ವಿಡಿಯೋ ವೈರಲ್; ಬೈಕ್ ನಲ್ಲಿ ಬಂದು ಸರ ಕಸಿದವನ ಕಾಲರ್ ಹಿಡಿದು ಜಾಡಿಸಿದ ಮಹಿಳೆ

ದೆಹಲಿ, ಸೆಪ್ಟೆಂಬರ್ 4: ದಾರಿಯಲ್ಲಿ ತನ್ನ ಮಗಳೊಂದಿಗೆ ರಸ್ತೆ ದಾಟುತ್ತಿದ್ದ ಸಂದರ್ಭ ಬೈಕ್ ನಲ್ಲಿ ಬಂದು ಸರ ಕಿತ್ತುಕೊಂಡವನನ್ನು ಹಿಡಿದು ಜಾಡಿಸಿದ ಮಹಿಳೆಯ ವಿಡಿಯೋ ಇದೀಗ ಎಲ್ಲೆಲ್ಲೂ ವೈರಲ್ ಆಗಿದೆ.

ದೆಹಲಿಯ ನಂಗ್ಲಾಯ್ ಎಂಬ ಪ್ರದೇಶದಲ್ಲಿ ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ರಸ್ತೆ ದಾಟುತ್ತಿದ್ದರು. ಈ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧಾರಿಗಳು ಆ ಮಹಿಳೆ ಕುತ್ತಿಗೆಯಲ್ಲಿದ್ದ ಸರವನ್ನು ಕಿತ್ತುಕೊಂಡಿದ್ದಾರೆ. ಇನ್ನೇನು ಮುಂದೆ ಹೋಗಬೇಕು ಎನ್ನುವಷ್ಟರಲ್ಲಿ ಹಿಂದೆ ಕುಳಿತವನ ಕಾಲರ್ ಹಿಡಿದು ಬೈಕ್ ನಿಂದ ಬೀಳಿಸಿದ ಆ ಮಹಿಳೆ ಆತನನ್ನು ಗಟ್ಟಿಯಾಗಿ ಹಿಡಿದು ಜಾಡಿಸಿದ್ದಾಳೆ.

ಇಷ್ಟಕ್ಕೂ ಬಿಡದ ಆತ ತಪ್ಪಿಸಿಕೊಳ್ಳಲು ಜಗ್ಗಾಡಿದ್ದಾನೆ. ಆದರೆ ಆತನನ್ನು ಎಳೆದು ಥಳಿಸಿದ್ದಾರೆ ಮಹಿಳೆ ಮತ್ತು ಮಗಳು. ಇದನ್ನು ನೋಡಿ ಗಾಬರಿಗೊಂಡು ಮತ್ತೊಬ್ಬ ಓಟ ಕಿತ್ತಿದ್ದು, ಈ ದೃಶ್ಯ ನೋಡುತ್ತಿದ್ದಂತೆ ರಸ್ತೆ ಬದಿ ಇದ್ದ ಎಲ್ಲರೂ ಆ ಯುವಕನನ್ನು ಹಿಡಿದು ಥಳಿಸಿದ್ದಾರೆ. ನಂತರ ಅವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

Dehli Women Trashed Bike Chain Snatchers Video Gone Viral

ಆಗಸ್ಟ್ 30ಕ್ಕೆ ಈ ಪ್ರಕರಣ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀರ ಮಹಿಳೆಯ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+