'ಆಕಸ್ಮಿಕವಾಗಿ ಮೈಮುಟ್ಟಿದ್ರೆ ಲೈಂಗಿಕ ಕಿರುಕುಳವಾಗಲ್ಲ'

ನವದೆಹಲಿ, ನವೆಂಬರ್ 04: ಕಚೇರಿಯಲ್ಲಿ ಆಕಸ್ಮಿಕವಾಗಿ ಮೈ ಕೈ ಮುಟ್ಟಿದ್ರೆ ಅದನ್ನು ಲೈಂಗಿಕ ಕಿರುಕುಳವೆಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ನ್ಯಾ. ವಿಭು ಬಕ್ರು ಹೇಳಿದ್ದಾರೆ.

ಜಗಳ ಅಥವಾ ಇನ್ನಿತರ ಸಂದರ್ಭಗಳಲ್ಲಿ ಸಹೋದ್ಯೋಗಿ ಕೈ ಹಿಡಿದು ಹೊರಗೆ ತಳ್ಳಿದರೆ, ಆಕಸ್ಮಿಕವಾಗಿ ಮೈ ಮುಟ್ಟಿದರೆ, ಇಂಥ ಘಟನೆಗಳನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಲೈಂಗಿಕ ಉದ್ದೇಶದಿಂದ ದೈಹಿಕ ಸ್ಪರ್ಶ ಮಾಡಿದಲ್ಲಿ ಅದನ್ನು ಲೈಂಗಿಕ ಕಿರುಕುಳ ಎನ್ನಬಹುದು ಎಂದು ನ್ಯಾ. ವಿಭು ಬಕ್ರು ಹೇಳಿದರು.

ಏನಿದು ಪ್ರಕರಣ?: ದೆಹಲಿಯ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿಯ ಉದ್ಯೋಗಿಯೊಬ್ಬರು ತಮ್ಮ ಕೈಹಿಡಿದುಕೊಂಡು ಸಹೋದ್ಯೋಗಿ ಹೊರಗೆ ತಳ್ಳುವ ಮೂಲಕ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಲಾಗಿತ್ತು.

ಈ ದೂರು ಅರ್ಜಿಯ ವಿಚಾರಣೆ ನಂತರ ದೆಹಲಿ ಹೈಕೋರ್ಟ್, ಎಲ್ಲಾ ದೈಹಿಕ ಸ್ಪರ್ಶವನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು ಎಂದು ತಿಳಿಸಿದೆ.

ಉದ್ಯೋಗಿ ಇದಕ್ಕಿಂತ ಮೊದಲು ಸಂಸ್ಥೆಯ ದೂರು ಸಮಿತಿ ಮತ್ತು ಶಿಸ್ತು ಸಮಿತಿಗೆ ದೂರು ನೀಡಿದ್ದು, ಆಗಲೂ ಲೈಂಗಿಕ ದೌರ್ಜನ್ಯ ಆರೋಪವನ್ನು ತಳ್ಳಿ ಹಾಕಲಾಗಿತ್ತು. ಆದರೆ, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+