ನಕಲಿ ಸಂದೇಶ: ವಿದೇಶದಲ್ಲಿರುವ ಭಾರತೀಯರಿಗೆ ಸರ್ಕಾರದ ಮನವಿ

ನವ ದೆಹಲಿ, ಮೇ 5: ಕೇಂದ್ರ ಸರ್ಕಾರ ವಿದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆ ತರುವ ಯೋಜನೆ ರೂಪಿಸಿದ ಕೆಲವೇ ಗಂಟೆಗಳಲ್ಲಿ ಫೇಕ್ ಸಂದೇಶವೊಂದು ವಾಟ್ಸ್‌ ಅಪ್‌ಗಳಲ್ಲಿ ಹರಿದಾಡುತ್ತಿದೆ.

ಈ ಸಂದೇಶದಲ್ಲಿ RESCUE FLIGHTS FROM INDIA ಎಂಬ ಶೀರ್ಷಿಕೆಯ ಅಡಿಯಲ್ಲಿ ಗೂಗಲ್ ಫಾಮ್‌ ರಚನೆ ಮಾಡಲಾಗಿದೆ. ವಿದೇಶದಲ್ಲಿ ಸಿಕ್ಕಿ ಹಾಕಿಕೊಂಡಿರುವ ಭಾರತೀಯರು ಈ ಫಾಮ್‌ನಲ್ಲಿ ವಿವರ ನೀಡಬೇಕು ಎಂದು ಕೆಲವು ಆನ್ ಲೈನ್ ಲಿಂಕ್‌ಗಳನ್ನು ನೀಡಲಾಗಿದೆ.

ಆದರೆ, ಕೇಂದ್ರ ಸರ್ಕಾರ RESCUE FLIGHTS FROM INDIA ಎಂದು ರಚಿತವಾದ ಈ ಲಿಂಕ್‌ ಫೇಕ್‌ ಎಂದು ತಿಳಿಸಲಾಗಿದೆ. ಈ ಲಿಂಕ್‌ ಅನ್ನು ಕ್ಲಿಕ್ ಮಾಡಿ, ನಿಮ್ಮ ವಿವರಗಳನ್ನು ನೀಡಬೇಡಿ ಎಂದು ಜನರಿಗೆ ಮಾಹಿತಿ ನೀಡಲಾಗಿದೆ.

Beware Of These Fake Rescue Forms For Indians Stranded Abroad

ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದಾಗಿ ವಿದೇಶದಲ್ಲಿ ಸಿಲುಕಿರುವ ಸುಮಾರು 14,800 ಭಾರತೀಯ ಪ್ರಜೆಗಳನ್ನು 64 ವಿಮಾನಗಳ ಮೂಲಕ ವಾಪಸ್‌ ಭಾರತಕ್ಕೆ ಕರೆ ತರಲು ಕೇಂದ್ರ ಸರ್ಕಾರವು ಯೋಜನೆ ರೂಪಿಸಿದೆ.

ಈ ವಿಶೇಷ ವಿಮಾನಗಳ ಮೂಲಕ ಯುಕೆ, ಯುಎಸ್, ಯುಎಇ, ಕತಾರ್, ಸಿಂಗಾಪುರ, ಸೌದಿ ಅರೇಬಿಯಾ, ಮಲೇಷ್ಯಾ, ಫಿಲಿಪೈನ್ಸ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತು ಓಮನ್ ಈ 12 ದೇಶಗಳ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಮೇ 7 ರಿಂದ 13 ರವರೆಗೆ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈ ಕಾರ್ಯ ನಿರ್ವಹಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+