷಯವು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತು.

ಅಂಕಿವ್ ಭೂಸೋಯಾ ಅವರು ತಮಿಳುನಾಡಿನ ವಿವಿಯೊಂದರ ಪದವಿ ಅಂಕಪಟ್ಟಿಯನ್ನು ದೆಹಲಿ ವಿವಿಗೆ ನೀಡಿ ದಾಖಲಾತಿ ಪಡೆದಿದ್ದರು ಆದರೆ ಅವು ನಕಲಿ ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣ ವಿಚಾರಣೆ ನಡೆಸಿರುವ ಹೈಕೋರ್ಟ್‌ ತಮಿಳುನಾಡಿನ ವಿವಿಯಿಂದ ಅಂಕಪಟ್ಟಿಯ ಪರಿಶೀಲನೆ ನಡೆಸಿ ನವೆಂಬರ್ 20 ರಂದು ಕೋರ್ಟ್‌ಗೆ ಮಾಹಿತಿ ನೀಡುವಂತೆ ದೆಹಲಿ ವಿವಿಗೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+