ದೆಹಲಿ ಚುನಾವಣೆ: ಬುಕ್ಕಿಗಳಿಗೆ ಬಿಜೆಪಿಯೇ ನೆಚ್ಚಿನ ಕುದುರೆ

ನವದೆಹಲಿ,ಫೆ.2: ದೆಹಲಿ ಅಸೆಂಬ್ಲಿ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರಿ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಸಾವಿರಾರು ಕೋಟಿ ವ್ಯವಹಾರ ನಡೆಯುತ್ತಿದೆ ಎಂಬ ವರದಿ ಬಂದಿದೆ. ಬಿಜೆಪಿ ಹಾಗೂ ಎಎಪಿ ನಡುವೆ ಜಿದ್ದಾಜಿದ್ದಿನ ಹೋರಾಟ ಬುಕ್ಕಿಗಳಿಗೆ ವರದಾನವಾಗಿದ್ದು ಭಾರಿ ಮೊತ್ತ ಕೈ ಕೈ ಬದಲಾಗುತ್ತಿದೆಯಂತೆ.

ಫೆ.7ರಂದು ಮತದಾನ ನಡೆಯಲಿದ್ದು, ಬುಕ್ಕಿಗಳಿಗೆ ಬಿಜೆಪಿಯೇ ನೆಚ್ಚಿನ ಪಕ್ಷವಾಗಿದೆ. 2ನೇ ಸ್ಥಾನದಲ್ಲಿ ಎಎಪಿ ಇದ್ದರೆ ಕಾಂಗ್ರೆಸ್ ಪರ ಬೆಟ್ಟಿಂಗ್ ಮಾಡುವವರ ಸಂಖ್ಯೆ ಕಡಿಮೆ ಇದೆ. ಮುಖ್ಯಮಂತ್ರಿ ಅಭ್ಯರ್ಥಿಯಲ್ಲಿ ಕಿರಣ್ ಬೇಡಿ ಹಾಟ್ ಫೆವರಿಟ್ ಆದರೆ, ಕ್ರೇಜಿವಾಲ್ ಕೂಡ ಹಿಂದೆ ಬಿದ್ದಿಲ್ಲ. ಇನ್ನು ಅಜಯ್ ಮಕಾನ್ ಪರ ಬೆಟ್ಟಿಂಗ್ ಮಾಡುವವರು ಇಲ್ಲದಂತಾಗಿದ್ದಾರೆ. [ದೆಹಲಿಯಲ್ಲಿ ಆಪ್ ಧೂಳಿಪಟ : ಗುಪ್ತಚರ ಇಲಾಖೆ]

ಬುಕ್ಕಿಗಳ ಭವಿಷ್ಯ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬ ಅಚಲ ವಿಶ್ವಾಸ ಬುಕ್ಕಿಗಳದ್ದು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಿರಣ್ ಬೇಡಿ ಅಲೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸ ಬುಕ್ಕಿಗಳಲ್ಲೂ ಇದೆ. ಹಲವು ಸಮೀಕ್ಷೆಗಳು ಕೂಡಾ ಇದ್ದನ್ನೇ ಹೇಳಿದೆ. [ಅಹಿಂದ ಕೋಪ : ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ?]

BJP favourite and AAP the dark horse among bookies

ಬಿಜೆಪಿ ಪರವಾಗಿ 100 ರೂ. ಹೂಡಿದರೆ ಬುಕ್ಕಿಗಳು 500 ರೂ. ನೀಡಲು ಮುಂದೆ ಬಂದಿದ್ದಾರೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 40ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬುದು ಅನೇಕರ ವಾದ. ಒಂದು ಸಾವಿರಕ್ಕೆ 10 ಸಾವಿರ, 10 ಸಾವಿರಕ್ಕೆ ಒಂದು ಲಕ್ಷ, ಲಕ್ಷಕ್ಕೆ 10 ಲಕ್ಷದವರೆಗೂ ಬೆಟ್ಟಿಂಗ್ ಮಾಡಲಾಗುತ್ತಿದೆ.

ಇನ್ನು ಕೆಲವು ಬುಕ್ಕಿಗಳ ಪ್ರಕಾರ ಬಿಜೆಪಿ 40ರಿಂದ 42, ಎಎಪಿ 20ರಿಂದ 22, ಕಾಂಗ್ರೆಸ್ 3ರಿಂದ 5 ಸ್ಥಾನ ಗೆಲ್ಲುತ್ತದೆ ಎಂಬ ಲೆಕ್ಕಾಚಾರವನ್ನು ಬುಕ್ಕಿಗಳು ಹಾಕಿದ್ದಾರೆ. ಶನಿವಾರ ಬಿಜೆಪಿ ರೇಟ್ 1:36 (1 ರು ಹೂಡಿದರೆ 36 ಪೈಸೆ ಗೆಲ್ಲಬಹುದು), ನಷ್ಟಿತ್ತು. [ಕೇಜ್ರಿವಾಲ್ ಗೆ ನಡುಕ ಹುಟ್ಟಿಸುತ್ತಿರುವ ನೂಪುರ್]

ಕಿರಣ್‌ ಬೇಡಿ, ಅರವಿಂದ್ ಕೇಜ್ರಿವಾಲ್, ಮನೀಶ್ ಶಿಶೋಡಿಯ ಸೇರಿದಂತೆ ಮತ್ತಿತರ ಅಭ್ಯರ್ಥಿಗಳ ಮೇಲೆ ವ್ಯಾಪಕ ಪ್ರಮಾಣದಲ್ಲಿ ಬೆಟ್ಟಿಂಗ್ ಮಾಡಲಾಗಿದೆ. ಕಿರಣ್ ಬೇಡಿ ಪರ ಒಂದು ಸಾವಿರ ಬೆಟ್ಟಿಂಗ್ ಮಾಡಿದರೆ ಬುಕ್ಕಿಗಳು ಒಂದು ಲಕ್ಷದವರೆಗೂ ಗೆಲ್ಲಬಹುದು.

ಅರವಿಂದ್ ಕೇಜ್ರಿವಾಲ್ ಪರ ಒಂದು ಸಾವಿರಕ್ಕೆ 50 ಸಾವಿರ ಹೂಡಿದರೆ, ಅಜಯ್ ಮಕಾನ್ 100ಕ್ಕೆ 300 ರೂ.ಗೆ ಸೀಮಿತವಾಗಿದ್ದಾರೆ. ನವದೆಹಲಿ, ಕೃಷ್ಣನಗರ್, ಮಯೂರ್ ವಿಹಾರ್ ಕ್ಷೇತ್ರಗಳಿಂದ ಸ್ಪರ್ಧಿಸಿರುವ ಎರಡೂ ಪಕ್ಷಗಳ ಅಭ್ಯರ್ಥಿಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. (ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+