ದೆಹಲಿ ವಿಮಾನ ನಿಲ್ದಾಣದಲ್ಲಿ ಜನವೋ ಜನ: ಕೊರೊನಾ ಭೀತಿ!
ನವದೆಹಲಿ, ಡಿಸೆಂಬರ್ 6: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಸಂದಣಿ ಮತ್ತು ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ತೋರಿಸುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಓಮಿಕ್ರಾನ್ ವೈರಸ್ ಪತ್ತೆಗಾಗಿ ಹೊಸ ಪ್ರಯಾಣ ನಿಯಮಗಳು ಜಾರಿಗೆ ಬಂದಿದ್ದರಿಂದ ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬರುತ್ತಿದೆ.
RPG ಗ್ರೂಪ್ ಅಧ್ಯಕ್ಷ ಹರ್ಷ್ ಗೋಯೆಂಕಾ ಭಾನುವಾರ ದೆಹಲಿ ವಿಮಾನ ನಿಲ್ದಾಣದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಇದು ಸಾಕಷ್ಟು ಕೋಲಾಹಲವನ್ನು ಸೃಷ್ಟಿಸಿದೆ. "ದೆಹಲಿ ವಿಮಾನ ನಿಲ್ದಾಣದಲ್ಲಿ ನಿನ್ನೆ ದೃಶ್ಯಗಳು," ಎಂದು ಬರೆಯುವ ಮೂಲಕ ಅವರು ಫೋಟೋವನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಪ್ರಯಾಣಿಕರು ಟರ್ಮಿನಲ್ ಒಳಗೆ ತುಂಬಿ ತುಳುಕುತ್ತಿರುವುದನ್ನು ಕಾಣಬಹುದು. ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಇದೇ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟ್ಯಾಗ್ ಮಾಡಿದ್ದಾರೆ.
Scenes yesterday at Delhi airport #Covid hotspot pic.twitter.com/SoM6RNumYO
— Harsh Goenka (@hvgoenka) December 5, 2021
"ವಿಮಾನ ನಿಲ್ದಾಣ ಮತ್ತು ನಾಗರಿಕ ವಿಮಾನಯಾನ ಅಧಿಕಾರಿಗಳು ಇಂತಹ ಸಂದರ್ಭಗಳನ್ನು ಹೆಚ್ಚು ಬುದ್ಧಿವಂತಿಕೆಯಿಂದ ನಿಭಾಯಿಸಬೇಕು. ಮತ್ತು ಇದು ರಾಕೆಟ್ ವಿಜ್ಞಾನವಲ್ಲ. ವಿಮಾನ ನಿಲ್ದಾಣದ ಕೂಟಗಳಿಗಿಂತ ಹೆಚ್ಚಿನ ಜನಸಂದಣಿಯನ್ನು ನಿಭಾಯಿಸಲು ಪರಿಹಾರಗಳಿವೆ. ಆದರೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿರುವ ಯಾರಾದರೂ ಅದರಲ್ಲಿ ಆಸಕ್ತಿ ವಹಿಸಬೇಕು"ಎಂದು ಮನೀಶ್ ಸಿಸೋಡಿಯಾ ಬರೆದಿದ್ದಾರೆ.
|
ಪ್ರಯಾಣಿಕರು ಏನು ಹೇಳುತ್ತಾರೆ?
ಆದಾಗ್ಯೂ, ಕೆಲವು ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಜನದಟ್ಟಣೆ ಹೊರತಾಗಿಯೂ, ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಹೇಳುತ್ತಾರೆ. ವಿಮಾನ ನಿಲ್ದಾಣದಲ್ಲಿ ಸರತಿ ಸಾಲು ಉದ್ದವಾಗಿದೆ ಆದರೆ ಜನಸಂದಣಿಯನ್ನು ನಿರ್ವಹಿಸಲು ಅಧಿಕಾರಿಗಳು ಪರೀಕ್ಷಾ ಕೌಂಟರ್‌ಗಳನ್ನು ಹೆಚ್ಚಿಸಿದ್ದಾರೆ ಎಂದು ಪ್ರಯಾಣಿಕರು ಹೇಳುತ್ತಾರೆ.
