ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ
Recommended Video

ಮೈಸೂರು, ಅಕ್ಟೋಬರ್. 04 : ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗುತ್ತಿದ್ದಂತೆ ಅಂಬಾವಿಲಾಸ ಅರಮನೆಯಲ್ಲಿಯೂ ಸಿದ್ಧತೆಗಳು ಆರಂಭವಾಗಿವೆ. ನವರಾತ್ರಿಯಲ್ಲಿ ನಡೆಯುವ ಖಾಸಗಿ ದರ್ಬಾರ್ ಗೆ ಇಂದು ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ಸಾಂಗವಾಗಿ ನೆರವೇರಿದೆ.
ದಸರಾ ಸಿದ್ಧತೆಯ ಮೊದಲು ಅರಮನೆ ದರ್ಬಾರ್ ಹಾಲ್ ನಲ್ಲಿ ನವಗ್ರಹ ಹೋಮ, ಶಾಂತಿ ಪೂಜೆ ನವರಾತ್ರಿಯ ಆರಂಭದ ಪೂಜಾ ವಿಧಾನಗಳು ನಡೆದವು.

ಅಲ್ಲದೇ ಅಂಬಾವಿಲಾಸ ದರ್ಬಾರ್ ಹಾಲ್ ನಲ್ಲಿ ಬೆಳಗ್ಗೆ 9.45 ರಿಂದ 10.15ರವರೆಗೆ ಗೆಜ್ಜಗಳ್ಳಿ ಗ್ರಾಮಸ್ಥರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಪೂರ್ಣಗೊಳಿಸಿದರು.
ಈ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು. ರತ್ನಖಚಿತ ಸಿಂಹಾಸನವನ್ನು ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾತ್ರ ಜೋಡಿಸಿ ರಾಜವಂಶಸ್ಥರ ಖಾಸಗಿ ದರ್ಬಾರ್ ಗೆ ಬಳಸಲಾಗುವುದು. ನಂತರ ಸ್ವಲ್ಪ ದಿನದವರೆಗೆ ಸಾರ್ವಜನಿಕ ದರ್ಶನಕ್ಕೂ ಅವಕಾಶ ನೀಡಲಾಗುವುದು.

ಕರಿಮರ, ದಂತ, ಚಿನ್ನ, ಬೆಳ್ಳಿಗಳಿಂದ ನಿರ್ಮಿಸಿರುವ ಸಿಂಹಾಸನಕ್ಕೆ ವಜ್ರ, ಮುತ್ತು, ರತ್ನಗಳನ್ನು ಅಳವಡಿಸಲಾಗಿದೆ. ಅನುವಂಶಿಕ ಸಿಂಹಾಸನವನ್ನು ರಾಜವಂಶಸ್ಥರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ರಾಜಸಭೆಯ ಸಮಯದಲ್ಲಿ ಮೊದಲು ಇದಕ್ಕೆ ಪೂಜೆ ಸಲ್ಲಿಸಿ ಆರೋಹಣ ಮಾಡುವರು.
ಸಿಂಹಾಸನದ ಜೋಡಣೆ ಕಾರ್ಯವನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಗೆಜ್ಜಗಳ್ಳಿ ಗ್ರಾಮಸ್ಥರದು.

ಈ ಬಾರಿ ನಡೆಯಲಿರುವ ದಸರಾ ಹಬ್ಬದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ನವರಾತ್ರಿಯ ಪೂಜಾ ಕೈಂಕರ್ಯಗಳಲ್ಲಿ ರಾಜವಂಶಸ್ಥ ಯದುವೀರ್ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 10ರಂದು ದಸರಾ ಹಬ್ಬ ಉದ್ಘಾಟನೆಗೊಳ್ಳಲಿದ್ದು, ರಾಜವಂಶಸ್ಥರ ಖಾಸಗಿ ದರ್ಬಾರ್ ಕೂಡ ಅಂದೇ ಆರಂಭವಾಗಲಿದೆ.
-
ಶತ್ರು ನಿಗ್ರಹ ವಾರಾಹಿ ಹೋಮದ ವಿಶೇಷ ಫಲ – ಕನ್ಯಾ ರಾಶಿಯವರಿಗೆ ಪರಿಚಯ -
ಶತ್ರು ನಿಗ್ರಹ ವಾರಾಹಿ ಹೋಮದ ವಿಶೇಷ ಫಲ – ಸಿಂಹ ರಾಶಿಯವರಿಗೆ ಇದರ ಮಹತ್ವ -
ಶತ್ರು ನಿಗ್ರಹ ವಾರಾಹಿ ಹೋಮದ ವಿಶೇಷ ಫಲ – ಕರ್ಕಾಟಕ ರಾಶಿಯವರಿಗೆ ಇದರ ಅಗತ್ಯತೆ -
ಶತ್ರು ನಿಗ್ರಹ ವಾರಾಹಿ ಹೋಮದ ವಿಶೇಷ ಫಲ ಮಿಥುನ ರಾಶಿಗೆ ಶುಭಫಲಗಳು -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ












Click it and Unblock the Notifications