ಕಾವೇರಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಯತ್ನ, ಸ್ಥಳೀಯರಿಂದ ರಕ್ಷಣೆ
ಮಡಿಕೇರಿ, ಜುಲೈ 21: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯದಾದ ಸೇತುವೆಯಿಂದ ಜಿಗಿದು ಮಹಿಳೆಯು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಸೋಮವಾರ ಮೂರ್ನಾಡು ಸಮೀಪದ ಬಲಮುರಿ ಎಂಬಲ್ಲಿ ನಡೆದಿದೆ.
Recommended Video
ಜೋರಾಗಿ ಬೀಳುತ್ತಿದ್ದ ಮಳೆಯ ನಡುವೆ ಬಲಮುರಿ ಸೇತುವೆ ಮೇಲೆ ಬಂದಿರುವ ಯಾರೂ ಓಡಾಡದಿರುವುದನ್ನು ಗಮನಿಸಿ, ಉಕ್ಕಿ ಹರಿಯುವ ಕಾವೇರಿ ನದಿಗೆ ಹಾರಲು ಮುಂದಾಗುತ್ತಿದ್ದಂತೆ ಆಟೋ ಒಂದು ಬಂದು ಅಡ್ಡಿಯುಂಟು ಮಾಡಿತು.
ಆಟೋ ಅಲ್ಲಿಂದ ತೆರಳುತ್ತಿದಂತೆ ದೇವರಿಗೆ ಕೈಮುಗಿದು ಕಾರ್ಮಿಕ ಮಹಿಳೆಯೊಬ್ಬಳು ನೀರಿಗೆ ಜಿಗಿದಿದ್ದಾಳೆ. ಈ ಸಂದರ್ಭದಲ್ಲಿ ಇಲ್ಲಿಗೆ ಸಮೀಪದಲ್ಲೇ ಮಳೆಗೆ ಆಶ್ರಯ ಪಡೆದಿದ್ದ ಯುವಕರು ಮಹಿಳೆಯ ನಡೆ ಅನುಮಾನಾಸ್ಪದವಾಗಿದ್ದ ಕಾರಣ ತಮ್ಮ ಮೂಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು ನೋಡ ನೋಡುತ್ತಿದ್ದಂತೆ ಮಹಿಳೆ ನೀರಿಗೆ ಜಿಗಿಯುವುದು ಸೆರೆಯಾಯಿತು.

ತಕ್ಷಣವೇ ಕಾರ್ಯಪ್ರವೃತ್ತರಾದ ಯುವಕರು ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯಕ್ಕೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಹಿಳೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆತ್ಮಹತ್ಯೆ ಮಾಡಿಕೊಳಲ್ಲು ನಿರ್ದಿಷ್ಟ ಕಾರಣವೂ ತಿಳಿದು ಬಂದಿಲ್ಲ.
ಈಕೆಯನ್ನು ನೀರಿನಿಂದ ರಕ್ಷಿಸಿದ ಸ್ಥಳಿಯರಾದ ಬೊಳ್ತಂಡ ಕಿರಣ್, ಚಂಬಾಂಡ ಸೂರಜ್ ಮತ್ತು ಬಲಮುರಿ ದೇವಾಲಯದ ಅರ್ಚಕ ಚಂದ್ರಶೇಖರ ಐತಾಳ್ ಸಾಹಸಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications