Mysuru Metro: ಮೈಸೂರಿಗೆ ಮೆಟ್ರೋ ಬೇಕಾ? ಜನ ಏನಂತಾರೆ?
ಬೆಂಗಳೂರು, ಏಪ್ರಿಲ್, 27: ಬೆಂಗಳೂರಿಲ್ಲಿ ಐಟಿ ಸೇರದಂತೆ ಇನ್ನು ಮುಂದಾತ ದೇಶ, ವಿದೇಶದ ದೈತ್ಯ ಕಂಪನಿಗಳಿದ್ದು, ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಉದ್ಯೋಗ ಅರಸಿ ಇಲ್ಲಿಗೆ ಬರುತ್ತಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ಜನದಟ್ಟಣೆ ಹೆಚ್ಚಾಗುತ್ತಲೇ ಇದ್ದು, ಪ್ರತಿನಿತ್ಯವೂ ಕೂಡ ಟ್ರಾಫಿಕ್ ಜಂಜಾಟದಲ್ಲೇ ಕಳೆಯಬೇಕಾಗುತ್ತದೆ. ಆದ್ದರಿಂದ ಇಲ್ಲಿನ ಜನರಿಗೆ ಮೆಟ್ರೋ ತುಂಬಾ ಅವಶ್ಯಕವಾಗಿದೆ. ಆದರೆ ಟ್ರಾಫಿಕ್ ಸಮಸ್ಯೆಯೆ ಇಲ್ಲದ ಮೈಸೂರಿಗೆ ಮೆಟ್ರೋ ಅವಶ್ಯಕತೆ ಇದ್ಯಾ? ಈ ಬಗ್ಗೆ ಜನರು ಏನು ಹೇಳಿದ್ದಾರೆಂದು ಇಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಬೆಳಗ್ಗೆ ಆಯಿತೆಂದರೆ ಸಾಕು ಕಚೇರಿ ಕೆಲಸಗಳಿಗೆ ಹೊರಡುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಬೈಕ್, ಕಾರ್‌ಗಳಲ್ಲಿ ಹೊರಟರೆ ಟ್ರಾಫಿಕ್ ಸಮಸ್ಯೆಯಂತೂ ತಪ್ಪಿದ್ದಲ್ಲ. ಒಂದು ಕಡೆ ರಸ್ತೆಯಲ್ಲಿ ಏನಾದರೂ ಸಮಸ್ಯೆ ಆಯಿತೆಂದರೆ ಮುಗಿದೋಯ್ತು ಕತೆ. ಬೈಕ್, ಕಾರು ಸವಾರರು ಆ ದಿನ ಅಲ್ಲೇ ಕಳೆಯಬೇಕಾಗುತ್ತದೆ. ಆದ್ದರಿಂದ ಈ ಸಮಸ್ಯೆಯಿಂದ ತಪ್ಪಿಕೊಳ್ಳಲು ಬಹುತೇಕ ಉದ್ಯೋಗಿಗಳು, ಸಾರ್ವಜನಿಕರು ನಮ್ಮ ಮೆಟ್ರೋವನ್ನು ಅವಲಂಬಿಸಿದ್ದಾರೆ. ಈ ಮೂಲಕ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕ ಏರಿಕೆಯಾಗುತ್ತಲೇ ಇದೆ.

ಇನ್ನು ಬೆಂಗಳೂರಿನಿಂದ ಮೈಸೂರಿನವರೆಗೂ ಮೆಟ್ರೋ ತರುವುದಾಗಿ ಸಂಸದ ಪ್ರತಾಪ್ ಸಿಂಹ ಕೂಡ ಹೇಳಿದ್ದರು. ಸರ್ಕಾರ ಕೂಡ ಮೈಸೂರುವರೆಗೆ ಮೆಟ್ರೋ ವಿಸ್ತರಣೆ ಮಾಡುವುದಾಗಿ ನಿರ್ಧರಿಸಿತ್ತು. ಆದರೆ ಈ ನಿರ್ಧಾರವನ್ನು ಮುಂದಾಲೋಚನೆ ಇಲ್ಲದೆ ಕೈಗೊಂಡಿದ್ದಾರೆ ಎನ್ನುವ ಕೂಗುಗಳು ಕೂಡ ಎದ್ದಿವೆ.
