Darshan Arrest: ದರ್ಶನ್‌ಗೆ ನಿನ್ ಕಥೆ ಎಲ್ಲಾ ಗೊತ್ತು ಸುಮ್ನೆ ಜೀಪ್‌ ಹತ್ತು ಎಂದಿದ್ದ ಎಸಿಪಿ ಚಂದನ್ ಯಾರು ಗೊತ್ತಾ?

ಇಡೀ ರಾಜ್ಯದ ಗಮನ ಸೆಳೆದಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದರೆ, ಇತ್ತ ಕಡೆ ದರ್ಶನ್ ಅವರನ್ನು ಮೈಸೂರಿನಲ್ಲಿ ಎಡೆಮುರಿ ಕಟ್ಟಿದ್ದ ಮೈಸೂರು ಮೂಲದ ಎಸಿಪಿ ಚಂದನ್ ಕುಮಾರ್ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ ಎಂಬ ಇಡೀ ರಾಜ್ಯಕ್ಕೆ ಕಾಡ್ಗಿಚ್ಚಿನಂತೆ ಹಬ್ಬಿದಾಗ ದರ್ಶನ್ ಮೈಸೂರಿನಲ್ಲಿದ್ದರು. ರ್‍ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಶೂಟಿಂಗ್ ನಿಮಿತ್ತ ತಂಗಿದ್ದರು. ಬೆಳಗ್ಗೆ ಜಿಮ್ ಮುಗಿಸಿ ಹೊರರಬರುತ್ತಿದ್ದಂತೆ ಎಸಿಪಿ ಚಂದನ್ ಹೋಟೆಲ್‌ನಲ್ಲೇ ಬಂದಿಸಿದ್ದರು.

Who is ACP Chandan the Officer Who Arrested Actor Darshan and His Gang

ಈ ವೇಳೆ ದರ್ಶನ್ "ನಾನ್ ಬರ್ತೀನಿ ಮುಂದೆ ನಡೀರಿ. ನಿಮ್ಮ ಜೊತೆ ಬಂದರೆ ಜನ ತಪ್ಪು ತಿಳಿದುಕೊಳ್ಳುತ್ತಾರೆ. ನನ್ನ ಕಾರಿನಲ್ಲಿ ಬರುತ್ತೇನೆ" ಎಂದಿದ್ದಾರೆ. ಈ ಮಾತಿಗೆ ಎಸಿಪಿ ಚಂದನ್ ಕುಮಾರ್ ಅವರು, ನೀನ್ಯಾರು? ನಿನ್ ಕಥೆ ಏನು ಗೊತ್ತು ಜೀಪ್ ಹತ್ತು ಅಂದಿದ್ದಾರೆ. ಎಸಿಪಿ ಮಾತಿಗೆ ಕ್ಷಣ ಕಾಲ ನಟ ಶಾಕ್ ಒಳಗಾಗಿದ್ದಾರೆ.

ಯಾರು ಈ ಚಂದನ್ ಕುಮಾರ್?

ಹಾಗೆ ನೋಡಿದರೆ ಎಸಿಪಿ ಚಂದನ್ ಕುಮಾರ್ ಓದಿದ್ದು, ಬಾಲ್ಯ ಕಳೆದಿದ್ದು ಎಲ್ಲಾ ಮೈಸೂರಿನಲ್ಲೇ. ದರ್ಶನ್ ಹಾಗೂ ಚಂದನ್ ಕುಮಾರ್ ಮೈಸೂರಿನ ಇಟ್ಟಿಗೆಗೂಡಿನವರು, ಒಂದೇ ಏರಿಯಾದವರೇ ಆಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕೆಲಕಾಲ ಎಂಜಿನಿಯರ್ ಆಗಿ ಕೆಲಸ ಮಾಡಿದ್ದ ಅವರು ನಂತರ ಕೆಪಿಎಸ್ ಸಿ ಪರೀಕ್ಷೆ ಬರೆದು ನಾಲ್ಕನೇ ರ್‍ಯಾಂಕ್ ಪಡೆದು ಡಿವೈಎಸ್‌ಪಿ ಆದರು.

ಚಂದನ್ ಅವರು ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಹೈಸ್ಕೂಲ್, ಪಿಯುಸಿ ಓದಿದ್ದರು. ವಿದ್ಯಾವರ್ಧಕ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪೂರೈಸಿದರು. ಕೆಲ ಕಾಲ ಇನ್ಪೋಸಿಸ್‌ನಲ್ಲಿ ಕೆಲಸ ಮಾಡಿದ್ದರು. ಚಂದನ್ ಅವರ ತಂದೆ ನೀಲಕಂಠ ಹಾಗು ತಾಯಿ ಮಂಜುಳಾ. ಇದೀಗ ಪ್ರಭಾವಿ ನಟ ಪ್ರಕರಣದಲ್ಲಿ ಚಂದನ್ ತೋರಿದ ದಿಟ್ಟತನ ಹಾಗೂ ಪ್ರಾಮಾಣಿಕತೆಗೆ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿದೆ.

ದರ್ಶನ್ ಅವರ ಪ್ರಕರಣದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಕಾರ್ಯನಿರ್ವಹಿಸುತ್ತಿರುವ ಚಂದನ್ ಅವರ ಕುರಿತು ಸ್ನೇಹಿತರು, ಬಡಾವಣೆಯ ಜನರು ನಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೈಸೂರು ಚಿರಪರಿಚಿತವಾಗಿರುವ ಕಾರಣದಿಂದಲೇ ಚಂದನ್ ಕುಮಾರ್ ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೇಸ್ ಕುರಿತು ಮಾಹಿತಿ ಸಿಗುತ್ತದಂತೆ ಪ್ರಕರಣದ ಇಂಚಿಂಚು ಕಾರ್ಯದಲ್ಲೂ ಮುತುವರ್ಜಿ ವಹಿಸಿದ್ದ ಕೆಲಸ ಮಾಡಿದ್ದ ಚಂದನ್ ಬಗ್ಗೆ ಇದೀಗ ಎಲ್ಲೆಡೆ ಮೆಚ್ಚುಗೆ ಸುರಿಮಳೆಯೇ ಹರಿದು ಬರುತ್ತಿದೆ.

ದರ್ಶನ್ ಪ್ರಕರಣದಲ್ಲಿ ಕರ್ನಾಟಕ ಪೊಲೀಸರು ಮಾಡುತ್ತಿರುವ ವಿಚಾರಣೆ ಸದ್ಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ರೇಣುಕಾಸ್ವಾಮಿ ಕೊಲೆ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈಗಾಗಲೇ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಕೊಲೆ ಪ್ರಕರಣದಲ್ಲಿ ಈಗಾಗಲೇ 17 ಆರೋಪಿಗಳನ್ನು ಬಂಧಿಸಲಾಗಿದೆ. ಪವಿತ್ರಾಗೌಡ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದು, ದರ್ಶನ್ ಎ2 ಆರೋಪಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+