ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಫಿಲ್ಮ್ ಸಿಟಿ ಕನಸು ನನಸಾಗುವುದೇ?

By Coovercolly Indresh
|
Google Oneindia Kannada News

Recommended Video

ರಾಹುಲ್ ದ್ರಾವಿಡ್ ಬಳಿ ಬಂದ ಹಾರ್ದಿಕ್ ಪಾಂಡ್ಯ | Rahul Dravid | Hardik Pandya | Oneindia Kannada

ಮೈಸೂರು, ಜನವರಿ 22: ಪ್ರವಾಸಿ ನಗರಿ ಮೈಸೂರು ರಾಜ್ಯದಲ್ಲೇ ಅತ್ಯಂತ ಹೆಚ್ಚು ಪ್ರವಾಸಿ ತಾಣಗಳನ್ನು, ಅರಮನೆಗಳನ್ನು, ಪಾರಂಪರಿಕ ಕಟ್ಟಡಗಳನ್ನು ಹೊಂದಿರುವ ನಗರ. ಬಹುಶಃ ಕನ್ನಡ, ತಮಿಳು, ತೆಲುಗಿನ ಖ್ಯಾತ ನಿರ್ದೇಶಕರೆಲ್ಲರೂ ತಮ್ಮ ಒಂದಾದರೂ ಚಿತ್ರಕ್ಕೆ ಇಲ್ಲಿಯೇ ಶೂಟಿಂಗ್ ಮಾಡಿರುತ್ತಾರೆ.

ವರ್ಷಗಳಿಂದಲೂ ಚಲನಚಿತ್ರ ನಿರ್ಮಾಣಕ್ಕೆ ಸಹಾಯಕವಾಗಲಿ ಮತ್ತು ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗಲಿ ಎಂದು ರಾಜ್ಯದಲ್ಲಿ ಚಿತ್ರ ನಗರಿಯೊಂದರ ನಿರ್ಮಾಣಕ್ಕೆ ಚಲನಚಿತ್ರ ರಂಗವೂ ಸರ್ಕಾರವನ್ನು ಒತ್ತಾಯಿಸುತ್ತಲೇ ಇತ್ತು. ಕನ್ನಡ ಚಿತ್ರರಂಗವು ಚಿತ್ರ ನಗರಿಯ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಇತ್ತು. ಆದರೆ ಈ ಕನಸು ಕೈಗೂಡಲಿದೆಯೇ? ಎಂಬ ಪ್ರಶ್ನೆ ಹಾಗೇ ಉಳಿದಿದೆ.

 ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ 124 ಎಕರೆ ಭೂಮಿ

ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ 124 ಎಕರೆ ಭೂಮಿ

2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯಲ್ಲೇ ಚಿತ್ರ ನಗರಿ ಸ್ಥಾಪನೆ ಮಾಡುವ ಘೋಷಣೆ ಮಾಡಿದರು. ಇದಕ್ಕಾಗಿ ಅಧಿಕಾರಿಗಳು ವರುಣಾ ಕ್ಷೇತ್ರದ, ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ 124 ಎಕರೆ ಭೂಮಿಯನ್ನೂ ಗುರ್ತಿಸಿದರು. ಈ ಬೆಳವಣಿಗೆಯಿಂದ ಪೂರ್ಣ ಚಿತ್ರರಂಗವೇ ಪುಳಕಗೊಂಡಿತಷ್ಟೇ ಅಲ್ಲ, ಸಂತಸಪಟ್ಟಿತು. ಆದರೆ ಈ ಘೋಷಣೆ ಬರೀ ಕಾಗದದಲ್ಲೇ ಉಳಿಯಿತು. ಬೇರೇನೂ ಬೆಳವಣಿಗೆ ಆಗಲೇ ಇಲ್ಲ.