ಮೈಸೂರನ್ನು ಬೆಂಗಳೂರಿನ ಜೊತೆಗೆ ಹೋಲಿಕೆ ಮಾಡೋದು ಬೇಡ. ಏಕೆಂದರೆ ಸಾಂಸ್ಕೃತಿಕ ನಗರಿಯಲ್ಲಿ ಟ್ರಾಫಿಕ್ ಜಾಮ್ ಅಂತೂ ಇಲ್ವೆ ಇಲ್ಲ. ಈಗಿರುವ ವಾತಾವರಣವೇ ತುಂಬಾ ಚೆನ್ನಾಗಿದೆ. ಅಭಿವೃದ್ಧಿ ಮಾಡುತ್ತೇವೆ ಎಂದು ಮೆಟ್ರೋ ತಂದು ನಗರವನ್ನು ಹಾಳು ಮಾಡಬೇಡಿ ಎಂದು ಇಲ್ಲಿನ ಜನರು ಮನವಿ ಮಾಡುತ್ತಿದ್ದಾರೆ.
ಸುತ್ತಮುತ್ತಲಿನ ನಗರ, ಜಿಲ್ಲೆಗಳಿಂದ ಇಲ್ಲಿಗೆ ಬರಬೇಕೆಂದರೆ ರೈಲುಗಳ ವ್ಯವಸ್ಥೆಯಲ್ಲಿ ಏನು ಕೊರತೆಯಿಲ್ಲ. ಪ್ರತಿ ಗಂಟೆಗೊಂದರಂತೆ ರೈಲುಗಳಿವೆ. ಇಲ್ಲಿ ರಾಜಮಹರಾಜರ ಕಾಲದ ಪ್ರಸಿದ್ಧ ಸುಂದರ ಪ್ರವಾಸಿ ತಾಣಗಳಿದ್ದು, ಪ್ರತಿನಿತ್ಯವೂ ಸಾವಿರಾರು ಜನರು ರೈಲಿನ ಮೂಲಕವೇ ಬರುತ್ತಿರುತ್ತಾರೆ. ಆದ್ದರಿಂದ ಮೆಟ್ರೋ ಅವಶ್ಯಕತೆ ಇಲ್ಲ. ಒಂದು ವೇಳೆ ಮೆಟ್ರೋ ತರುವ ಯೋಚನೆ ಇದ್ದರೆ ಅದನ್ನು ಇಲ್ಲಿಗೆ ಕೈಬಿಟ್ಟುಬಿಡಿ ಅಂತಿದ್ದಾರೆ ಇಲ್ಲಿನ ಜನರು.
ಈಗಾಗಲೇ ಮೈಸೂರು ಚಾಮುಂಡಿ ಬೆಟ್ಟದ ಅಭಿವೃದ್ಧಿಗೂ ಕೂಡ ಹಣ ಬಿಡುಗಡೆ ಮಾಡುಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿನ ಜನರು ಇದಕ್ಕೂ ಕೂಡ ಒಪ್ಪುತ್ತಿಲ್ಲ. ಏಕೆಂದರೆ ಅಭಿವೃದ್ಧಿ ಮಾಡಿದರೆ, ಬೆಟ್ಟ ಕುಸಿಯುವ ಆತಂಕವಿದೆ. ಇದರಿಂದ ಇಲ್ಲಿನ ಜನರಿಗೆ ತುಂಬಾ ತೊಂದರೆಯಾಗಲಿದೆ. ಅಲ್ಲದೆ, ಈ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರಿಗೂ ತೊಂದರೆ ಆಗಲಿದೆ. ಆದ್ದರಿಂದ ಹೇಗೆ ಇದೆಯೋ ಹಾಗೆಯೇ ಬಿಡಿ. ಏನು ಮಾಡಬೇಡಿ ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ನಟ ಉಪೇಂದ್ರ ಅವರು ಕೂಡ ಈ ಹಿಂದೆ ಪ್ರತಿಕ್ರಿಯಿಸಿದ್ದು, "ಸಾಂಸ್ಕೃತಿಕ ನಗರಿ ಮೈಸೂರನ್ನು ಅಭಿವೃದ್ಧಿ ಮಾಡಬೇಡಿ. ಅದು ಹೇಗಿದೆಯೋ ಹಾಗೆಯೇ ಬಿಡಿ. ಈಗಾಗಲೇ ಅದು ಅಭಿವೃದ್ಧಿ ಹೊಂದಿದ ನಗರವಾಗಿದೆ," ಎಂದು ಹೇಳಿದ್ದರು.
ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಕಂಪನಿಗಳಿಗೆ ಹೋಗುವ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರಮುಖ ಸಾರಿಗೆಯಾಗಿದೆ. ಮೈಸೂರಿನಲ್ಲೂ ಕೂಡ ಮೆಟ್ರೋ ರೈಲು ಶೀಘ್ರದಲ್ಲೇ ಬರಲಿದೆ ಪ್ರತಾಪ್ ಸಿಂಹ ಅವರು ಇತ್ತೀಗಷ್ಟೇ ಹೇಳಿದ್ದರು.












Click it and Unblock the Notifications