'ಮಹಾಸಂಪರ್ಕ ಅಭಿಯಾನ'ಕ್ಕೆ 11 ಕೋಟಿ ಸದಸ್ಯರು
ನವದೆಹಲಿ, ಜುಲೈ, 13 : ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರ 'ಮಹಾಸಂಪರ್ಕ ಅಭಿಯಾನ' ಜಾರಿಗೆ ತಂದಿದ್ದು, ದೇಶಾದ್ಯಂತ 11 ಕೋಟಿ ಸದಸ್ಯರನ್ನು ನೇಮಿಸಲು ಮುಂದಾಗಿ ದಾಖಲೆ ಸೃಷ್ಟಿಸಿದ್ದಾರೆ.
ಅಭಿಯಾನ ಜಾರಿ ಮಾಡಿದ ಬಳಿಕ ಮಾತನಾಡಿದ ಅಮಿತ್ ಶಾ, ಈ ಅಭಿಯಾನವು ಉತ್ತರ ಭಾರತದ 8 ರಾಜ್ಯಗಳನ್ನು ಸಂಪರ್ಕಿಸಲಿದೆ. ಇಲ್ಲಿ ನೇಮಕವಾಗುವ 11ಕೋಟಿ ಸದಸ್ಯರು ರಾಜಕೀಯ ಶಕ್ತಿಯನ್ನು ಗಳಿಸುವುದರ ಜೊತೆಯಲ್ಲಿ ದೇಶ ನಿರ್ಮಾಣದ ಭಾಗವಾಗಲಿದ್ದಾರೆ ಎಂದು ಹೇಳಿದ್ದಾರೆ.[ಒನ್ ಇಂಡಿಯಾ ಒನ್ ಲಾ' ಸಂಹಿತೆ ಟ್ವೀಟ್ ಚರ್ಚೆ]

ಅಭಿಯಾನಕ್ಕೆ ಸಂಬಂಧಿಸಿದ ಕಾರ್ಯಗಾರಗಳನ್ನು ಪಕ್ಷದ ಕಾರ್ಯಕರ್ತರು ಆಗಸ್ಟ್ ತಿಂಗಳಲ್ಲಿ ಕೈಗೊಳ್ಳಲಿದ್ದಾರೆ. ಈ ಅಭಿಯಾನ ಬಿಜೆಪಿ ಪಕ್ಷವನ್ನು ಕೇವಲ ಜಿಲ್ಲೆ, ರಾಜ್ಯದ ಮಟ್ಟದಲ್ಲಿ ಮಾತ್ರವಲ್ಲ ಪ್ರಾಪಂಚಿಕ ಮಟ್ಟದಲ್ಲಿಯೂ ಸದೃಢಗೊಳಿಸುವ ಆಶಯ ಹೊಂದಿದೆ ಎಂದು ಜನರಲ್ ಸೆಕ್ರೆಟೆರಿ ರಾಮ್ ಲಾಲ್ ತಿಳಿಸಿದರು.
ಈ ಅಭಿಯಾನವನ್ನು ಪ್ರತಿ 6 ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತದೆ. 2015 ಈ ಅಭಿಯಾನಕ್ಕೆ ಭಾರಿ ಯಶಸ್ಸು ನೀಡಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನವದೆಹಲಿ, ಹರಿಯಾಣ, ಪಂಜಾಬ್, ಛತೀಸ್ ಗಡ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ್, ಉತ್ತರಾಖಂಡ ಮತ್ತು ರಾಜಸ್ಥಾನ ರಾಜ್ಯ ಘಟಕಗಳ ಎಂಎಲ್ಎ, ಎಂಪಿ, ಮೇಯರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.












Click it and Unblock the Notifications