ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಒಂದಾದ ಸಂಸದರು

|
Google Oneindia Kannada News

ನವದೆಹಲಿ, ಡಿ, 17: ಅಡಿಕೆ ಬೆಳೆಗಾರರ ಸಮಸ್ಯೆ ನಿವಾರಣೆಗೆ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರ ದೆಹಲಿ ನಿವಾಸದಲ್ಲಿ ಕೇಂದ್ರ ಸಚಿವರು ಮತ್ತು ಕರ್ನಾಟಕದ ಸಂಸದರ ಸಭೆ ಕರೆದಿದ್ದರು.

ಅನಂತಕುಮಾರ್ ಅವರ ನಿವಾಸ ತುಘಲಕ್ ಕ್ರೆಸೆಂಟ್ ನಲ್ಲಿ ನಡೆದ ಸಭೆಯಲ್ಲಿ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ, ಅವುಗಳ ನಿವಾರಣೋಪಾಯ, ಬೆಲೆ, ತಂಬಾಕು ನಿಷೇಧ ವದಂತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತನ ನೆರವಿಗೆ ಧಾವಿಸುವುದು ಮುಂತಾದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.[ದಿನಕ್ಕೆ ಎರಡೋ, ಮೂರೋ ಧಮ್ ಹೊಡಿತಿದ್ದೆ. ಆದರೆ ಈಗ?]

arecanut

ಅಡಕೆ ಬೆಳೆಗಾರರು ಅನುಭವಿಸುತ್ತಿರುವ ಆರ್ಥಿಕ ಮತ್ತು ಕಾನೂನು ಸಂಕಷ್ಟದ ಬಗೆಯೂ ವಿಸ್ತ್ರತ ಚರ್ಚೆ ನಡೆಯಿತು. ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ, ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಕೈಗಾರಿಕೆ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ. ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಭಾಗವಹಿಸಿದ್ದರು.

arecanut

ಅಲ್ಲದೇ ರಾಜ್ಯದ ಸಂಸದರಾದ ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ, ಸಂಗಣ್ಣ ಕರಡಿ, ಪ್ರಹ್ಲಾದ ಜೋಷಿ, ಪ್ರತಾಪ್ ಸಿಂಹ, ಆಯನೂರು ಮಂಜುನಾಥ, ಅನಂತಕುಮಾರ ಹೆಗಡೆ ಮತ್ತು ನಿಯೋಗ ಕೊಂಡೊಯ್ದ ಕಾಂಪ್ಕೋ ಅಧ್ಯಕ್ಷ ಕೊಂಕೊಡಿ ಪದ್ಮನಾಭ ಹಾಜರಿದ್ದರು.

English summary
Union Minister for Chemical and Fertilizers, Mr Ananth Kumar organized a High Level Meeting at his official residence #26 Tuglak Crescent,to discuss Legal,Financial and remedies for Arecanut,Growers,in New Delhi On December-16. Union Minister for Agriculture, Mr Radha Mohan Singh,Union Minister for Law Mr D V Sadanada Gowda were present on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X