ಕೃಷ್ಣರಾಜರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ಯದುವೀರ್ ಬೇಸರ
ಮೈಸೂರು, ಸೆಪ್ಟೆಂಬರ್ 2 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ವಿಷಯಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನನಗೂ ಘಾಸಿಗೊಳಿಸಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯುಕ್ತಿಕವಾಗಿ ಪ್ರತಿಕ್ರಿಯಿಸಲು ನಾನು ಬಹಳ ಚಿಕ್ಕವನು. ಮೈಸೂರಿನ ಜನ ಅವರನ್ನು ದೇವರೆಂದು ನಂಬಿದ್ದಾರೆ. ಜನರ ಭಾವನಾತ್ಮಕ ಸಂಬಂಧವನ್ನು ಅರ್ಥೈಸಿ ಮಾತನಾಡಬೇಕಿತ್ತು. ಈ ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿ ವರ್ತಿಸಬಾರದಿತ್ತು ಎಂದರು.

ಸಿಎಂ ಹೇಳಿಕೆಗೆ ಸಂಸದ ಪ್ರತಾಪ್ ತಿರುಗೇಟು
ಮಹಾರಾಜ ದೇವರಲ್ಲ, ಜನರ ಹಣದಿಂದ ಮಾರ್ಕೆಟ್ ಕಟ್ಟಿದ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಅಕ್ಕಿ ಪ್ಯಾಕ್, ಉಪ್ಪಿನ ಪ್ಯಾಕು ಎಲ್ಲಾ ಯೋಜನೆಗಳ ಮೇಲೆ ನಿಮ್ಮ ಫೋಟೋ ಹಾಕಿಕೊಳ್ಳುತ್ತೀರಲ್ಲ, ಅದು ನಿಮ್ಮ ಸ್ವಂತ ಹಣವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆಯ ಸದಸ್ಯರು ಮೈಸೂರು ಅಭಿವೃದ್ದಿಗೆ ಹೆಚ್ಚಿನ ಹಣ ಕೊಡಬೇಕು ಹಾಗೂ ದೇವರಾಜ ಮಾರುಕಟ್ಟೆಯ ವ್ಯಾಪಾರಸ್ಥರನ್ನು ತೆರವುಗೊಳಿಸಬಾರದು, ಅದು ನಾಲ್ವಡಿ ಕೃಷ್ಣ ರಾಜ ಒಡೆಯರ್ ಕಟ್ಟಿಸಿದ ಮಾರುಕಟ್ಟೆ ಎಂದು ಮನವಿ ಮಾಡಿದ್ದರು.
ಆ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾತಿನ ಭರದಲ್ಲಿ, ಮಹಾರಾಜರು ದೇವರಲ್ಲ, ಜನರ ಹಣದಿಂದ ಮಾರುಕಟ್ಟೆ ಕಟ್ಟಿಸಿದ್ದಾರೆ ಪಾಲಿಕೆ ಸದಸ್ಯರಿಗೆ ಎಂದು ಪಾಠ ಹೇಳಿದ್ದರು. ಈ ಹೇಳಿಕೆ ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದೆ. ಒಬ್ಬ ಮುಖ್ಯಮಂತ್ರಿಯಾಗಿ ಈರೀತಿ ದುರಹಂಕಾರದಿಂದ, ಬೇಜವಾಬ್ದಾರಿಯಿಂದ ಹೇಳಿಕೆ ನೀಡಬಾರದಿತ್ತು ಎಂಬ ಮಾತುಗಳು ಕೇಳಿಬಂದಿವೆ.












Click it and Unblock the Notifications