• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಾವೂದ್ ಇಬ್ರಾಹಿಂಗೆ ಕೋವಿಡ್-19 : ಸುದ್ದಿ ಸುಳ್ಳು ಎಂದ ಸಹೋದರ ಅನೀಸ್!

|
Google Oneindia Kannada News

ನವದೆಹಲಿ, ಜೂನ್ 6: ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಪತ್ನಿ ಮೆಹಜಬೀನ್ ಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂಬ ಸುದ್ದಿ ಶುಕ್ರವಾರ ಹರಿದಾಡಿತ್ತು.

   ಪಕ್ಷದ ಮುಖಂಡರನ್ನ ವಾಪಸ್ ಕರೆತರೋ ಬಿಗ್ಗೆ ಮಾತನಾಡಿದ ಡಿಕೆಶಿ | DK Shivakumar | Oneindia Kannada

   ಕೋವಿಡ್-19 ಪಾಸಿಟಿವ್ ಕಂಡುಬಂದ ಮೇಲೆ ಕರಾಚಿಯ ಆರ್ಮಿ ಆಸ್ಪತ್ರೆಯಲ್ಲಿ ದಾವೂದ್ ಇಬ್ರಾಹಿಂ ಮತ್ತು ಪತ್ನಿ ಮೆಹಜಬೀನ್ ದಾಖಲಾಗಿದ್ದಾರೆ ಎಂದು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿತ್ತು.

   ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕುಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಕೊರೊನಾ ಸೋಂಕು

   ಆದರೆ, ಈ ಸುದ್ದಿಯನ್ನ 'ಡಿ' ಕಂಪನಿಯ ಭೂಗತ ಕಾರ್ಯಾಚರಣೆ ಮತ್ತು ಹಣಕಾಸು ವ್ಯವಹಾರ ನಿಯಂತ್ರಿಸುವ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ತಳ್ಳಿಹಾಕಿದ್ದಾರೆ.

   ಕೊರೊನಾ ವೈರಸ್ ಸೋಂಕು ತಗುಲಿಲ್ಲ.!

   ಕೊರೊನಾ ವೈರಸ್ ಸೋಂಕು ತಗುಲಿಲ್ಲ.!

   ''ದಾವೂದ್ ಇಬ್ರಾಹಿಂ ಮತ್ತು ಕುಟುಂಬಕ್ಕೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ. ಎಲ್ಲರೂ ಮನೆಯಲ್ಲೇ ಇದ್ದಾರೆ'' ಎಂದು ಐಎಎನ್ಎಸ್ ಗೆ ಅನೀಸ್ ಇಬ್ರಾಹಿಂ ಸ್ಪಷ್ಟಪಡಿಸಿದ್ದಾರೆ.

   ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂದು ವರದಿ

   ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಎಂದು ವರದಿ

   ಪಾಕಿಸ್ತಾನದಲ್ಲಿ ನೆಲೆಸಿರುವ ದಾವೂದ್ ಇಬ್ರಾಹಿಂ ಮತ್ತು ಪತ್ನಿ ಮೆಹಜಬೀನ್ ಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಕರಾಚಿಯಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ದಾವೂದ್ ಇಬ್ರಾಹಿಂ ಮತ್ತು ಪತ್ನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದಾವೂದ್ ಇಬ್ರಾಹಿಂ ಜೊತೆಗಿರುವ ಸಿಬ್ಬಂದಿ ಮತ್ತು ಗಾರ್ಡ್ ಗಳನ್ನೂ ಕ್ವಾರಂಟೈನ್ ನಲ್ಲಿಡಲಾಗಿದೆ ಎಂದು ಗುಪ್ತಚರ ಇಲಾಖೆ ಶುಕ್ರವಾರ ಮಾಹಿತಿ ನೀಡಿತ್ತು.

   ದಾವೂದ್ ಇಬ್ರಾಹಿಂಗೆ ಅನಾರೋಗ್ಯ.?

   ದಾವೂದ್ ಇಬ್ರಾಹಿಂಗೆ ಅನಾರೋಗ್ಯ.?

   ಕಳೆದ ಹಲವು ದಿನಗಳಿಂದ ದಾವೂದ್ ಇಬ್ರಾಹಿಂಗೆ ತೀವ್ರ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ ಎಂಬ ಸುದ್ದಿಯೂ ಇದೆ. ದಾವೂದ್ ಇಬ್ರಾಹಿಂ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ವದಂತಿಗಳೂ ಹರಿದಾಡುತ್ತಿವೆ.

   ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ

   ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ

   ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಈ ದಾವೂದ್ ಇಬ್ರಾಹಿಂ. ಮುಂಬೈ ಮೂಲದ ದಾವೂದ್ ಇಬ್ರಾಹಿಂ ಭೂಗತ ಪಾತಕಿ ಮತ್ತು ಡ್ರಗ್ ಡೀಲರ್. ಭಯೋತ್ಪಾದನೆ, ಕೊಲೆ, ಸುಲಿಗೆ, ಉದ್ದೇಶಿತ ಕೊಲೆ, ಮಾದಕ ವಸ್ತು ಕಳ್ಳಸಾಗಣೆ ಸೇರಿದಂತೆ ಹಲವಾರು ಪ್ರಕರಣಗಳು ದಾವೂದ್ ಇಬ್ರಾಹಿಂ ಮೇಲಿದೆ.

   1993 ರಲ್ಲಿ ನಡೆದ ಮುಂಬೈ ಬಾಂಬ್ ಬ್ಲಾಸ್ಟ್ ಹಿಂದಿನ ಮಾಸ್ಟರ್ ಮೈಂಡ್ ಇದೇ ದಾವೂದ್ ಇಬ್ರಾಹಿಂ. ಭಾರತದಿಂದ ಎಸ್ಕೇಪ್ ಆಗಿರುವ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಆಶ್ರಯ ನೀಡಿದೆ ಎನ್ನಲಾಗಿದೆ.

   ಅಂದ್ಹಾಗೆ, ದಾವೂದ್ ಇಬ್ರಾಹಿಂ ಮತ್ತು ಮೆಹಜಬೀನ್ ದಂಪತಿಗೆ ನಾಲ್ವರು ಮಕ್ಕಳು.

   English summary
   Dawood Ibrahim tested Covid 19 Positive: Brother Anees Ibrahim denies rumours.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X