ಮಂಗಳೂರು ಚಲೋ: ಮೈಸೂರಿನಲ್ಲಿ ಬಂಧನದ ಎಚ್ಚರಿಕೆ

ಮೈಸೂರು, ಸೆಪ್ಟೆಂಬರ್ 5: "ಬಿಜೆಪಿ ಯುವ ಮೋರ್ಚಾ ಸೆ. 6 ರಂದು ಮೈಸೂರು ಕೋಟೆ ಆಂಜನೇಯ ದೇವಸ್ಥಾನದಿಂದ ಬೈಕ್ ರ್ಯಾಲಿಗೆ ಅವಕಾಶ ಕೇಳಿದ್ದು, ಆದರೆ ಪತ್ರ ಗಮನಿಸಿದಾಗ ಅವರು ತೆರಳುವ ಸ್ಥಳಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಅಂಶಗಳು ಕಂಡಿವೆ. ಈ ಬಗ್ಗೆ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದೇವೆ. ಅದಕ್ಕೆ ಸರಿಯಾದ ಉತ್ತರ ಬಂದಿಲ್ಲ ಅದಕ್ಕೆ ಅವಕಾಶ ನೀಡಿಲ್ಲ" ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ. ಸುಬ್ರಮಣ್ಯೇಶ್ವರ ರಾವ್ ಹೇಳಿದ್ದಾರೆ.

In Pics : ಮಂಗಳೂರು ಚಲೋ rallyಯನ್ನು ಬುಡದಲ್ಲೇ ಹೊಸಕಿದ ಕಾಂಗ್ರೆಸ್

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಪೊಲೀಸ್ ಆಕ್ಟ್ 1963 , 33, 34 ಅಧಿನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸೆ.6ರ ಬೆಳಿಗ್ಗೆ 6 ರಿಂದ ಸೆ.8 ಬೆಳಿಗ್ಗೆ 6 ರವರೆಗೆ ಮೈಸೂರು ನಗರದಾದ್ಯಂತ 144 ಸೆಕ್ಷನ್ ಜಾರಿಯಲ್ಲಿರಲಿದೆ."

We do not give permission for Mangaluru Chalo rally: Mysuru city commissioner

"1000 ಬೈಕ್ ಒಂದೇ ಭಾರಿ ರಸ್ತೆಗೆ ಇಳಿಯುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಇದರ ಬಗ್ಗೆ ಮುಖಂಡರು ಜವಾಬ್ದಾರಿ ತೆಗೆದುಕೊಂಡಿಲ್ಲ. ಹಿಂದೆ ಕೂಡ ಬೈಕ್ ರ್ಯಾಲಿಗೆ ಅವಕಾಶ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ" ಎಂದರು.

"ಮೈಸೂರು ಪೊಲೀಸ್ ಬಲ 3000 ಇದೆ. 1000 ಸಾವಿರ ಬೈಕ್ ತಡೆಯೋದು ಕಷ್ಟ ಆಗಲ್ಲ."

"ಆದಾಗ್ಯೂ ಆಗುವ ತೊಂದರೆಗೆ ಮುಖ್ಯಸ್ಥರೇ ಹೊಣೆ ಆಗುತ್ತಾರೆ. ಬೈಕ್ ಮೇಲೆ ಪ್ರಕರಣ, ಯುವಕರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಆಯೋಜಕರ ಮೇಲೆ ಐಟಿಗೆ ಕೂಡ ದೂರು ಕೊಡಲಾಗುತ್ತದೆ. ಬಂಧಿಸಿದವರನ್ನು ಜೈಲಿಗೆ ಕಳಿಸುವ ವ್ಯವಸ್ಥೆ ಕೂಡ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+