ಸೀಟ್ ಬೆಲ್ಟ್ ಧರಿಸದವರಲ್ಲಿ ಬೆಂಗಳೂರು ಚಾಲಕರೇ ಮುಂದೆ

ನವದೆಹಲಿ. ನವೆಂಬರ್ ೦5 ; ಮಾರುತಿ ಸುಜೂಕಿ ಇಂಡಿಯಾ ನಡೆಸಿದ "ಸೀಟ್ ಬೆಲ್ಟ್ ಯೂಸ್ ಇನ್ ಇಂಡಿಯಾ' ಎಂಬ ಸಮೀಕ್ಷೆಯಲ್ಲಿ ಸೀಟ್ ಬೆಲ್ಟ್ ಧರಿಸಿದೇ ಕಾರು ಚಲಾಯಿಸುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚೆಂದು ತಿಳಿದುಬಂದಿದೆ. ನಮ್ಮ ಜೊತೆ ತಮಿಳು ನಾಡಿನ ಕೊಯಮತ್ತೂರು ಹಾಗೂ ಮದ್ಯಪ್ರದೇಶದ ಇಂದೋರ್ ಸಹ ಇವೆ.

ಮಾರುತಿ ಸುಜೂಕಿ ನಡೆಸಿದ ಸಮೀಕ್ಷೆ ಪ್ರಕಾರ ದೇಶದ ಪ್ರತಿ ನಾಲ್ಕು ಜನ ಕಾರು ಚಾಲಕರಲ್ಲಿ ಒಬ್ಬರು ಮಾತ್ರವೇ ಸೀಟ್ ಬೆಲ್ಟ್ ಧರಿಸುತ್ತಾರೆ. ಒಟ್ಟು ಚಾಲಕರಲ್ಲಿ 75% ಮಂದಿ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಾರೆ.

Bangaloriens are in first place for Not wearing seat belt

ನಾಗಪುರ, ಜೈಪುರ ಮತ್ತು ಚಂಡೀಘಡ ನಗರಗಳಲ್ಲಿ ಸೀಟ್ ಬೆಲ್ಟ್ ಬಳಸುವ ಚಾಲಕರ ಸಂಖ್ಯೆ ಹೆಚ್ಚಿದೆ. ಅಲ್ಲಿನ ಕಠಿಣ ರಸ್ತೆ ನಿಯಮಗಳು ಹಾಗೂ ಸಂಚಾರಿ ಪೊಲೀಸರ ದಕ್ಷತೆ ಇದಕ್ಕೆ ಕಾರಣ ಎನ್ನಲಾಗಿದೆ.

ಒಟ್ಟು ಭಾರತದ ಲೆಕ್ಕ ಹಿಡಿದರೆ ಉತ್ತರ ಭಾರತದ ಚಾಲಕರಿಗಿಂತಲೂ ದಕ್ಷಿಣ ಭಾರತದವರಿಗೆ ಸೀಟ್ ಬೆಲ್ಟ್ ಮೇಲೆ ನಿರ್ಲಕ್ಷ್ಯ ಹೆಚ್ಚು. ದಕ್ಷಿಣ ಭಾರತದ 89% ಚಾಲಕರು ಸೀಟ್ ಬೆಲ್ಟ್ ಧರಿಸುವುದಿಲ್ಲ, ಪೂರ್ವ ಭಾರತದ ರಾಜ್ಯಗಳ 79% ಮಂದಿ ಸೀಟ್ ಬೆಲ್ಟ್ ಇಲ್ಲದೆ ಗಾಡಿ ಓಡಿಸುತ್ತಾರೆ ಎನ್ನುತ್ತದೆ ಸಮೀಕ್ಷೆ.

ಇನ್ನು ಚಾಲಕನ ಪಕ್ಕದ ಸೀಟಿನಲ್ಲಿ ಕೂರುವರಂತೂ ಸೀಟ್ ಬೆಲ್ಟ್ ಧರಿಸುವುದೇ ಅಪರೂಪವಂತೆ, ಇಡೀ ದೇಶದಲ್ಲಿ ಶೇ 4% ಜನರಷ್ಟೇ ಚಾಲಕನ ಪಕ್ಕದ ಸೀಟಿನಲ್ಲಿ ಕೂತಾಗ ಸೀಟ್ ಬೆಲ್ಟ್ ಧರಿಸುತ್ತಾರಂತೆ. ಕೆಲ ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ನಿಧನರಾದ ಮಾಜಿ ಸಚಿವ ಗೋಪಿನಾಥ ಮುಂಡೆ ಕೂಡ ಸೀಟ್ ಬೆಲ್ಟ್ ಧರಿಸದೆ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಮಹಿಳೆಯರೇ ಹೆಚ್ಚು
ಕಾರು ಚಲಾಯಿಸುವ ಶೇ 81% ಮಹಿಳೆಯರು ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬುದನ್ನೂ ಮಾರುತಿ ಸುಜುಕಿಯ ಸಮೀಕ್ಷೆ ಹೇಳಿದೆ. ಪುರುಷರಿಗಿಂತಲೂ ಮಹಿಳೆಯರು ಸೀಟ್ ಬೆಲ್ಟ್ ಧರಿಸುವ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ ಎಂದಿದೆ ಸಮೀಕ್ಷೆ.

ಬೇಜವಾಬ್ದಾರಿ ಕಾರಣ
ಸಮೀಕ್ಷೆಗೆ ಒಳಪಟ್ಟವರಲ್ಲಿ 25% ಮಂದಿ ಬಟ್ಟೆ ಹಾಳಾಗುತ್ತದೆಂಬ ಕಾರಣಕ್ಕೆ ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬ ಬೇಜವಾಬ್ದಾರಿ ಉತ್ತರವನ್ನು ನೀಡಿದ್ದಾರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+