ಮೈಸೂರಿನಲ್ಲಿ ಇನ್ಯಾವತ್ತು ನಿರ್ಮಾಣವಾಗುತ್ತದೆಯೋ ಫಿಲ್ಮ್ ಸಿಟಿ!?ಮೈಸೂರಿನಲ್ಲಿ ಇನ್ಯಾವತ್ತು ನಿರ್ಮಾಣವಾಗುತ್ತದೆಯೋ ಫಿಲ್ಮ್ ಸಿಟಿ!?

ಈ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತಿದ್ದ ಸಿದ್ದರಾಮಯ್ಯ ಅವರು ಚಿತ್ರನಗರಿ ಆಗುವುದೆಂಬ ಭರವಸೆ ನೀಡುತ್ತಿದ್ದರೇ ಹೊರತು ಇಚ್ಛಾಶಕ್ತಿ ತೋರಲಿಲ್ಲ. ಅಷ್ಟು ಹೊತ್ತಿಗೆ ಅವರ ಅಧಿಕಾರಾವಧಿಯೂ ಮುಗಿಯಿತು.

 ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಹೇಳಿದ ಎಚ್ ಡಿಕೆ

ರಾಮನಗರದಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಹೇಳಿದ ಎಚ್ ಡಿಕೆ

ಸಿದ್ದರಾಮಯ್ಯ ಅವರ ನಂತರ ಅಧಿಕಾರವನ್ನೇರಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರ ರಾಮನಗರದಲ್ಲೇ ಚಿತ್ರ ನಗರಿ ನಿರ್ಮಿಸುವುದಾಗಿ ಭರವಸೆ ನೀಡಿದರು. ಇದು ಬೆಂಗಳೂರಿಗೂ ಹತ್ತಿರದಲ್ಲಿರುವುದರಿಂದ ನಿರ್ಮಾಣಕ್ಕೂ ಅನುಕೂಲವಾಗಿದ್ದು ಪ್ರಯಾಣದ ಸಮಯವೂ ಉಳಿಯಲಿದೆ ಎಂದು ಕುಮಾರ ಸ್ವಾಮಿ ಅವರ ಅಭಿಮತವಾಗಿತ್ತು.

ಆದರೆ ಇದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಚಿತ್ರರಂಗದಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಯಿತು. ಮೈಸೂರಿಗೂ ಚಿತ್ರರಂಗಕ್ಕೂ ಅವಿನಾಭಾವ ನಂಟು ಇದೆ. ಮೈಸೂರಿನ 100 ಕಿಲೋಮೀಟರ್ ಪರಿಧಿಯೊಳಗೆ 250ಕ್ಕೂ ಹೆಚ್ಚು ಶೂಟಿಂಗ್ ತಾಣಗಳಿವೆ. ಮೈಸೂರು ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳು, ಅವುಗಳ ಸುಂದರವಾದ ಸ್ಥಳಗಳು, ಕೋಟೆಗಳು, ಅರಮನೆಗಳು ಮತ್ತು ಜಲಪಾತಗಳು ಪ್ರತಿ ಚಲನಚಿತ್ರ ನಿರ್ದೇಶಕರಿಗೆ ನೆಚ್ಚಿನ ತಾಣಗಳೂ ಆಗಿವೆ ಎಂಬುದು ಇದಕ್ಕೆ ಕಾರಣವಾಗಿತ್ತು.

