• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯ ವಿಶ್ವಾಸಕ್ಕೆ ಪಾತ್ರರಾಗಿರುವ ಗಿರೀಶ್ ಚಂದ್ರ ಮುರ್ಮು ಯಾರು?

|
Google Oneindia Kannada News

ದೆಹಲಿ, ಆಗಸ್ಟ್ 7: ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗರ್ವನರ್ ಹುದ್ದೆಗೆ ರಾಜೀನಾಮೆ ನೀಡಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ದೇಶದ ನೂತನ ಲೆಕ್ಕ ಪರಿಶೋಧಕ ಜನರಲ್ ಆಗಿ ನೇಮಕಗೊಳಿಸಲಾಗಿದೆ. ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಆಗಿ ಶನಿವಾರ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗರ್ವನರ್ ಆಗಿದ್ದ ಗಿರೀಶ್ ಚಂದ್ರ ಮುರ್ಮು, 376ನೇ ವಿಧಿ ರದ್ದು ಪಡಿಸಿದ ಮೊದಲ ವಾರ್ಷಿಕೋತ್ಸವದ ಬಳಿಕ ರಾಜೀನಾಮೆ ನೀಡಿದ್ದರು.

ಭಾರತದ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ನೇಮಕಗೊಳಿಸಿ ಆದೇಶಭಾರತದ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ನೇಮಕಗೊಳಿಸಿ ಆದೇಶ

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಗಿರೀಶ್ ಚಂದ್ರ ಮುರ್ಮು ಬಹಳ ಹತ್ತಿರ ಹಾಗೂ ವಿಶ್ವಾಸಾರ್ಹ ವ್ಯಕ್ತಿ ಎಂದು ಹೇಳಲಾಗುತ್ತದೆ. ಮೋದಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಸಹಾಯ ಮಾಡಿದ ತಂಡದ ಪ್ರಮುಖ ಸದಸ್ಯರಾಗಿದ್ದರು ಎಂದು ಹೇಳಲಾಗಿದೆ.

ಯಾರು ಈ ಗಿರೀಶ್ ಚಂದ್ರ ಮುಮ್ಮು?

- 60 ವರ್ಷದ ಮುರ್ಮು 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ.

- ಮೂಲತಃ ಗುಜರಾತ್ ಕೇಡರ್ ದವರು.

- ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

- ಹಣಕಾಸು ಸಚಿವಾಲಯದಲ್ಲಿ ಖರ್ಚು ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.

ಮುರ್ಮು ಪರಿಚಯ

- ನವೆಂಬರ್ 21, 1959 ರಂದು ಗಿರೀಶ್ ಚಂದ್ರ ಮುರ್ಮು ಪೂರ್ವ ರಾಜ್ಯ ಒಡಿಶಾದಲ್ಲಿ ಜನಿಸಿದರು.

- 59ನೇ ವಯಸ್ಸಿನಲ್ಲಿ ಅವರು ದೇಶದ ಕಿರಿಯ ಗವರ್ನರ್‌ಗಳಲ್ಲಿ ಒಬ್ಬರುಎಂಬ ವಿಶೇಷ ಗೌರವಕ್ಕೆ ಪಾತ್ರರಾದರು.

- ಉತ್ಕಲ್ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದಿದ್ದಾರೆ.

- ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ.

English summary
Odisha IAS officer (Retd) Shri Girish Chandra Murmu has been appointed as the Comptroller & Auditor General (CAG) of India. he is the close person for Modi and amit sha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X