ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಕುಟುಂಬದ ನಿಗೂಢ ಸಾವು, ತಾಂತ್ರಿಕ ವಿದ್ಯೆ ಪರಿಣತೆ ವಶಕ್ಕೆ

|
Google Oneindia Kannada News

ನವದೆಹಲಿ, ಜುಲೈ 6: ಒಂದೇ ಕುಟುಂಬದ ಹನ್ನೊಂದು ಮಂದಿಯ ನಿಗೂಢ ಸಾವಿಗೆ ಸಂಬಂಧಿಸಿದಂತೆ ತಾಂತ್ರಿಕ ವಿದ್ಯೆಗಳನ್ನು ಅಭ್ಯಾಸ ಮಾಡುತ್ತಿದ್ದ ಮಹಿಳೆ ಗೀತಾಮಾತಾ ಎಂಬಾಕೆಯನ್ನು ನವದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಯ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Burari deaths: Police detain woman tantrik Geeta mata

ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿ ಆತ್ಮಹತ್ಯೆ ಮಾಡಿಕೊಳ್ಳಲು ನಾನು ನೀಡಿದ ಪ್ರೇರಣೆಯೇ ಕಾರಣ ಎಂದು ತಾಂತ್ರಿಕ ವಿದ್ಯೆ ಪರಿಣತೆ ಗೀತಾ ಮಾ ಎಂಬಾಕೆ ತಪ್ಪೊಪ್ಪಿಕೊಂಡಿರುವುದಾಗಿ ಸುದ್ದಿ ಹೊರಬಿದ್ದಿದೆ.

ಇನ್ನು ಮಾನಸಿಕ ತಜ್ಞೆ ಡಾ.ಜಯಂತಿ ದತ್ತ ಮಾತನಾಡಿ, ಒಂದು ವೇಳೆ ಆ ಕುಟುಂಬ ಆತ್ಮಹತ್ಯೆಯೇ ಮಾಡಿಕೊಂಡಿದ್ದರೆ ಕೈಗಳು ಏಕೆ ಕಟ್ಟಿರುತ್ತಿದ್ದವು? ಇದು ಸಾಮೂಹಿಕ ಆತ್ಮಹತ್ಯೆ ಅಲ್ಲ. ಇಬ್ಬರು ಅಥವಾ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೆ ಉಳಿದವರದು ಕೊಲೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಶವಗಳ ಪರೀಕ್ಷೆ ನಂತರ ಬಂದಿರುವ ಪ್ರಾಥಮಿಕ ವರದಿಗಳ ಪ್ರಕಾರ ಈ ಕುಟುಂಬದ್ದು ಆತ್ಮಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ನಿಗೂಢ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಗೀತಾ ಮಾ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಗೀತಾ ಮಾ ಕಾಂಟ್ರ್ಯಾಕ್ಟರ್ ವೊಬ್ಬರ ಮಗಳಾಗಿದ್ದು, ಆಕೆ ತಂದೆ ನಿರ್ಮಿಸಿದ್ದ ಮನೆಯಲ್ಲೇ ಹನ್ನೊಂದು ಮಂದಿ ಶವವಾಗಿ ಪತ್ತೆಯಾಗಿದ್ದರು.

English summary
Tantrik woman Geeta mata confessing in New Delhi Burari deaths, TV report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X