ಮಾಲ್ಡೀವ್ಸ್‌ನಿಂದ ಬಂದಿರುವ ಅಭಯ್ ಶ್ರೀವಾಸ್ತವ ಅವರು ಮಾತನಾಡಿ, "ನಮ್ಮ ವಿಮಾನ ರಾತ್ರಿ 9 ಗಂಟೆಗೆ ಇಳಿಯಿತು ಮತ್ತು ನಾವು ರಾತ್ರಿ 10 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರಗಿದ್ದೆವು. ಏರ್ ಸುವಿಧಾ ಅಪ್ಲಿಕೇಶನ್‌ನಲ್ಲಿ ನಮ್ಮ ವಿವರಗಳನ್ನು ಅಪ್‌ಲೋಡ್ ಮಾಡಲು ನಮ್ಮನ್ನು ಕೇಳಲಾಯಿತು. ಅದು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ" ಎನ್ನುತ್ತಾರೆ.

ಅಂತಾರಾಷ್ಟ್ರೀಯ ಪ್ರಯಾಣಿಕರು
"ಪ್ರಯಾಣಿಕರು ಹೇಳುವ ಪ್ರಕಾರ ಅಪಾಯದಲ್ಲಿರುವ (ಓಮಿಕ್ರಾನ್ ವೈರಸ್ ಹೆಚ್ಚಾಗಿ ಕಂಡುಬರುವ) ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಫ್ಲೈಯರ್‌ಗಳಿಗೆ ಸರತಿ ಸಾಲುಗಳು ಉದ್ದವಾಗಿವೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಒಳಬರುವ ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಕ್ಷಿಪ್ರ/ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ಇತ್ತೀಚಿನ ಹೊಸ ಪರೀಕ್ಷಾ ಮಾನದಂಡಗಳು ಬಂದಾಗಿನಿಂದ ಮುಂಗಡ-ಬುಕಿಂಗ್‌ಗಳು ಹೆಚ್ಚಾಗುತ್ತಿವೆ. ಈ ಮೀಸಲಾದ ಕೌಂಟರ್‌ಗಳು ಮತ್ತಷ್ಟು ಪ್ರಯಾಣಿಕರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತವೆ" ಎಂದು ಸಿಇಒ-DIAL ವಿದೇ ಕುಮಾರ್ ಜೈಪುರಿಯಾರ್ ಹೇಳುತ್ತಾರೆ.
ಅಪಾಯದ ಪಟ್ಟಿಯಲ್ಲಿರುವ ದೇಶದಿಂದ ಬಂದ (ಯುಕೆ) ಮತ್ತೊಬ್ಬ ಪ್ರಯಾಣಿಕ ಸಿಡ್ನಿ, "ಪರೀಕ್ಷೆಗಾಗಿ ಸರತಿ ಇದೆ. ವಿಮಾನಗಳು ನಿಯಮಿತವಾಗಿ ಇಳಿಯುತ್ತಿವೆ ಮತ್ತು ಪರೀಕ್ಷಾ ಫಲಿತಾಂಶಗಳು 5-6 ಗಂಟೆಗಳು ತೆಗೆದುಕೊಳ್ಳುತ್ತಿವೆ. ಆದರೆ ಹೊಸ ಮಾರ್ಗಸೂಚಿಗಳ ಕಾರಣದಿಂದಾಗಿ ನಾವು ವಿಮಾನ ನಿಲ್ದಾಣದಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೇವೆ" ಎನ್ನುತ್ತಾರೆ.
|
ಆರೋಗ್ಯ ಸಚಿವರಿಂದ ಪರಿಶೀಲನೆ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದರು." ಟರ್ಮಿನಲ್ -3 ನಲ್ಲಿ 35 ಕ್ಷಿಪ್ರ ಆರ್‌ಟಿ-ಪಿಸಿಆರ್ ಪರೀಕ್ಷಾ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ, ಪ್ರಯಾಣಿಕರ ತಪಾಸಣೆ ಮತ್ತು ಪರೀಕ್ಷೆಯ ಸಮಯವನ್ನು 30 ನಿಮಿಷಗಳಿಗೆ (sic) ಕಡಿಮೆ ಮಾಡಬಹುದು" ಎಂದು ಅವರು ಹೇಳಿದರು.

