• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜುಬಿಲಿಯಂಟ್ ಕಾರ್ಖಾನೆ ಕುರಿತು ತನಿಖೆ ಇನ್ನೂ ಆರಂಭವಾಗಿಲ್ಲವೇಕೆ?

By ಮೈಸೂರು ಪ್ರತಿನಿಧಿ
|

ಮೈಸೂರು, ಏಪ್ರಿಲ್ 28: "ಜುಬಿಲಿಯಂಟ್ ಕಾರ್ಖಾನೆಯಲ್ಲಿ 1500 ಕಾರ್ಮಿಕರು ಇದ್ದಾರೆ. 70ಕ್ಕೂ ಹೆಚ್ಚು ಜನರು ಪಾಸಿಟಿವ್ ಆಗಿದ್ದಾರೆ. ಹೇಗೆ, ಯಾವ ರೀತಿ ತನಿಖೆ ಮುಂದುವರಿಸಬೇಕು, ಯಾವ ಅಂಶಗಳ ಆಧಾರದ ಮೇಲೆ ತನಿಖೆ ಮಾಡಬೇಕೆಂದು ಕೇಳಿದ್ದೇನೆ. ಇನ್ನೂ ಸ್ಪಷ್ಟತೆ ಬಂದಿಲ್ಲ" ಎಂದು ಜುಬಿಲಿಯೆಂಟ್ ಕಾರ್ಖಾನೆ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ ಐಎಎಸ್ ಅಧಿಕಾರಿ ಹರ್ಷಗುಪ್ತ.

   ಮಹಿಳಾ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ವೇಳೆ ಆರೋಪ ONEINDIA KANNADA

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಮೈಸೂರು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ವಿಶೇಷಾಧಿಕಾರಿಯನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತಾ ಅವರನ್ನು ನೇಮಕ ಮಾಡಿತ್ತು. ಆದರೆ ಜುಬಿಲಿಯೆಂಟ್ ಕಾರ್ಖಾನೆ ತನಿಖೆ ಶುರುವೇ ಆಗಿಲ್ಲ. ಏ‌.14ರಂದು ನನ್ನನ್ನು ಮೈಸೂರಿಗೆ ಕೋವಿಡ್ ಮೇಲ್ವಿಚಾರಣೆಗೆ ನೇಮಿಸಿತು. ನಂತರ ಮುಖ್ಯ ಕಾರ್ಯದರ್ಶಿ ಪತ್ರ ಬರೆದು ಜುಬಿಲಿಯೆಂಟ್ ಕಾರ್ಖಾನೆ ತನಿಖೆ ನಡೆಸುವಂತೆ ಸೂಚಿಸಿದ್ದರು. ಒಂದಷ್ಟು ತಾಂತ್ರಿಕ ಮಾರ್ಗದರ್ಶನ ಕೋರಿ ಪತ್ರ ಬರೆದಿದ್ದೇನೆ. ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ತನಿಖಾ ಪಕ್ರಿಯೆಗಳಿಗೆ ಕೈ ಹಾಕಿಲ್ಲ ಎಂದು ಉತ್ತರಿಸಿದ್ದಾರೆ ಹರ್ಷಗುಪ್ತ.

   ಮೈಸೂರಿಗೆ ಕೊರೊನಾ ವಿಶೇಷಾಧಿಕಾರಿಯಾಗಿ ಹರ್ಷ ಗುಪ್ತಾ ನೇಮಕ

   "ನಾನು ಸರ್ಕಾರಿ ಸೇವಕ. ಪತ್ರದಲ್ಲಿರುವ ಎಲ್ಲ ವಿಚಾರಗಳನ್ನೂ ಹೇಳಲು ಸಾಧ್ಯವಿಲ್ಲ. ಪೊಲೀಸರು ಈಗಾಗಲೇ ತನಿಖೆಗೆ ನಡೆಸುತ್ತಿದ್ದಾರೆ‌. ಅವರ ತನಿಖೆಯಲ್ಲಿ ನಾನು ಹಸ್ತಕ್ಷೇಪ ಮಾಡಿಲ್ಲ. ಕೊರೊನಾ ಸೋಂಕು ಯಾವ ರೀತಿ ಬಂತು ಎನ್ನುವುದರ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ. ಸೋಂಕಿನ ಮೂಲ ಪತ್ತೆ ಹಚ್ಚುವುದಕ್ಕಿಂತ ರೋಗ ಹರಡುವುದನ್ನು ತಡೆಯುವುದು ಮುಖ್ಯ. ಈ ಹಂತದಲ್ಲಿ ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ದೊಡ್ಡ ಮಟ್ಟದಲ್ಲಿ ಜನರು ಕ್ವಾರಂಟೈನ್ ಇರುವಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯಬೇಕು" ಎಂದಿದ್ದಾರೆ.

   English summary
   "I didnt get any clarification regarding jubilant factory investigation" said IAS Officer Harshagupta today
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X