ಹುಡುಗಿ ಪ್ರೀತಿಸುತ್ತಿಲ್ಲ ಎಂಬ ಟೆನ್ಷನ್ ನಲ್ಲಿ ಹೈಟೆನ್ಷನ್ ಕಂಬವೇರಿದ ಪ್ರೇಮಿ

ಮೈಸೂರು, ಮಾರ್ಚ್ 30 : ಪ್ರೀತಿ ಅನ್ನೋದು ಕುರುಡು ಅಂತಾರೆ. ಪ್ರೀತಿಯಲ್ಲಿ ಬಿದ್ದವರು ಸಾಯಲು ಸಿದ್ಧ ಎಂಬುದನ್ನು ಓದಿದ್ದೇವೆ, ಕೇಳಿದ್ದೇವೆ. ಅದಕ್ಕೆ ಪೂರಕವೆಂಬಂತೆ ನಗರದಲ್ಲೊಂದು ಘಟನೆ ನಡೆದಿದೆ. ತಾನು ಪ್ರೀತಿಸಿದ ಹುಡುಗಿ ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ವಿದ್ಯುತ್ ಕಂಬವೇರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೈಡ್ರಾಮಾ ಸೃಷ್ಟಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು

ನಗರದ ದಟ್ಟಗಳ್ಳಿಯ ಮೀನಾ ಮಾರ್ಬಲ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಂಕರ್ (30)ಎಂಬಾತ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಆತನನ್ನು ಪ್ರೀತಿಸಲು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಈತ ಆಂದೋಲನ ವೃತ್ತದ ಬಳಿ ಹೈಟೆನ್ಶನ್ ಕಂಬವೇರಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದ.

Young man climbs high tension pole with love disappointment

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಮತ್ತು ಕುವೆಂಪುನಗರದ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರಘು ಆತನ ಮನವೊಲಿಸುವಲ್ಲಿ ಯಶಸ್ವಿಯಾದರು. ಆತನ ತಾಯಿ ಕೂಡ ಸ್ಥಳಕ್ಕೆ ಬಂದು ಕೆಳಗಿಳಿಯುವಂತೆ ವಿನಂತಿಸಿದ್ದರು ಎನ್ನಲಾಗಿದೆ. ಎಲ್ಲರ ಒತ್ತಾಯಕ್ಕೆ ಮಣಿದ ಯುವಕ ಕೆಳಗಿಳಿದಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+