ಹೊಸ ಮಾರ್ಗಸೂಚಿಗಳು
'ಅಪಾಯದಲ್ಲಿರುವ' ದೇಶಗಳಾದ ದಕ್ಷಿಣ ಆಫ್ರಿಕಾ, ಚೀನಾ, ಬೋಟ್ಸ್‌ವಾನಾ, ಯುಕೆ ಮತ್ತು ಇತರ ಯುರೋಪಿಯನ್ ದೇಶಗಳು, ಬ್ರೆಜಿಲ್, ಇಸ್ರೇಲ್, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್, ಇಸ್ರೇಲ್, ಹಾಂಗ್ ಕಾಂಗ್ ಮತ್ತು ದೇಶಗಳಿಂದ ಬರುವವರಿಗೆ ಸರ್ಕಾರವು ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಈ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸುವ ನಿರ್ಧಾರ ಪ್ರಯಾಣದ ಸಮಯವನ್ನು ಹೆಚ್ಚಿಸಿದೆ. ಉದಾಹರಣೆಗೆ, ಒಬ್ಬರು ಯುನೈಟೆಡ್ ಕಿಂಗ್‌ಡಮ್‌ನಿಂದ ಭಾರತಕ್ಕೆ ನೇರವಾಗಿ ಬಂದರೆ, ಸಾಮಾನ್ಯ ಪ್ರಯಾಣದ ಸಮಯ ಒಂಬತ್ತು ಗಂಟೆಗಳಾದರೆ ಅವರ ಪರೀಕ್ಷೆ ಮತ್ತು ಫಲಿತಾಂಶಗಳಿಗೆ ಐದರಿಂದ ಆರು ಗಂಟೆ ತೆಗೆದುಕೊಳ್ಳುತ್ತದೆ. ಅಲ್ಲಿಗೆ ಅವರು ಪ್ರಯಾಣ ಸಮಯ ಅಂದರೆ ಒಟ್ಟಾರೆ ಸಮಯ 14-15 ಗಂಟೆಯಾಗುತ್ತದೆ.

ಓಮಿಕ್ರಾನ್ ಪರೀಕ್ಷೆ
ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದರೆ, ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಹೊರಡಬಹುದು. ಆದರೆ ಏಳು ದಿನಗಳ ಹೋಮ್ ಕ್ವಾರಂಟೈನ್‌ಗೆ ಒಳಗಾಗುತ್ತಾರೆ. ಹೋಮ್ ಕ್ವಾರಂಟೈನ್‌ನ 8 ನೇ ದಿನದಂದು ಅವರನ್ನು ಕೋವಿಡ್ -19 ಗಾಗಿ ಮರು-ಪರೀಕ್ಷೆ ಮಾಡಲಾಗುತ್ತದೆ. ಪರಿಣಾಮಕಾರಿ ಮನೆ ಪ್ರತ್ಯೇಕತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಅಧಿಕಾರಿಗಳು ಅವರ ಮನೆಗಳಿಗೆ ಭೇಟಿ ನೀಡುತ್ತಾರೆ.
ಪರೀಕ್ಷೆಯ ಫಲಿತಾಂಶವು ವೈರಸ್‌ಗೆ ಪಾಸಿಟಿವ್ ಬಂದರೆ, ಪ್ರಯಾಣಿಕರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತದೆ. SARS-CoV-2 ರ Omicron ರೂಪಾಂತರವನ್ನು ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರ ಮಾದರಿಗಳನ್ನು ತಕ್ಷಣವೇ INSACOG ಪ್ರಯೋಗಾಲಯ ನೆಟ್ವರ್ಕ್‌ಗೆ ಜೀನೋಮ್ ಪರೀಕ್ಷೆಗಾಗಿ ಕಳುಹಿಸಲಾಗುತ್ತದೆ.












Click it and Unblock the Notifications