ಪ್ರೀತಿಸಿದ ಹುಡುಗಿ ವಿಷ ಕೊಟ್ಟ ವಿಷಯ ಯುವಕನ ಸೆಲ್ಫೀ ವಿಡಿಯೋದಿಂದ ಬಹಿರಂಗ
ಮೈಸೂರು, ಮೇ 18 : ಪ್ರೀತಿಸಿದ ಹುಡುಗಿ ಹಾಗೂ ಅವರ ಕುಟುಂಬದವರು ತನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆಂದು ಸೆಲ್ಪೀ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮೈಸೂರಿನ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ನನ್ನ ಸಾವಿಗೆ ತನ್ನ ಪ್ರಿಯತಮೆ ಹಾಗೂ ಆಕೆಯ ತಾಯಿ ಸವಿತಾ ಹಾಗೂ ಅಜ್ಜಿ ಕಾರಣ ಎಂದು ವಿಡಿಯೋದಲ್ಲಿ ತಿಳಿಸಿದ್ದಾನೆ.
ನನ್ನ ಪ್ರೇಯಸಿ ಭಾವನಾ ವಿಷ ತಂದುಕೊಟ್ಟು ಸಾಯಿ ಎಂದು ನನಗೆ ಹೇಳಿದ್ದಾಳೆ. ಅಲ್ಲದೇ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆಸಿ ವಿಷ ಕೊಟ್ಟು ಸಹ ಹೋಗಿದ್ದಾಳೆ. ನೀನು ಸಾವಿಗೀಡಾದರೆ ನನ್ನ ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ್ದಾಳೆಂದು ತಿಳಿಸಿದ್ದಾನೆ. ಈಗ ನನ್ನನ್ನು ಪ್ರೀತಿಸಿ ಮತ್ತೊಬ್ಬನೊಂದಿಗೆ ವಿವಾಹವಾಗುತ್ತಿರುವ ಭಾವನಾ ಬಗ್ಗೆ ನನಗೆ ಬೇಸರವಿದೆ. ಅವಳಿಗೆ ಮದುವೆ ಆಗಬಾರದು, ಕಠಿಣ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾನೆ.

ಇನ್ನು ಭಾವನಾ ಫೋಟೋ ತೋರಿಸಿ ಸೆಲ್ಫೀ ವೀಡಿಯೋ ಮಾಡಿರುವ ಸಿದ್ದರಾಜು, ಸದ್ಯ ಮೈಸೂರಿನ ಬೆಳವಾಡಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲದೇ ಬೆಳವಾಡಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ಈ ನಡುವೆ ಭಾವನಾ - ಸಿದ್ದರಾಜು ಜೊತೆಗಿನ ಬಾಂಧವ್ಯ ಮುರಿದು ತನ್ನ ಪೋಷಕರು ತೋರಿಸಿದ ಯುವಕನ ಜೊತೆ ಮದುವೆಗೆ ಮುಂದಾಗಿದ್ದಳು. ಇದರಿಂದ ಸಿದ್ದರಾಜು ನೊಂದಿದ್ದನು ಎನ್ನಲಾಗಿದೆ.
ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications