ಸಾರಾಯಿ ಹಂಚುವುದು ತಡೆದ ಆಪ್ ಅಭ್ಯರ್ಥಿ ಮೇಲೆ ದಾಳಿ
ನವದೆಹಲಿ, ಫೆ. 7: ಆಮ್ ಆದ್ಮಿ ಪಕ್ಷದ ಮಾದರಿ ಪಟ್ಟಣದ ಅಭ್ಯರ್ಥಿ ಅಖಿಲೇಶ್ ತ್ರಿಪಾಠಿ ಅವರ ಮೇಲೆ ಶುಕ್ರವಾರ ಸಂಜೆ ದಾಳಿ ನಡೆದಿದೆ. ನಗರದ ಲಾಲ್ ಬಾಗ್ ಸ್ಲಂ ಪ್ರದೇಶದಲ್ಲಿ ಅಕ್ರಮ ಸಾರಾಯಿ ಹಂಚುತ್ತಿದ್ದುದನ್ನು ತಡೆಯಲು ಹೋದ ತ್ರಿಪಾಠಿ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ.
ಜೆ.ಜೆ. ಕಾಲೋನಿಯಲ್ಲಿ ಅಕ್ರಮ ಸಾರಾಯಿ ಹಂಚಲು ಹೋದ ವ್ಯಕ್ತಿಗಳನ್ನು ತಡೆದಿದ್ದಕ್ಕಾಗಿ ಅಖಿಲೇಶ್ ತ್ರಿಪಾಠಿ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. [ನವದೆಹಲಿ ಮತದಾನದ ಲೈವ್]

ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ತ್ರಿಪಾಠಿ ಅವರನ್ನು ಬಾಬು ಜಗಜೀವನರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊದಲು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗಿದ್ದು, ಈಗ ದರ್ಯಾಗಂಜ್‌ನ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.












Click it and Unblock the Notifications