ಅಂದು ವೈದ್ಯನ ಮೇಲೆ ಹಲ್ಲೆ, ಇಂದು 'ಮಿಕಾ 'ಬಂಧನ

ನವದೆಹಲಿ, ಜೂ.11: ಕಳೆದ ಏಪ್ರಿಲ್ ತಿಂಗಳಿನಲ್ಲಿ ನಡೆದ ಸಂಗೀತ ಸಮಾರಂಭವೊಂದರಲ್ಲಿ ವೈದ್ಯರೊಬ್ಬರ ಕೆನ್ನೆಗೆ ಬಾರಿಸಿದ ಆರೋಪ ಹೊತ್ತಿರುವ ಗಾಯಕ ಮಿಕಾ ಸಿಂಗ್ ಅವರನ್ನು ಗುರುವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹುಟ್ಟುಹಬ್ಬ ಮೂಡ್ ನಲ್ಲೇ ಠಾಣೆಗೆ ವಿಚಾರಣೆಗೊಂದು ಹೋದ ಮಿಕಾ ಅಕ್ಷರಶಃ ಪೊಲೀಸ್ ಬಲೆಗೆ 'ಮಿಕ' ವಾಗಿದ್ದಾರೆ.

ದೆಹಲಿಯ ಇಂಧ್ರಪುರಿ ಠಾಣೆಯಲ್ಲಿ ಮಿಕ ಈಗ ಶೋಕರಾಗ ಹಾಡುತ್ತಿದ್ದಾರೆ. ಏಪ್ರಿಲ್ ತಿಂಗಳಿನ 12ರಂದು ದೆಹಲಿಯ ಇಂಧ್ರಪುರಿಯ ಪೂಸಾ ಇನ್ಸ್ಟಿಟ್ಯೂಟ್ ಮೇಳ ಮೈದಾನದಲ್ಲಿ ದೆಹಲಿ ನೇತ್ರ ಶಸ್ತ್ರಜ್ಞರ ಸಂಘದ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಮಿಕಾ ಮೈಮೇಲೆ ಏನೋ ಬಂದಂತೆ ಆಡಿದ್ದಲ್ಲದೆ, ವೈದ್ಯರನ್ನು ಕರೆದು ಮುಂದೆ ನಿಲ್ಲಿಸಿಕೊಂಡು ಪ್ರಶ್ನಿಸಿ ಕೆನ್ನೆ ಸರಿಯಾಗಿ ಬಾರಿಸಿದ್ದರು. [ವಿಡಿಯೋ ನೋಡಿ]

Delhi: Singer Mika Singh arrested for assaulting a doctor

ಮಿಕಾರಿಂದ ಪೆಟ್ಟು ತಿಂದ ಅಂಬೇಡ್ಕರ್ ಆಸ್ಪತ್ರೆ ವೈದ್ಯ ಶ್ರೀಕಾಂತ್ ಅವರು ಇಂಧ್ರಪುರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.



ರಸಸಂಜೆ ಕಾರ್ಯಕ್ರಮ ನಡೆಯುವಾಗ ಪ್ರೇಕ್ಷಕರನ್ನು ವೇದಿಕೆ ಮೇಲೆ ಕರೆದು ಏನಾದ್ರೂ ಚಟುವಟಿಕೆ ಮಾಡಿಸುತ್ತಿದ್ದರು. ಅದೇ ರೀತಿ ವೈದ್ಯ ಶ್ರೀಕಾಂತ್ ಕೂಡಾ ಮಿಕಾ ಕರೆದಾಗ ಸ್ಟೇಜ್ ಹತ್ತಿದ್ದಾರೆ. ಅದರೆ, ಮಿಕಾ ಮಾತನಾಡುತ್ತಾ ತೆಗೆದು ಬಾರಿಸಿದ್ದಾರೆ.

ನಂತರ ತನ್ನ ಬೌನ್ಸರ್ ಪಡೆಗೆ ಈತನನ್ನು ಹೊರಕ್ಕೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಈ ದೃಶ್ಯಾವಳಿಗಳು ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿತ್ತು. [ಗಾಯಕ ಮಿಕಾ ಸಿಂಗ್ ಡಾಕ್ಟರ್ ಗೆ ಕಪಾಳಮೋಕ್ಷ ]

ಈ ವಿಷಯವಾಗಿ ಇಂದ್ರಪುರಿ ಠಾಣೆಗೆ ಆಗಮಿಸಿದ್ದ ಮಿಕಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಕೊನೆಗೆ ಬಂಧನವಾದ ಒಂದು ಗಂಟೆಯೊಳಗೆ ಮಿಕಾಗೆ ಷರತ್ತುಬದ್ಧ ಜಾಮೀನು ಸಿಕ್ಕಿ ಮನೆಗೆ ತೆರಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+