ಮತ್ತೆ ಸ್ಯಾಂಡಲ್ ವುಡ್ ಗುಂಪಿನ ಬಗ್ಗೆ ಮಾತೆತ್ತಿದ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ
ಮೈಸೂರು, ಫೆಬ್ರವರಿ 07: "ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿವೆ" ಎಂದು ಮಾಜಿ ಸಿಎಂ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ.
ಇಂದು ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದರು.

"ಸ್ಯಾಂಡಲ್ ವುಡ್ ನಲ್ಲಿ ಪ್ರತ್ಯೇಕ ಗುಂಪೊಂದು ಎಲ್ಲವನ್ನೂ ನಿಯಂತ್ರಿಸುತ್ತಿತ್ತು. ನಾನು ಧೈರ್ಯವಾಗಿ ಮಾಧ್ಯಮದ ಮುಂದೆ ಈ ಹಿಂದೆಯೇ ಇದನ್ನೆಲ್ಲಾ ಹೇಳಿದ್ದೇನೆ. ಈಗ ಆ ಗುಂಪು ಒಡೆದಿದೆ. ನಮಗೆ ಅವಕಾಶಗಳು ಸಿಗುತ್ತಿವೆ. ಅಭಿಮಾನಿಗಳು ನಮ್ಮ ನಟನೆಗಾಗಿ ಕಾಯುತ್ತಿದ್ದಾರೆ. ಆದರೂ ಕೆಲವರು ನಮಗೆ ಅವಕಾಶ ಮಾಡಿಕೊಡುತ್ತಿಲ್ಲ" ಎಂದು ಅಸಮಾಧಾನ ಹೇಳಿಕೊಂಡಿದ್ದಾರೆ.












Click it and Unblock the Notifications