ಜನಾದೇಶವನ್ನು ಗೌರವಿಸುತ್ತೇನೆ: ಯಡಿಯೂರಪ್ಪ

ಉಪಚುನಾವಣೆ ಸೋಲಿನ ಬಳಿಕೆ ಪ್ರತಿಕ್ರಿಯೆ ನೀಡಿದ ಬಿ ಎಸ್ ಯಡಿಯೂರಪ್ಪ, ಜನರ ಆದೇಶವನ್ನು ಗೌರವಿಸುವುದಾಗಿ ಹೇಳಿದ್ದಾರೆ.

ಮೈಸೂರು, ಏಪ್ರಿಲ್ 13: ನಂಜನಗೂಡು ಮತ್ತು ಗುಂಡ್ಲುಪೇಟೆ ಎರಡೂ ವಿಧಾನಸಭಾ ಕ್ಷೇತ್ರದ ಸೋಲಿನ ನಂತರ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ 'ಜನರ ಆದೇಶವನ್ನು ಗೌರವಿಸುತ್ತೇವೆ' ಎಂದಿದ್ದಾರೆ.
ಎರಡೂ ಕ್ಷೇತ್ರದ ಸೋಲು ಆಘಾತ ತಂದಿದೆ. ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಮತದಾರರ ಭಾವನೆಗಳನ್ನು ನಾವು ಗೌರವಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಹೇಳಿದ್ದಾರೆ.

'ಈ ಸಂದರ್ಭದಲ್ಲಿ ನಾನು ಯಾರನ್ನೂ ಟೀಕೆ ಮಾಡುವುದಕ್ಕೆ ಇಷ್ಟಪಡುವುದಿಲ್ಲ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷ ಗೆಲ್ಲುವುದ ಸಹಜ. ಇದು ಉಪಚುನಾವಣೆಯ ಗೆಲುವಷ್ಟೇ. ಸಾರ್ವತ್ರಿಕ ಚುನಾವಣೆಯ ಗೆಲುವಲ್ಲ' ಎಂದ ಅವರ ಮುಖದಲ್ಲಿ ಸತತ ಪ್ರಚಾರವೂ ಫಲ ಕೊಡದ ನಿರಾಶೆ ಕಾಣುತ್ತಿತ್ತು.[ನಂಜನಗೂಡಲ್ಲಿ ಕಾಂಗ್ರೆಸಿಗೆ ಭರ್ಜರಿ ಗೆಲುವು, ಮುಗ್ಗರಿಸಿದ ಬಿಜೆಪಿ]

We respect the judgement of the people: B.S.Yeddyurappa

ಇದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರ, ಯಡಿಯೂರಪ್ಪ ಮುಂದೆ ವಿಪಕ್ಷ ನಾಯಕರಾಗುತ್ತಾರೆ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಹಣದ ಬಲದಿಂದ ಹಾಗೆ ಮಾತನಾಡುತ್ತಿದ್ದಾರೆ. ಹೀಗೆ ಹಗುರವಾಗಿ ಮಾತನಾಡುವವರಿಗೆ ಜನರೇ ಪಾಠ ಕಲಿಸುತ್ತಾರೆ. ಉಪಚುನಾವಣೆಯಲ್ಲಿ ಸೋಲಾದರೂ, ಮಿ‌ಷನ್ 150 ಗೆ ಹಿನ್ನಡೆಯಾಗೋಲ್ಲ, ಸೋಲನ್ನು ನಾವು ಸವಾಲಾಗಿ ಸ್ವಿಕರಿಸುತ್ತೇವೆ' ಎಂದಿದ್ದಾರೆ.[ಬಯ್ದಾಡಿ ಸೋತ ಶ್ರೀನಿವಾಸ್ ಪ್ರಸಾದ್, ಸುಮ್ಮನಿದ್ದು ಗೆದ್ದ ಸಿದ್ದರಾಮಯ್ಯ]

ಏಪ್ರಿಲ್ 9 ರಂದು ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪಚುನಾವಣೆಯ ಫಲಿತಾಂಶ ಇಂದು(ಏಪ್ರಿಲ್ 13) ಪ್ರಕಟವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+