ರಾಷ್ಟ್ರರಾಜಧಾನಿಯಲ್ಲಿ ಕೊರೊನಾ ವೈರಸ್ ಪ್ರಕರಣ ಇಳಿಮುಖ
ನವದೆಹಲಿ, ಮೇ 21: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅಂತರಲ್ಲಿ 3009 ಹೊಸ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದೆ. ಇದು ಏಪ್ರಿಲ್ 1ರ ನಂತರ ದಾಖಲಾದ ಅತ್ಯಂತ ಕಡಿಮೆ ಕೊರೊನಾ ಪ್ರಕರಣಗಳ ಸಂಖ್ಯೆಯಾಗಿದೆ.
ಕಳೆದ 24 ಗಂಟೆಗಳ ಅಂತರದಲ್ಲಿ ಪಾಸಿಟಿವಿಟಿ ದರವೂ ದೆಹಲಿಯಲ್ಲಿ ಕಡಿಮೆಯಾಗಿದ್ದು 4.76 ಪ್ರತಿಶತಕ್ಕೆ ಇಳಿಕೆಯಾಗಿದೆ. ಏಪ್ರಿಲ್ 4ರ ನಂತರ ಮೊದಲ ಬಾರಿಗೆ 5 ಶೇಕಡಾಗಿಂತ ಕಡಿಮೆಗೆ ಪಾಸಿಟಿವಿಟಿ ದರ ಇಳಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಐದು ಶೇಕಡಾಗಿಂತ ಕಡಿಮೆ ಪಾಸಿಟಿವಿಟಿ ದರ ಇದ್ದರೆ 'ಸುರಕ್ಷಿತ ವಲಯ' ಎಂದು ಘೋಷಿಸಿದೆ.
ದೆಹಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 252 ಕೊರೊನಾ ವೈರಸ್ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ದೆಹಲಿಯಲ್ಲಿ ಕೊರೊನಾ ವೈರಸ್‌ಗೆ ಪ್ರಾಣಕಳೆದುಕೊಂಡವರ ಸಂಖ್ಯೆ 22831ಕ್ಕೆ ಏರಿಕೆಯಾಗಿದೆ. ಸದ್ಯ ದೆಹಲಿಯಲ್ಲಿ 35683 ಸಕ್ರಿಯ ಕೊರೊನಾ ಪ್ರಕರಣಗಳು ಇದ್ದು ಏಪ್ರಿಲ್ 11ರ ನಂತರ ಇದೇ ಮೊದಲ ಬಾರಿಗೆ 36,000ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ದೆಹಲಿಯಲ್ಲಿದೆ.

ದೆಹಲಿಯಲ್ಲಿ ಗುಣಮುಖರಾದವರ ಪ್ರಮಾಣ 95.85 ಶೇಕಡಾ ಇದ್ದು ಸಾವಿನ ಪ್ರಮಾಣ 1.62 ಶೇಕಡಾ ಇದೆ. ಕಳೆದ 24 ಗಂಟೆಗಳಲ್ಲಿ 7288 ಸೋಂಕಿತರು ಗುಣಮುಖರಾಗಿದ್ದು ಈವರೆಗೆ 13,54,445 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಇನ್ನು ಈವರೆಗೆ ಒಟ್ಟಾರೆ 14,12,959 ಕೊರೊನಾ ವೈರಸ್ ಪ್ರಕರಣಗಳು ದೆಹಲಿಯಲ್ಲಿ ಪತ್ತೆಯಾದಂತಾಗಿದೆ. ಒಟ್ಟಾರೆ ಪಾಸಿಟಿವಿಟೊ ದರ 7.5 ಪ್ರತಿಶತವಿದೆ. ಸೋಂಕಿನಿಂದಾಗಿ ಮೃತಪಟ್ಟವರ ಒಟ್ಟು ಪ್ರಮಾಣ 1.62 ಶೇಕಡಾ ಇದೆ. ಕಳೆದ 24 ಗಂಟೆಯಲ್ಲಿ 77594 ಜನರು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ.












Click it and Unblock the Notifications