 ಮೈಸೂರು ವಿಶ್ವದ ಶ್ರೇಷ್ಠ ತಾಣ ಎಂದು ಬಣ್ಣಿಸಿದ್ದ ಹಾಲಿವುಡ್ ನಿರ್ಮಾಪಕ

ಮೈಸೂರು ವಿಶ್ವದ ಶ್ರೇಷ್ಠ ತಾಣ ಎಂದು ಬಣ್ಣಿಸಿದ್ದ ಹಾಲಿವುಡ್ ನಿರ್ಮಾಪಕ

1929ರಲ್ಲಿಯೇ ಮೈಸೂರಿನ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರು ಕೈಯಿಂದ ಸುತ್ತಿ ಚಿತ್ರ ತೆಗೆಯುವ ಕ್ಯಾಮರಾದಿಂದ ‘ನಿರುಪಮಾ' ಎಂಬ ನಾಟಕವನ್ನು ಯಥಾವತ್ತಾಗಿ ಚಿತ್ರೀಕರಿಸಿದ್ದರು. ಹೀಗಾಗಿ ಮೈಸೂರು ಅರಮನೆಯೇ ಮೊದಲ ಸ್ಟುಡಿಯೋ ಹಾಗೂ ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ಕನ್ನಡ ಸಿನಿಮಾ ನಿರ್ಮಾಪಕರು ಎನ್ನುವುದನ್ನು ಗಮನಿಸಬೇಕು. ಅಷೇ ಅಲ್ಲ, 1946ರಲ್ಲಿ ತೆರೆಕಂಡ ಹಾಲಿವುಡ್ ‌ನ ಹ್ಯಾರಿ ಬ್ಲಾಕ್ ಟೈಗರ್ ಸಿನಿಮಾ ನಿರ್ಮಾಪಕ ಅಲೆಗ್ಸಾಂಡರ್ ಕೊರ್ಡ, ಸಿನಿಮಾ ಚಿತ್ರೀಕರಣಕ್ಕೆ ವಿಶ್ವದ ಶ್ರೇಷ್ಠ ತಾಣ ಮೈಸೂರು ಎಂದು ಬಣ್ಣಿಸಿದ್ದರು.

ಫಿಲ್ಮ್‌ಸಿಟಿ ಮೈಸೂರಲ್ಲಲ್ಲ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣಫಿಲ್ಮ್‌ಸಿಟಿ ಮೈಸೂರಲ್ಲಲ್ಲ ದೊಡ್ಡಬಳ್ಳಾಪುರದಲ್ಲಿ ನಿರ್ಮಾಣ

ಕನ್ನಡದ ವರನಟ ಡಾ.ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಅಂಬರೀಶ್ ಅವರೂ ಮೈಸೂರಿನಲ್ಲೇ ಚಿತ್ರ ನಗರಿ ಸ್ಥಾಪನೆ ಮಾಡಲು ಒಲವು ತೋರಿದ್ದರು. ರಾಜ್ ಅವರು ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಚಿತ್ರ ನಗರಿ ಸ್ಥಾಪನೆ ಕುರಿತು ಒಲವು ತೋರಿದ್ದರು. ಈ ಮೂವರು ನಟರೂ ಮೈಸೂರಿನಲ್ಲೇ ಬೆಳೆದವರೆಂಬುದನ್ನು ಮರೆಯುವಂತೆಯೇ ಇಲ್ಲ. ಆದರೆ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಹತ್ವಾಕಾಂಕ್ಷೆಯ ಫಿಲ್ಮ್ ಸಿಟಿ ಯೋಜನೆಗೆ ಬೆಂಗಳೂರಿನ ತಾತಗುಣಿಯಲ್ಲಿರುವ ರೋರಿಚ್ ಮತ್ತು ದೇವಿಕಾ ರಾಣಿ ಎಸ್ಟೇಟ್ ಗೆ ಸ್ಥಳಾಂತರಿಸುವ ಯೋಜನೆಯನ್ನು ಹೊಂದಿದ್ದರು. ಈ ಪ್ರಸ್ತಾಪ ಕಾನೂನು ತೊಡಕು ಎದುರಿಸುತ್ತಿದೆ.

 380 ಕೋಟಿ ರೂ ವೆಚ್ಚ, 1700 ಜನರಿಗೆ ನೇರ ಉದ್ಯೋಗ

380 ಕೋಟಿ ರೂ ವೆಚ್ಚ, 1700 ಜನರಿಗೆ ನೇರ ಉದ್ಯೋಗ

ಮೈಸೂರು ಫಿಲ್ಮ್ ಸಿಟಿಯ ಕರಡು ಕಾರ್ಯಸಾಧ್ಯತೆಯ ವರದಿಯನ್ನು ಮಾರ್ಚ್ 2018ರಲ್ಲಿಯೇ ಸಲ್ಲಿಸಲಾಗಿದೆ. ಕಳೆದ ವರ್ಷದ ಆರಂಭದಲ್ಲಿ, ಅರ್ನ್ಸ್ಟ್ & ಯಂಗ್ ಕಂಪೆನಿಯು ಯೋಜನಾ ವರದಿಯನ್ನೂ ಸಿದ್ಧಪಡಿಸಿದ್ದು, ಇದರಲ್ಲಿ ಮೈಸೂರನ್ನು "ಅನುಕೂಲಕರ ಸ್ಥಳ" ಎಂದು ಒತ್ತಿ ಹೇಳಿದೆ. ಈ ವರದಿಯ ಪ್ರಕಾರ, ಮೈಸೂರು ಫಿಲ್ಮ್ ಸಿಟಿ ಸುಮಾರು ರೂ. 380 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದ್ದು, ಇದು 1,700 ಜನರಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಫಿಲ್ಮ್ ಸಿಟಿಯು ಚಲನಚಿತ್ರ ತಯಾರಿಕೆ, ಆತಿಥ್ಯ ವಲಯ, ಚಲನಚಿತ್ರ ತರಬೇತಿ/ಅನುಭವ ವಲಯ ಮತ್ತು ಮನರಂಜನಾ ವಲಯಕ್ಕಾಗಿ ಉತ್ಪಾದನೆ ಮತ್ತು ನಂತರದ ನಿರ್ಮಾಣ ವಲಯಗಳನ್ನು ಹೊಂದಿರಬೇಕು. ಪ್ರದೇಶದ ದೃಷ್ಟಿಯಿಂದ, ಮೈಸೂರು ಫಿಲ್ಮ್ ಸಿಟಿಯು ಲಂಡನ್ ‌ನ ಪೈನ್ ‌ವುಡ್ ಸ್ಟುಡಿಯೋಸ್ ಮತ್ತು ಸಿಂಗಾಪುರದ ಯೂನಿವರ್ಸಲ್ ಸ್ಟುಡಿಯೋವನ್ನು ಮೀರಿಸುತ್ತದೆ ಎಂದು ಚಿತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರಿನಲ್ಲಿ ಮತ್ತೆ ಚಿಗುರೊಡೆದಿದೆ ಫಿಲಂ ಸಿಟಿ ನಿರ್ಮಾಣದ ಕನಸುಮೈಸೂರಿನಲ್ಲಿ ಮತ್ತೆ ಚಿಗುರೊಡೆದಿದೆ ಫಿಲಂ ಸಿಟಿ ನಿರ್ಮಾಣದ ಕನಸು

ಈ ಚಿತ್ರ ನಗರಿಯನ್ನು ಟೆಂಡರ್ ಮೂಲಕ ಖಾಸಗಿ ಕಂಪೆನಿಯು ಕರ್ನಾಟಕ ಚಲನಚಿತ್ರ ಅಕಾಡೆಮಿ (ಕೆಎಲ್ ‌ಎ) ಸಹಯೋಗದೊಂದಿಗೆ ನಿರ್ಮಿಸಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಚ್ಛಾಶಕ್ತಿ ಪ್ರದರ್ಶಿಸಿ ಅದಷ್ಟು ಬೇಗ ಚಿತ್ರ ನಗರಿ ಸ್ಥಾಪಿಸಲಿ ಎಂಬುದೇ ಮೈಸೂರು ನಾಗರಿಕರ ಆಶಯ.

English summary
The Kannada film industry was pressuring the state government to build film city in Mysuru. But will this dream come true? The question remains till now
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X